ಮೈಸೂರು: ತಿ.ನರಸೀಪುರ ತಾಲ್ಲೂಕಿನ ಸುತ್ತಮುತ್ತಲ ಗ್ರಾಮಗಳಲ್ಲಿ ಚಿರತೆಗಳ ಹಾವಳಿ ಮೀತಿ ಮೀರುತ್ತಿದೆ. ಒಂದು ತಿಂಗಳಲ್ಲಿ ಈಗಾಗಲೇ ಇಬ್ಬರು ಬಲಿಯಾಗಿದ್ದಾರೆ. ಮತ್ತೊಂದೆಡೆ, ಚಿರತೆಗಳ ಓಡಾಟ ಗ್ರಾಮಸ್ಥರನ್ನು ಆತಂಕಕ್ಕೀಡು ಮಾಡಿದೆ.
ತಿ.ನರಸೀಪುರ: ತಾಯೂರಿನ ಬಳಿ ಚಿರತೆ ಓಡಾಟ-ವಿಡಿಯೋ - ETV Bharath Kannada
ತಿ.ನರಸೀಪುರ ತಾಲೂಕಿನ ತಾಯೂರಿನ ಬಳಿ ರಾತ್ರಿ ಮತ್ತೊಂದು ಚಿರತೆ ಕಂಡುಬಂದಿದೆ. ಚಿರತೆಗಳು ಗ್ರಾಮದ ಸಮೀಪ ಬರುತ್ತಿರುವುದು ಜನರಲ್ಲಿ ಭಯ ಉಂಟುಮಾಡಿದೆ.
ತಿ ನರಸೀಪುರ ತಾಯೂರಿನ ನಡುರಸ್ತೆಯಲ್ಲಿ ಚಿರತೆಯ ರಾಜಾರೋಷ ಓಡಾಟ
ಮಾಜಿ ಸಿಎಂ ಸಿದ್ದರಾಮಯ್ಯ ಹುಟ್ಟೂರಾದ ಸಿದ್ದರಾಮನಹುಂಡಿಯ 5 ಕಿ.ಮೀ.ಅಂತರದಲ್ಲಿರುವ ತಾಯೂರು ಗ್ರಾಮದ ರಸ್ತೆಯಲ್ಲಿ ಚಿರತೆ ಕಾಣ ಸಿಕ್ಕಿದೆ. ರಾತ್ರಿ ವೇಳೆ ತಮ್ಮ ಗ್ರಾಮಕ್ಕೆ ಕಾರಿನಲ್ಲಿ ಹೋಗುತ್ತಿದ್ದವರು ದೃಶ್ಯವನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ.
ಇದನ್ನೂ ಓದಿ:ಚಿರತೆಗೆ ಶೂಟೌಟ್ ಆದೇಶ, ಮೃತ ಯುವತಿ ಕುಟುಂಬಕ್ಕೆ ₹7 ಲಕ್ಷ ಪರಿಹಾರ