ಕರ್ನಾಟಕ

karnataka

ETV Bharat / state

ಮೈಸೂರಿನಲ್ಲಿ ಫೇಸ್​ಬುಕ್​ ಪೋಸ್ಟ್​ನಿಂದ ನಿಂತ ಬಾಲ್ಯವಿವಾಹ! ನಡೆದಿದ್ದಾದರೂ ಏನು? - ಮೈಸೂರು ಸುದ್ದಿ

ಮೈಸೂರು ಜಿಲ್ಲೆಯ ಜಯಪುರ ಹೋಬಳಿಯ ಗ್ರಾಮಯೊಂದರಲ್ಲಿ ಅಪ್ರಾಪ್ತೆ ಬಾಲಕಿಯನ್ನು ವಿವಾಹ ಮಾಡಲು ಪ್ರಯತ್ನಿಸುತ್ತಿದ್ದ ಕುಟುಂಬದವರಿಗೆ ತಿಳಿ ವಳಿಕೆ ನೀಡುವ ಮೂಲಕ ಬಾಲ್ಯವಿವಾಹವನ್ನು ನಿಲ್ಲಿಸಲಾಗಿದೆ.

child-marriage-stopped
child-marriage-stopped

By

Published : Jan 28, 2020, 4:39 PM IST

ಮೈಸೂರು: ಸಾಮಾಜಿಕ ಜಾಲತಾಣಗಳು ಕೇವಲ ಟೈಮ್​ಪಾಸ್​ ಮಾಡಲು ಮಾತ್ರವಲ್ಲ, ಸಮಾಜದಲ್ಲಿನ ಪಿಡುಗುಗಳನ್ನು ಹೊಗಲಾಡಿಸಲು ಸಹ ಬಳಸಲಾಗುತ್ತದೆ ಎಂಬುದನ್ನು ಮೈಸೂರಿನ ಯುವಕರು ಸಾಬೀತು ಮಾಡಿದ್ದಾರೆ.

ಹೌದು, ಜಿಲ್ಲೆಯ ಜಯಪುರ ಹೋಬಳಿಯ ಗ್ರಾಮಯೊಂದರಲ್ಲಿ 7ನೇ ತರಗತಿ ವ್ಯಾಸಂಗ ಮಾಡುತ್ತಿದ್ದ ಬಾಲಕಿಗೆ ಬಲವಂತವಾಗಿ ಮಾಡಲು ಹೊರಟ್ಟಿದ್ದ ಬಾಲ್ಯ ವಿವಾಹವನ್ನು, ತನ್ನ ಸ್ನೇಹಿತರಿಗೆ ತಿಳಿಸಿದ್ದಳು, ಅದನ್ನು ಫೇಸ್​ಬುಕ್​ನಲ್ಲಿ ಪೋಸ್ಟ್​ ಮಾಡಿದ ಪರಿಣಾಮ, ಇಂದು ಅಪ್ರಾಪ್ತೆ ಬಾಲಕಿಯನ್ನು ವಿವಾಹ ಮಾಡಲು ಪ್ರಯತ್ನಿಸುತ್ತಿದ್ದ ಕುಟುಂಬದವರಿಗೆ ತಿಳಿವಳಿಕೆ ನೀಡುವ ಮೂಲಕ ಬಾಲ್ಯವಿವಾಹವನ್ನು ಯಶಸ್ವಿಯಾಗಿ ತಡೆಯಲಾಯಿತು.

ಫೇಸ್​ಬುಕ್​ನಲ್ಲಿ ಪೋಸ್ಟ್ ನೋಡಿದ ಜಯಪುರ ಪೊಲೀಸರು ಮತ್ತು ಶಿಶು ಅಭಿವೃದ್ಧಿ ಯೋಜನಾಧಿಕಾರಿ(ಸಿಡಿಪಿಒ) ಅಧಿಕಾರಿಗಳ ತಂಡ ಗ್ರಾಮಕ್ಕೆ ತೆರಳಿ ಬಾಲ್ಯವಿವಾಹದ ಕುರಿತು ಕಾನೂನು ಅರಿವು ಮೂಡಿಸಿ, ಯುವತಿಗೆ 18 ವರ್ಷ ತುಂಬುವವರೆಗೆ ಮದುವೆ ಮಾಡದಂತೆ ಬುದ್ದಿಮಾತು ಹೇಳಿದ್ದಾರೆ.

ABOUT THE AUTHOR

...view details