ಕರ್ನಾಟಕ

karnataka

ETV Bharat / state

ದೇಶ ಹಿಂದೂ ರಾಷ್ಟ್ರವಾಗಿ ಉಳಿಯಲು ಶಿವಾಜಿ ಮಹಾರಾಜರ ಕೊಡುಗೆ ಬಹಳಷ್ಟಿದೆ:ಶಾಸಕ ಎಲ್ ನಾಗೇಂದ್ರ - etv bharat kannada

ಶಿವಾಜಿಯವರ ಜನನ ಈ ದೇಶದಲ್ಲಿ ಆಗಿರದಿದ್ದರೆ ಭಾರತ ದೇಶದ ರೂಪರೇಷೆ ಬೇರೆಯೇ ಇರುತ್ತಿತ್ತು - ಶಿವಾಜಿ ಪರಂಪರೆಯ ಜನರು ಶೈಕ್ಷಣಿಕವಾಗಿ ಆರ್ಥಿಕವಾಗಿ ಮೇಲೆ ಬರಬೇಕು - ಶಾಸಕ ಎಲ್ ನಾಗೇಂದ್ರ ಹೇಳಿಕೆ.

Chhatripati Shivaji Maharaj Jayanti in mysuru
ದೇಶ ಹಿಂದೂ ರಾಷ್ಟ್ರವಾಗಿ ಉಳಿಯಲು ಶಿವಾಜಿ ಮಹಾರಾಜರ ಕೊಡುಗೆ ಬಹಳಷ್ಟಿದೆ:ಶಾಸಕ ಎಲ್ ನಾಗೇಂದ್ರ

By

Published : Feb 19, 2023, 11:09 PM IST

ಮೈಸೂರು: ಭಾರತ ದೇಶದ ಇತಿಹಾಸಕ್ಕೆ ಹಾಗೂ ದೇಶ ಹಿಂದೂ ರಾಷ್ಟ್ರವಾಗಿ ಉಳಿಯಲು ಶಿವಾಜಿ ಮಹಾರಾಜರ ಕೊಡುಗೆ ಬಹಳಷ್ಟಿದೆ ಎಂದು ಚಾಮರಾಜ ಕ್ಷೇತ್ರದ ಶಾಸಕ ಎಲ್ ನಾಗೇಂದ್ರ ಹೇಳಿದರು. ನಗರದ ಕಲಾಮಂದಿರದಲ್ಲಿ ಜಿಲ್ಲಾಡಳಿತ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯನ್ನು ಉದ್ಘಾಟಿಸಿ ಮಾತನಾಡಿದ ಅವರು ಶಿವಾಜಿಯವರ ಜನನ ಈ ದೇಶದಲ್ಲಿ ಆಗಿರದಿದ್ದರೆ ಭಾರತ ದೇಶದ ರೂಪರೇಷೆ ಬೇರೆಯೇ ಇರುತ್ತಿತ್ತು ಎಂದು ಅಭಿಪ್ರಾಯಪಟ್ಟರು.

ಸ್ವಾಭಿಮಾನದ ಶ್ರೀಮಂತಿಕೆಯಿರುವ ಶಿವಾಜಿ ಪರಂಪರೆಯ ಜನರು ಶೈಕ್ಷಣಿಕವಾಗಿ ಆರ್ಥಿಕವಾಗಿ ಮೇಲೆ ಬರಬೇಕು. ರಾಜಕೀಯವಾಗಿ ಬೆಳೆಯಬೇಕು ಹಾಗೂ ಉನ್ನತ ಹುದ್ದೆಗಳನ್ನು ಏರಬೇಕು. ಇದಕ್ಕೆ ಬೇಕಾದ ಸೌಲಭ್ಯವನ್ನು ಸರ್ಕಾರದಿಂದ ಕೊಡಿಸುವಲ್ಲಿ ನಾನು ಶ್ರಮಿಸುತ್ತೇನೆ. ಈ ಸಮಾಜವನ್ನು 3ಆ ಯಿಂದ 2ಅ ಗೆ ತರುವ ನಿಮ್ಮ ಬೇಡಿಕೆಯನ್ನು ಸ್ವೀಕರಿಸುತ್ತಾ ಇದನ್ನು ಸರ್ಕಾರದ ಗಮನಕ್ಕೆ ತರುವ ಕೆಲಸ ಮಾಡುತ್ತೇನೆ ಎಂದು ಆಶ್ವಾಸನೆ ನೀಡಿದರು.

