ಮೈಸೂರು:ಚಾಮುಂಡಿ ಬೆಟ್ಟದ (Chamundi hills) ಚಾಮುಂಡೇಶ್ವರಿ ದೇವಾಲಯದಲ್ಲಿ ಹುಂಡಿಗಳ ಕಾಣಿಕೆ ಹಣ ಎಣಿಕೆ ಮಾಡಿದ್ದು, ಸೆಪ್ಟೆಂಬರ್ 23ರಿಂದ ನವೆಂಬರ್ 10ರವರೆಗೆ ಒಟ್ಟಾರೆ 1.77 ಕೋಟಿ ರೂ.ಸಂಗ್ರಹವಾಗಿದೆ.
ಚಾಮುಂಡಿಬೆಟ್ಟದ ಹುಂಡಿ ಹಣ ಎಣಿಕೆ: ಒಟ್ಟು 1.77 ಕೋಟಿ ರೂ. ಸಂಗ್ರಹ - mysore chamundeshwari temple income
ಚಾಮುಂಡಿ ಬೆಟ್ಟದ (Chamundi hills Mysuru)ಹುಂಡಿಯಲ್ಲಿ ಹಣ ಎಣಿಕೆ ಕಾರ್ಯ ನಡೆದಿದ್ದು, ಒಟ್ಟು ಸೆಪ್ಟೆಂಬರ್ 23ರಿಂದ ನವೆಂಬರ್ 10ರವರೆಗೆ ಒಟ್ಟು 1.77 ಕೋಟಿ ರೂ. ಹಣ ಸಂಗ್ರಹವಾಗಿದೆ.
ಚಾಮುಂಡಿಬೆಟ್ಟದ ಹುಂಡಿಯಲ್ಲಿ ಒಟ್ಟು 1.77 ಕೋಟಿ ರೂ.ಸಂಗ್ರಹ
2000 ರೂ. ಮುಖಬೆಲೆ 223 ನೋಟುಗಳು, 500 ರೂ.ಬೆಲೆಯ 14372 ನೋಟುಗಳು, 200ರೂ.ಬೆಲೆಯ 4738 ನೋಟುಗಳು, 100 ರೂ.ಮುಖಬೆಲೆಯ 57003 ನೋಟುಗಳು, 50 ರೂ.ಮುಖಬೆಲೆಯ 30,380 ನೋಟಗಳು, 20 ರೂ.ಮುಖಬೆಲೆಯ 36,012 ನೋಟುಗಳು, 10 ರೂ.ಮುಖಬೆಲೆಯ 96,505 ನೋಟುಗಳಿಂದ 1,74,85,623 ಕೋಟಿ ರೂ. ಹಾಗೂ 10,5,2,1 ರೂ.ನಾಣ್ಯಗಳಿಂದ 3,09,862 ಲಕ್ಷ ರೂ. ಸೇರಿದಂತೆ ಒಟ್ಟಾರೆಯಾಗಿ 1,77,95,485 ಕೋಟಿ ರೂ.ಸಂಗ್ರಹವಾಗಿದೆ ಎಂದು ಚಾಮುಂಡೇಶ್ವರಿ ದೇವಸ್ಥಾನ (Sri Chamundeshwari Temple) ಕಾರ್ಯನಿರ್ವಾಹಕ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.