ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಕ್ಷಣಗಣನೆ ಪ್ರಾರಂಭವಾಗಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಸೇರಿದಂತೆ ಹಲವು ಗಣ್ಯರು ಭಾನುವಾರ ರಾತ್ರಿ ಸಿಟಿ ರೌಂಡ್ಸ್ ಹಾಕಿ ನಗರದ ದೀಪಾಲಂಕಾರ ಸೇರಿದಂತೆ ಮತ್ತಿತರೆ ಸಿದ್ಧತೆ ಪರಿಶೀಲಿಸಿದರು.
ರಾತ್ರಿ 10:30 ರ ಸುಮಾರಿಗೆ ವಿದ್ಯಾಪೀಠ ಸರ್ಕಲ್ನಿಂದ ಪ್ರವಾಸೋದ್ಯಮ ನಿಗಮದ ಅಂಬಾರಿ ಓಪನ್ ಏರ್ ಬಸ್ ಮೂಲಕ ಸಿಟಿ ರೌಂಡ್ಸ್ ಹಾಕಿದ ಸಿಎಂ, ಹಾರ್ಡಿಂಗ್ ಸರ್ಕಲ್, ಜಯಚಾಮರಾಜೇಂದ್ರ ಒಡೆಯರ್ ಸರ್ಕಲ್, ಕೆ.ಆರ್. ಸರ್ಕಲ್, ಸಯ್ಯಾಜಿ ರಾವ್ ರಸ್ತೆ ಮೂಲಕ ಹೈವೇ ಸರ್ಕಲ್ವರೆಗೆ ಸಾಗಿ ಹಿಂದಿರುಗಿದರು.
ಸಿಟಿ ರೌಂಡ್ಸ್ ಹಾಕಿ ದೀಪಾಲಂಕಾರ ವೀಕ್ಷಿಸಿದ ಸಿಎಂ ಇದನ್ನೂ ಓದಿ:ಇಂದು ರಾಷ್ಟ್ರಪತಿ ಮುರ್ಮುರಿಂದ ನಾಡಹಬ್ಬ ದಸರಾಗೆ ಚಾಲನೆ.. ವೈವಿಧ್ಯಮಯ ಕಾರ್ಯಕ್ರಮಗಳ ವಿವರ
ಹಿಂದಿರುಗುವಾಗ ಆಯುರ್ವೇದಿಕ್ ಆಸ್ಪತ್ರೆಯಿಂದ ಬಲಕ್ಕೆ ಹೋಗಿ ರೈಲ್ವೆ ನಿಲ್ದಾಣ, ಮೆಟ್ರೊಪೋಲೊ ಸರ್ಕಲ್, ಹುಣಸೂರು ರಸ್ತೆ ಕಡೆಗೆ ತಿರುಗಿ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಶಾಲೆ ಮೂಲಕ ಚಾಮರಾಜ ಜೋಡಿ ರಸ್ತೆ ಹಾಗೂ ವಿದ್ಯಾಪೀಠ ಸರ್ಕಲ್ ವರೆಗೆ ತೆರಳಿ ಸಕಲ ಸಿದ್ಧತೆಯನ್ನು ವೀಕ್ಷಿಸಿದರು.
ಈ ಸಂದರ್ಭದಲ್ಲಿ ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ, ಸಹಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್, ಇಂಧನ ಸಚಿವರಾದ ಸುನೀಲ್ ಕುಮಾರ್ ಸೇರಿದಂತೆ ಹಲವು ಗಣ್ಯರು ಮೈಸೂರು ನಗರದ ದೀಪಾಲಂಕಾರವನ್ನು ಕಣ್ತುಂಬಿಕೊಂಡರು.