ಶಿವಾಜಿ ಕೇವಲ ಒಂದು ಜಾತಿಗೆ ಸೀಮಿತವಾದವರಲ್ಲ:ಮೇಯರ್ ಶಿವಕುಮಾರ್ ಮಾತನಾಡಿ, 500 ವರ್ಷಗಳ ನಂತರ ಶಿವಾಜಿ ಬಂದ ಮೇಲೆ ದೆಹಲಿಯಲ್ಲಿ ಹಿಂದೂ ಧ್ವಜದ ಹಾರಾಟ ಸಾಧ್ಯವಾಗಿತ್ತು. ನಾವು ಹಿಂದುಗಳಾಗಿ ಉಳಿದಿರುವುದು ಮತ್ತು ಹಿಂದುತ್ವದ ಧ್ವಜದ ಹಾರಾಟ ಸಾಧ್ಯವಾಗಿರುವುದು ಶಿವಾಜಿ ಮಹಾರಾಜರಿಂದ ಎಂದರು.

ಜಗತ್ತಿನ ಶ್ರೇಷ್ಠ ವೀರರಲ್ಲಿ ಶಿವಾಜಿಯೂ ಒಬ್ಬರು. ಛತ್ರಪತಿ ಶಿವಾಜಿ ಮಹಾರಾಜರು ಇಲ್ಲದಿದ್ದರೆ ಕಾಶಿಗೆ ಕಳೆ ಇರುತ್ತಿರಲ್ಲಿಲ್ಲ ಎಂದು ದೆಹಲಿಯ ಪರಮಾನಂದ ಎಂಬ ಕವಿ ತಮ್ಮ ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ. ಶಿವಾಜಿ ಕೇವಲ ಒಂದು ಜಾತಿಗೆ ಸೀಮಿತವಾದವರಲ್ಲ. ಹಿಂದೂ ಧರ್ಮ ಉಳಿಸಲು ಹೋರಾಡಿದವರು. ಮೈಸೂರಿನಲ್ಲಿ ಶಿವಾಜಿ ಮಹಾರಾಜರ ಪುತ್ಥಳಿಯನ್ನು ಸ್ಥಾಪಿಸುವ ನಿಮ್ಮ ಮನವಿಯನ್ನು ಸ್ವೀಕರಿಸುತ್ತಾ ಮಹಾನಗರ ಪಾಲಿಕೆಯಿಂದ ಸಾಧ್ಯವಾಗುವ ಕೆಲಸವನ್ನು ನಾವು ಮಾಡುತ್ತೇವೆ ಎಂದು ತಿಳಿಸಿದರು.

ಹಿಂದುತ್ವ ರಕ್ಷಿಸಿದವರಲ್ಲಿ ಛತ್ರಪತಿ ಶಿವಾಜಿ ಮಹಾರಾಜರು ಪ್ರಮುಖರು:ಕಾರ್ಯಕ್ರಮಕ್ಕೆ ಮುಖ್ಯ ಭಾಷಣಕಾರರಾಗಿ ಆಗಮಿಸಿದ್ದ ಆಕಾಶವಾಣಿಯ ನಿವೃತ್ತ ಕಾರ್ಯಕ್ರಮ ಅಧಿಕಾರಿ, ರಂಗಕರ್ಮಿ, ನಾಟಕಕಾರ ಹಾಗೂ ನಿರ್ದೇಶಕರಾದ ಎನ್ ವಿ ರಮೇಶ್ ರವರು ಮಾತನಾಡಿ ದೇಶದಲ್ಲಿ ಹಿಂದುತ್ವ ರಕ್ಷಿಸಿದವರಲ್ಲಿ ಛತ್ರಪತಿ ಶಿವಾಜಿ ಮಹಾರಾಜರು ಪ್ರಮುಖರು ಎಂದರು.

