ಮೈಸೂರು:ದಸರಾದ ಕೇಂದ್ರಬಿಂದು ಜಂಬೂಸವಾರಿಯಲ್ಲಿ ಉತ್ಸವ ಮೂರ್ತಿಯಾಗಿ ಸಾಗುವ ಚಾಮುಂಡೇಶ್ವರಿ ಮೂರ್ತಿ ಅರಮನೆಗೆ ಆಗಮಿಸಿತು. ಇದೇ ಮೊದಲ ಬಾರಿಗೆ ಕಲಾತಂಡ ಹಾಗೂ ಮೆರವಣಿಗೆಯಲ್ಲಿ ಉತ್ಸವ ಮೂರ್ತಿಯನ್ನ ಚಾಮುಂಡಿ ಬೆಟ್ಟದಿಂದ ಅರಮನೆಗೆ ಕೊಂಡೊಯ್ಯಲಾಗಿದೆ.
ಚಾಮುಂಡಿ ಬೆಟ್ಟದಲ್ಲಿ ಚಾಮುಂಡೇಶ್ವರಿ ಉತ್ಸವಕ್ಕೆ ಚಾಲನೆ ನೀಡಿ, ಬಳಿಕ ಮೆರವಣಿಗೆ ಮೂಲಕ ಅರಮನೆಗೆ ತರಲಾಗಿದೆ. ಈ ವೇಳೆ ದಾರಿಯುದ್ದಕ್ಕೂ ಜನತೆ ದೇವಿಯ ದರ್ಶನ ಪಡೆದಿದ್ದಾರೆ.
ಚಾಮುಂಡಿ ಬೆಟ್ಟದಿಂದ ಅರಮನೆಗೆ ಆಗಮಿಸಿದ ಉತ್ಸವ ಮೂರ್ತಿ
ಮೆರವಣಿಗೆಯಲ್ಲಿ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಶಾಸಕ ರಾಮ್ದಾಸ್ ಹಾಗೂ ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ಭಾಗಿಯಾಗಿದ್ದರು.
ಚಾಮುಂಡೇಶ್ವರಿ ಉತ್ಸವ ಮೂರ್ತಿಯನ್ನು ಹೂವಿನಿಂದ ಅಲಂಕೃತಗೊಂಡಿದ್ದ ವಾಹನದಲ್ಲಿ ತರಲಾಗಿದ್ದು, ಈ ವೇಳೆ ನಾದಸ್ವರ ತಂಡ, ಪೊಲೀಸ್ ಬ್ಯಾಂಡ್, ಅಶ್ವದಳ, ಭಜನಾ ತಂಡಗಳು ಭಾಗಿಯಾಗಿದ್ದವು.
ಇದನ್ನೂ ಓದಿ:ಮೈಸೂರು ದಸರಾ: ಬನ್ನಿ ಮರಕ್ಕೆ ರಾಜವಂಶಸ್ಥ ಯದುವೀರ್ ಪೂಜೆ