ಮೈಸೂರು :ಜುಲೈ 23ರಂದು ಆರಂಭವಾಗಲಿರುವ ಟೋಕಿಯೋ ಒಲಿಂಪಿಕ್ಸ್ಗೆ ಭಾಗವಹಿಸುತ್ತಿರುವ ಭಾರತೀಯ ಕ್ರೀಡಾಪಟುಗಳಿಗೆ ಮನೋಬಲ ತುಂಬುವ ದೃಷ್ಟಿಯಿಂದ ಮೈಸೂರು ರೈಲ್ವೆ ನಿಲ್ದಾಣದಲ್ಲಿ ‘ಚಿಯರ್ ಫಾರ್ ಇಂಡಿಯಾ’ ಎಂಬ ಸೆಲ್ಫಿ ಪಾಯಿಂಟ್‌ನ ತೆರೆಯಲಾಗಿದೆ.
ಟೋಕಿಯೋ ಒಲಂಪಿಕ್ಸ್ಗೆ ಸಜ್ಜಾಗುತ್ತಿರುವ ಭಾರತೀಯ ಕ್ರೀಡಾಪಡುಗಳಿಗೆ ಹುರಿದುಂಬಿಸಲು ನೈರುತ್ಯ ರೈಲ್ವೆ ಮೈಸೂರು ವಿಭಾಗೀಯ ವತಿಯಿಂದ ಜಿಲ್ಲೆಯನ್ನು ಸೇರಿಕೊಂಡಂತೆ ಹಾಸನ, ಅರಸೀಕೆರೆ, ಹಾಗೂ ಶಿವಮೊಗ್ಗ ರೈಲ್ವೆ ನಿಲ್ದಾಣಗಳಲ್ಲಿ ‘ಚಿಯರ್ ಫಾರ್ ಇಂಡಿಯಾ’ ಸೆಲ್ಫಿ ಪಾಯಿಂಟ್ ತೆರೆಯಲಾಗಿದೆ.
ರೈಲ್ವೆ ಪ್ರಯಾಣಿಕರು ಇಲ್ಲಿ ಸೆಲ್ಫಿತೆಗೆದುಕೊಂಡು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡುವುದರಿಂದ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುತ್ತಿರುವ ಕ್ರೀಡಾಪಟುಗಳಿಗೆ ಪ್ರೋತ್ಸಾಹಿಸಬೇಕು ಎಂದು ವಿಭಾಗೀಯ ರೈಲ್ವೆ ವ್ಯವಸ್ಥಾಪಕ ರಾಹುಲ್ ಅಗರ್ವಾಲ್ ತಿಳಿಸಿದ್ದಾರೆ.
ಒಲಿಂಪಿಕ್ಸ್‌ನಲ್ಲಿ ಭಾರತೀಯ ಕ್ರೀಡಾಪಟುಗಳು ಭಾಗವಹಿಸುತ್ತಿದ್ದಾರೆ ಎಂದರೆ ಬಹಳ ಹೆಮ್ಮೆಯ ವಿಚಾರ. ದೇಶಕ್ಕೆ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ, ಬೆಳ್ಳಿಯ ಪದಕ ಹೀಗೆ ಹಲವಾರು ಪದಕಗಳನ್ನು ತಂದುಕೊಟ್ಟಂತ ಕ್ರೀಡಾಪಟುಗಳನ್ನು ಕಾಣಬಹುದಾಗಿದೆ. ಪದಕವನ್ನು ಗೆಲ್ಲಲು ಕ್ರೀಡಾಪಟುಗಳಿಗೆ ಮನೋಸಾಮರ್ಥ್ಯವನ್ನು ಹೆಚ್ಚಿಸಲು ಈ ‘ಚಿಯರ್ ಫಾರ್ ಇಂಡಿಯಾ’ ಎಂಬ ಅಭಿಯಾನವನ್ನು ದೇಶದ ವಿವಿಧ ರೈಲ್ವೆ ನಿಲ್ದಾಣಗಳಲ್ಲಿ ಕೈಗೊಳ್ಳಲಾಗಿದೆ.
ಓದಿ:ಮೈಸೂರಲ್ಲಿ BE ವಿದ್ಯಾರ್ಥಿಗಳಿಬ್ಬರು ನೀರುಪಾಲು.. ಸ್ನೇಹಿತನ ಬರ್ತ್ಡೇಯಂದೇ ದುರಂತ!