ಕರ್ನಾಟಕ

karnataka

By

Published : Jan 29, 2022, 8:00 PM IST

ETV Bharat / state

ಮೈಸೂರು: ಮದುವೆಯಾಗುವುದಾಗಿ ನಂಬಿಸಿ ಕಾನ್ಸ್​ಟೇಬಲ್​ನಿಂದ ವಂಚನೆ ಆರೋಪ.. ಠಾಣೆ ಮುಂದೆ ಸಂತ್ರಸ್ತೆ ಧರಣಿ

ತಿ.ನರಸೀಪುರ ಪೊಲೀಸ್ ಠಾಣೆಯ ಕಾನ್ಸ್​ಟೇಬಲ್​ ರವಿ ವಿರುದ್ಧ ವಂಚನೆ ಆರೋಪ ಕೇಳಿ ಬಂದಿದೆ. ನೊಂದ ಯುವತಿ ಪೊಲೀಸ್​ ಠಾಣೆ ಮುಂದೆ ಕುಳಿತು ನ್ಯಾಯಾಕ್ಕಾಗಿ ಆಗ್ರಹಿಸಿದ್ದಾಳೆ.

Cheating allegations against T Narasipura Police constable Ravi
ತಿ.ನರಸೀಪುರ ಠಾಣೆ ಪೇದೆ ರವಿ ವಿರುದ್ಧ ವಂಚನೆ ಆರೋಪ

ಮೈಸೂರು:ಮದುವೆಯಾಗುವುದಾಗಿ ನಂಬಿಸಿ ಯುವತಿಗೆ ಕಾನ್ಸ್​ಟೇಬಲ್​ ವಂಚಿಸಿರುವ ಆರೋಪ ಕೇಳಿಬಂದಿದೆ. ನೊಂದ ಯುವತಿ ನ್ಯಾಯಾಕ್ಕಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ.

ತಿ.ನರಸೀಪುರ ಠಾಣೆ ಕಾಣ್ಸ್​ಟೇಬಲ್​ ರವಿ ವಿರುದ್ಧ ವಂಚನೆ ಆರೋಪ

ತಿ.ನರಸೀಪುರ ಪೊಲೀಸ್ ಠಾಣೆ ಕಾನ್ಸ್​ಟೇಬಲ್​ ರವಿ ವಿರುದ್ಧ ವಂಚನೆ ಆರೋಪ ಕೇಳಿಬಂದಿದೆ. 2018ರಲ್ಲಿ ಯುವತಿಯೊಂದಿಗೆ ಫೇಸ್‌ಬುಕ್ ಮೂಲಕ ಪರಿಚಯವಾಗಿದೆ. ಬಳಿಕ ಇಬ್ಬರ ನಡುವೆ ಪರಸ್ಪರ ಸ್ನೇಹ ಬೆಳೆದು ಪ್ರೇಮಕ್ಕೆ ತಿರುಗಿತ್ತು ಎನ್ನಲಾಗ್ತಿದೆ.

ಮದುವೆಯಾಗುವುದಾಗಿ ನಂಬಿಸಿ ಯುವತಿ ಜೊತೆ ರವಿ, ಎಲ್ಲೆಡೆ ಸುತ್ತಾಡಿ, ಆಕೆಯೊಂದಿಗೆ ದೈಹಿಕ ಸಂಪರ್ಕವನ್ನು ಕೂಡ ಬೆಳೆಸಿದ್ದನಂತೆ. ಇಷ್ಟೆಲ್ಲಾ ಆದ ಬಳಿಕ ಯುವತಿ ಮದುವೆಗೆ ಮಾಡಿಕೊಳ್ಳುವಂತೆ ಒತ್ತಾಯಿಸಿದಾಗ ಜಾತಿ ನೆಪವೊಡ್ಡಿ ನಿರಾಕರಿಸುತ್ತಿದ್ದಾನೆ ಎಂದು ನೊಂದ ಸಂತ್ರಸ್ತೆ ಆರೋಪಿಸಿದ್ದಾಳೆ.

ಇದನ್ನೂ ಓದಿ:ಮಕ್ಕಳ ಬಟ್ಟೆಯಲ್ಲಿ ಚಿನ್ನವನ್ನು ಅಡಗಿಸಿ ಅಕ್ರಮವಾಗಿ ಸಾಗಣೆ.. 6.24 ಲಕ್ಷ ರೂ. ಮೌಲ್ಯದ ಗೋಲ್ಡ್​ ವಶಕ್ಕೆ!

ಇದರಿಂದ ಕಂಗಾಲಾಗಿ ಮದುವೆಯಾಗುವಂತೆ ಪರಿಪರಿಯಾಗಿ ಯುವತಿ ರವಿ ಬಳಿ ಬೇಡಿಕೊಂಡಿದ್ದಾಳೆ. ಆದರೂ ರವಿ ಒಪ್ಪದಿದ್ದಾಗ ನ್ಯಾಯಕೊಡಿಸುವಂತೆ ತಿ.ನರಸೀಪುರ ಪೊಲೀಸ್ ಠಾಣೆಗೆ ತೆರಳಿದ್ದು, ನನಗೆ ನ್ಯಾಯ ಒದಗಿಸಿ ಎಂದು ಠಾಣೆ ಮುಂದೆ ಕುಳಿತಿದ್ದಾಳೆ. ಇಷ್ಟಾದರೂ ಪೇದೆ ರವಿ ಮಾತ್ರ ಠಾಣೆ ಬಳಿ ಸುಳಿದಿಲ್ಲ ಎಂದು ತಿಳಿದುಬಂದಿದೆ.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

For All Latest Updates

ABOUT THE AUTHOR

...view details