ಕರ್ನಾಟಕ

karnataka

ETV Bharat / state

ನಿಖಿಲ್​ ತಂದೆಯಾಗಿ ಅಲ್ಲ, ಸಿಎಂ ಆಗಿ ಕೆಲ್ಸ ಮಾಡಿ... ಹೆಚ್​ಡಿಕೆ ವಿರುದ್ಧ  ಸುರೇಶ್ ಕುಮಾರ್ ವಾಗ್ದಾಳಿ - Mysore

ಮೈತ್ರಿ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದರುವ ಶಾಸಕ ಸುರೇಶ್ ಕುಮಾರ್, ನಮ್ಮ ರಾಜ್ಯದಲ್ಲಿ ಮುಖ್ಯಮಂತ್ರಿ ಇದ್ದಾರೋ ಇಲ್ಲವೋ ಎಂಬ ಪ್ರಶ್ನೆ  ಮೂಡುತ್ತಿದೆ ಎಂದಿದ್ದಾರೆ.

ಮೈತ್ರಿ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ ಶಾಸಕ ಸುರೇಶ್ ಕುಮಾರ್

By

Published : Apr 4, 2019, 1:49 PM IST

Updated : Apr 4, 2019, 1:56 PM IST

ಮೈಸೂರು:ಮುಖ್ಯಮಂತ್ರಿಗಳು ನಮ್ಮ ರಾಜ್ಯದಲ್ಲಿರುವುದು ಮಂಡ್ಯ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ನಿಖಿಲ್​ ಕುಮಾರಸ್ವಾಮಿಯ ತಂದೆಯಾಗಿ ಮಾತ್ರ ಎಂದು ಮಾಜಿ ಸಚಿವ ಹಾಗೂ ಹಾಲಿ ಶಾಸಕ ಸುರೇಶ್ ಕುಮಾರ್ ವ್ಯಂಗ್ಯವಾಡಿದ್ದಾರೆ.

ಮೈತ್ರಿ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ ಶಾಸಕ ಸುರೇಶ್ ಕುಮಾರ್

ಮೈಸೂರಿನ ನ್ಯಾಯಾಲಯದ ಆವರಣದಲ್ಲಿ ಇಂದು ಬಿಜೆಪಿ ಅಭ್ಯರ್ಥಿ ಪ್ರತಾಪ್​ ಸಿಂಹ ಅವರ ಪರ ಮತಯಾಚನೆ ಮಾಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ರಾಜ್ಯದಲ್ಲಿ ಮುಖ್ಯಮಂತ್ರಿ ಇದ್ದಾರೋ ಇಲ್ಲವೋ ಎಂಬ ಪ್ರಶ್ನೆ ಮೂಡುತ್ತದೆ. ನಮ್ಮ ರಾಜ್ಯದಲ್ಲಿರುವುದು ಮಂಡ್ಯ ಲೋಕಸಭಾ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರ ತಂದೆಯಾಗಿ ಮಾತ್ರ ಇದ್ದಾರೆ ಎಂದು ವಾಗ್ದಾಳಿ ನೆಡೆಸಿದರು.

ರಾಜ್ಯದಲ್ಲಿ ನೀರಿನ ಹಾಹಾಕಾರ ಸೇರಿದಂತೆ ಬೇರೆ ಬೇರೆ ಸಮಸ್ಯೆಗಳಿವೆ. ಆ ಕಡೆ ಮುಖ್ಯಮಂತ್ರಿ ಕುಮಾರಸ್ವಾಮಿ ಗಮನ ಹರಿಸಬೇಕು. ಕೇವಲ ಮಂಡ್ಯದಲ್ಲಿ ನಿಖಿಲ್ ತಂದೆಯಾಗಿ ಕೆಲಸ ಮಾಡಿದರೆ ಸಾಲದು, ರಾಜ್ಯದ ಮುಖ್ಯಮಂತ್ರಿಯಾಗಿ ಕೆಲಸ ಮಾಡಬೇಕು ಎಂದು ಕುಮಾರಸ್ವಾಮಿ ಅವರಿಗೆ ಮನವಿ ಮಾಡಿದರು.

ಇನ್ನು ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ವಿರುದ್ಧವಾಗಿ ಬಳಸುತ್ತಿರುವ ಪದ ಸರಿಯಾಗಿಲ್ಲ. ಅವರ ಬಗ್ಗೆ ಗೌರವದಿಂದ ಮಾತನಾಡಿ ಎಂದು ತಿಳಿಹೇಳಿದರು.

Last Updated : Apr 4, 2019, 1:56 PM IST

ABOUT THE AUTHOR

...view details