ಕರ್ನಾಟಕ

karnataka

ETV Bharat / state

ವಿವಿಧ ಕಾಮಗಾರಿಗೆ ಚಾಲನೆ: ಸಾಂಸ್ಕೃತಿಕ ನಗರಿಗೆ ಸಿಎಂ - ನಂಜನಗೂಡಿನ ಶ್ರೀಕಂಠೇಶ್ವರ ದೇವಸ್ಥಾನ

ವಿವಿಧ ಕಾಮಗಾರಿಗೆ ಚಾಲನೆ ನೀಡಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮೈಸೂರಿಗೆ ಆಗಮಿಸಲಿದ್ದಾರೆ.

chief minister travels to mysore drive to work
ವಿವಿಧ ಕಾಮಗಾರಿಗೆ ಚಾಲನೆ: ಸಾಂಸ್ಕೃತಿಕ ನಗರಿಗೆ ಸಿಎಂ

By

Published : Nov 27, 2022, 11:01 PM IST

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿಗೆ ಸಿಎಂ ಬಸವರಾಜ ಬೊಮ್ಮಾಯಿ ಸೋಮವಾರ ಬೆಳಗ್ಗೆ 10.55ಕ್ಕೆ ಮೈಸೂರು ವಿಮಾನ ನಿಲ್ದಾಣಕ್ಕೆ ಆಗಮಿಸಿ, ಅಲ್ಲಿಂದ 11.15ಕ್ಕೆ ನಂಜನಗೂಡಿನ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಲಿದ್ದಾರೆ. ನಂತರ ಶ್ರೀಕಂಠೇಶ್ವರ ದೇವಸ್ಥಾನದ ಮುಂಭಾಗ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡುತ್ತಾರೆ ಎಂದು ತಿಳಿದುಬಂದಿದೆ.

ಬಳಿಕ ಮಧ್ಯಾಹ್ನ 3ಕ್ಕೆ ಕಲಾಮಂದಿರದಲ್ಲಿ ನಡೆಯಲಿರುವ ಮೈಸೂರು ಪೇಯಿಂಟ್ಸ್ ಆ್ಯಂಡ್​ ವಾರ್ನಿಷ್ ಲಿ.,ಸಂಸ್ಥೆಯ 75ನೇ ಅಮೃತ ಮಹೋತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ.

ವಿವಿಧ ಕಾಮಗಾರಿಗೆ ಚಾಲನೆ: ಸಾಂಸ್ಕೃತಿಕ ನಗರಿಗೆ ಸಿಎಂ

ಸಂಜೆ 4ಕ್ಕೆ ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ವಿವಿಧ ಕಟ್ಟಡ ಉದ್ಘಾಟನೆ ಮಾಡಿ, ಸಂಜೆ 5.30ಕ್ಕೆ ಮೈಸೂರಿನಿಂದ ಹೊರಟು, 6.05ಕ್ಕೆ ಬೆಂಗಳೂರಿನ ಎಚ್​ಎಎಲ್​ ವಿಮಾನ ನಿಲ್ದಾಣ ತಲುಪಲಿದ್ದಾರೆ.

ಸಂಚಾರ ಬದಲಾವಣೆ:ನಂಜನಗೂಡಿನ ಶ್ರೀಕಂಠೇಶ್ವರ ದೇವಸ್ಥಾನದ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಉದ್ಘಾಟನೆ ಮಾಡಲು ಮುಖ್ಯಮಂತ್ರಿ ಬೊಮ್ಮಾಯಿ ಅವರು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ, ಸಾರ್ವಜನಿಕರ ಸುಗಮ ಸಂಚಾರದ ಸಲುವಾಗಿ ನಂಜನಗೂಡು ಪಟ್ಟಣದ ಮಾರ್ಗವಾಗಿ ಸಂಚರಿಸುವ ಭಾರಿ ವಾಹನಗಳ ಮಾರ್ಗವನ್ನು ಬೆಳಗ್ಗೆ 8ರಿಂದ ಮಧ್ಯಾಹ್ನದ 2ರವರೆಗೆ ಬದಲಾವಣೆ ಮಾಡಲಾಗಿದೆ ಎಂದು ಪ್ರಕಟಣೆ ಮೂಲಕ ತಿಳಿಸಲಾಗಿದೆ.

ಬದಲಾವಣೆ ಮಾರ್ಗ:ಚಾಮರಾಜನಗರ ಕಡೆಯಿಂದ ಮೈಸೂರಿಗೆ ಹೋಗುವ ಬಸ್ಸು, ಲಾರಿ ಹಾಗೂ ಇತರೆ ಭಾರಿ ವಾಹನಗಳು ಗೋಳೂರು ಕ್ರಾಸ್-ತಿ.ನರಸೀಪುರ ರಸ್ತೆ. ಸುತ್ತೂರು ಹೊಸಕೋಟೆ ಮೂಲಕ ಮೈಸೂರಿಗೆ ಹೋಗುವುದು ಮೈಸೂರಿನಿಂದ ಚಾಮರಾಜನಗರಕ್ಕೆ ತೆರಳುವ ಬಸ್ಸು, ಲಾರಿ ಹಾಗೂ ಇತರೆ ಭಾರಿ ವಾಹನಗಳು ತಿ.ನರಸೀಪುರ-ಮೂಗೂರು-ಸಂತೇಮರಳ್ಳಿ ಮಾರ್ಗವಾಗಿ ಚಾಮರಾಜನಗರಕ್ಕೆ ಸಂಚರಿಸುವುದು. ಇನ್ನುಳಿದಂತೆ ಬೈಕ್ ಕಾರಿನಂತಹ ಹಾಗೂ ಇತರೆ ಲಘು ವಾಹನಗಳು, ದಿನನಿತ್ಯದ ಮಾರ್ಗದಲ್ಲಿ ಸಂಚರಿಸಬಹುದಾಗಿದೆ.

ಇದನ್ನೂ ಓದಿ:ಮಹಾರಾಷ್ಟ್ರ ಗಡಿ ವಿವಾದ: ನೆಲ, ಗಡಿ ರಕ್ಷಣೆಗೆ ಕಾನೂನು ಹೋರಾಟ ಮಾಡಲು ಸಿದ್ಧವೆಂದ ಸಿಎಂ

ABOUT THE AUTHOR

...view details