ಕರ್ನಾಟಕ

karnataka

ETV Bharat / state

ಚಾಮುಂಡಿ ಸನ್ನಿಧಾನದಲ್ಲಿ ಚಂಡಿಕಾ ಹೋಮ - ಚಾಮುಂಡೇಶ್ವರಿ ಚಂಡಿಕಾ ಹೋಮ‌

ಮಹಾನವಮಿಯಂದು ಚಾಮುಂಡೇಶ್ವರಿಗೆ ಮಹಾಲಕ್ಷ್ಮೀಯ ಅಲಂಕಾರ ಮಾಡಲಾಗಿತ್ತು. ಕಮಲ ವಾಹಿನಿಯಾಗಿ ದರ್ಶನ ನೀಡಿದ ಚಾಮುಂಡೇಶ್ವರಿ ದೇವಿಯನ್ನ ಭಕ್ತರು ಕಣ್ತುಂಬಿಕೊಂಡರು..

Chamundeshwari Temple
ಚಾಮುಂಡಿ ಸನ್ನಿಧಾನದಲ್ಲಿ ಚಂಡಿಕಾ ಹೋಮ

By

Published : Oct 25, 2020, 5:49 PM IST

ಮೈಸೂರು:ನವರಾತ್ರಿಯ ಒಂಬತ್ತನೇ ದಿನದಂದು ಮಹಾನವಮಿ ಅಂಗವಾಗಿ ಚಾಮುಂಡೇಶ್ವರಿ ಸನ್ನಿದಾನದಲ್ಲಿ ಚಂಡಿಕಾ ಹೋಮ ನಡೆಸಲಾಯಿತು.

ದೇಗುಲದ ಪ್ರಧಾನ ಅರ್ಚಕ ಎನ್.ಶಶಿಶೇಖರ್ ದೀಕ್ಷಿತ್ ನೇತೃತ್ವದಲ್ಲಿ ಹೋಮ, ಪೂಜಾ ಕೈಂಕರ್ಯ ನೆರವೇರಿಸಲಾಯಿತು. ಆಯುಧ ಪೂಜೆ ನಿಮಿತ್ತ ಬೆಟ್ಟಕ್ಕೆ ಭೇಟಿ ನೀಡಿದ್ದ ಭಕ್ತರು ದೇವಿ ದರ್ಶನ ಪಡೆದರು.

ವಿಜಯದಶಮಿಯಂದು ಚಾಮುಂಡೇಶ್ವರಿ ಅಶ್ವಾರೂಢಳಾಗಿ ಕಂಗೊಳಿಸಲಿದ್ದಾಳೆ. ನವರಾತ್ರಿಯ ಒಂಬತ್ತು ದಿನವೂ ದೇಗುಲದಲ್ಲಿ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಕೆಯಾಗಲಿದೆ. ಅಲ್ಲದೇ ಲೋಕಕಲ್ಯಾಣಾರ್ಥವಾಗಿ ಪ್ರಾರ್ಥನೆ ಸಲ್ಲಿಸಲಾಗುತ್ತದೆ.

ABOUT THE AUTHOR

...view details