ಮೈಸೂರು :ವಾಯು ಮಾಲಿನ್ಯ ತಡೆಗಟ್ಟೆ, ಪರಿಸರ ಉಳಿಸಿ ಬೆಳೆಸಿ ಹೀಗೆ ಹಲವು ಸಂದೇಶಗಳನ್ನು ಚಿಣ್ಣರು ತಮ್ಮ ಚಿತ್ರಕಲೆಯ ಮೂಲಕ ಸಾರಿ ಪರಿಸರ ಪ್ರೇಮ ಮೆರೆದರು.
ಚಿಣ್ಣರ ಕುಂಚದಲ್ಲಿ ಅರಳಿದ ಪರಿಸರ ಪ್ರೇಮ - ಮೈಸೂರು ಅರಣ್ಯ ಇಲಾಖೆ
ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಮಕ್ಕಳಿಗೆ ಪರಿಸರದ ಮಹತ್ವ ತಿಳಿಸುವ ಸಲುವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಕ್ಕಳು ತಮ್ಮ ಕುಂಚದ ಮೂಲಕ ವಾಯು ಮಾಲಿನ್ಯ ಕುರಿತು ಸಂದೇಶ ಸಾರುವ ಚಿತ್ರಗಳನ್ನು ಬಿಡಿಸಿ ಜಾಗೃತಿ ಮೂಡಿಸಿದರು.
ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಚಿತ್ರಕಲಾ ಸ್ಪರ್ಧೆ
ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಮಕ್ಕಳಿಗೆ ಪರಿಸರದ ಮಹತ್ವ ತಿಳಿಸುವ ಸಲುವಾಗಿ, ಮೈಸೂರು ಅರಣ್ಯ ಇಲಾಖೆ, ಮ್ಯಾಥ್ ಜ್ಯೂನಿಯರ್ ಸಂಘದ ಸಹಯೋಗದಲ್ಲಿ ನಗರದ ರಾಮಕೃಷ್ಣನಗರ ಲಿಂಬಾಬುಧಿ ಪಾರ್ಕ್ನಲ್ಲಿ ಚಿತ್ರಕಲಾ ಸ್ಪರ್ಧೆಯನ್ನು ಏರ್ಪಡಿಸಿದ್ದರು.
5 ವರ್ಷದಿಂದ 15 ವರ್ಷದೊಳಗಿನ 250 ಮಕ್ಕಳು ಸ್ಪರ್ಧೆಯಲ್ಲಿ ಭಾಗವಹಿಸಿ ವಾಯು ಮಾಲಿನ್ಯ ಕುರಿತು ಸಂದೇಶ ಸಾರುವ ಚಿತ್ರಗಳನ್ನು ತಮ್ಮ ಕುಂಚದ ಮೂಲಕ ಬಿಡಿಸಿ ಜಾಗೃತಿ ಮೂಡಿಸಿದರು.