ಭಾರತದ ಸಂಸ್ಕೃತಿ ಐಕ್ಯತೆಗೆ ಕೊಡುಗೆ ಕೊಟ್ಟ ಶಿವಾಜಿ ಯವರು ಮರಾಠ ಸಾಮ್ರಾಜ್ಯದ ಸಂಸ್ಥಾಪಕರು. 1674ರಲ್ಲಿ ಪಟ್ಟಾಭಿಷೇಕವಾದ ಮೇಲೆ ಹಿಂದುಸ್ತಾನ ಒಗ್ಗೂಡಿಸುವಲ್ಲಿ ಶ್ರಮಿಸಿದರು. ಧಾರ್ಮಿಕ ಚಿಂತನೆಗಳನ್ನು ಭೋದಿಸಿದ್ದ ತಾಯಿ ಜೀಜಾಬಾಯಿ, ಸದಾ ಸತ್ಯಕ್ಕೆ ಹೋರಾಡು, ಯಾವುದೇ ಆಹ್ವಾನಕ್ಕಾಗಿ ಆಸೆಪಡಬೇಡ, ನಿರ್ಭೀತನಾಗಿರು ಎನ್ನುತ್ತಾ ಆದರ್ಶದಪ್ರಾಯ ಕಥೆಗಳನ್ನು ಹೇಳುತ್ತಿದ್ದರು. ಇದರಿಂದ ಛತ್ರಪತಿ ಶಿವಾಜಿ ಚಿಕ್ಕವಯಸ್ಸಿನಿಂದಲೇ ರಾಜನಾಗಬೇಕೆಂಬ ಆಸೆಯನ್ನು ಹೊಂದಿದ್ದರು ಎಂದು ಹೇಳಿದರು.

ಇತರರು ತಿಳಿದಿರುವ ಹಾಗೆ ಶಿವಾಜಿ ಮುಸ್ಲಿಂ ವಿರೋಧಿ ಅಲ್ಲ ಈತನ ಆಸ್ಥಾನದಲ್ಲಿ ಈ ಹಲವಾರು ಧರ್ಮದವರಿದ್ದರು. ಧಾರ್ಮಿಕ ಯುದ್ಧವನ್ನು ಶಿವಾಜಿ ಪ್ರಚೋದಿಸುತ್ತಿರಲಿಲ್ಲ. ಈತನ ಕಾಲದಲ್ಲಿ ಮರಾಠಿ ಹಾಗೂ ಸಂಸ್ಕೃತಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಿದ್ದರು. ಕಬ್ಬಿಣದಂತಹ ದೃಢಸಂಕಲ್ಪ, ಧೈರ್ಯ, ಶೌರ್ಯದ ಯುದ್ಧಪಟು, ಅನ್ಯಾಯದ ವಿರುದ್ಧ ಹೋರಾಡಿದ ಕುಶಲ ಆಡಳಿತಗಾರ ಛತ್ರಪತಿ ಶಿವಾಜಿ ಎಂದರು.

ಇದನ್ನೂ ಓದಿ:ಶಿವಾಜಿ ಮಹಾರಾಜರು ಭಾರತದ ಚರಿತ್ರೆ ಬದಲಾವಣೆ ಮಾಡಿದ ಯುಗಪುರುಷ-ಸಿ ಎಂ ಬಸವರಾಜ ಬೊಮ್ಮಾಯಿ

ABOUT THE AUTHOR

...view details