ಕರ್ನಾಟಕ

karnataka

ETV Bharat / state

ದಶಪಥ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ 7 ಕೆರೆ ಮಣ್ಣು ಬಳಕೆಗೆ ಸೂಚನೆ - ಮೈಸೂರು ತಹಶೀಲ್ದಾರ್ ರಕ್ಷಿತ್

ಚಾಮುಂಡೇಶ್ವರಿ ಕ್ಷೇತ್ರಕ್ಕೆ ಒಳಪಡುವ ಸತ್ಯನಾಯಕಹಳ್ಳಿ ಕೆರೆ, ನಾಗವಲಕೆರೆ, ಹುಯಿಳಾಲುಕೆರೆ, ಬೊಮ್ಮೆನಹಳ್ಳಿಕೆರೆ, ಜೆಟ್ಟಿಹುಂಡಿಕೆರೆ, ಹುಯಿಳಾಲು ಕಟ್ಟೆ, ಕೆ.ಹೆಮ್ಮನಹಳ್ಳಿ ಕೆರೆಯ ಮಣ್ಣುಗಳನ್ನು ಉಚಿತವಾಗಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಬಳಸಿಕೊಳ್ಳಲು ಸಂಸದ ಪ್ರತಾಪ್ ಸಿಂಹ ಸೂಚಿಸಿದ್ದಾರೆ.

MP Prathap simha meeting
ಸಂಸದ ಪ್ರತಾಪ್ ಸಿಂಹ ಸಭೆ

By

Published : Dec 26, 2020, 4:03 PM IST

ಮೈಸೂರು: ದಶಪಥ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಸಂಬಂಧಿಸಿದಂತೆ ರಸ್ತೆಯ ಉಬ್ಬು ತಗ್ಗುಗಳನ್ನು ಸರಿಪಡಿಸಲು ಹಾಗೂ ಕಾಮಗಾರಿಗಾಗಿ ದೊಡ್ಡಪ್ರಮಾಣದ ಮಣ್ಣಿನ ಅಗತ್ಯವಿದ್ದು, ಇದಕ್ಕಾಗಿ ಚಾಮುಂಡೇಶ್ವರಿ ಕ್ಷೇತ್ರದ 7 ಕೆರೆಗಳ ಹೂಳನ್ನು ಬಳಸಿಕೊಳ್ಳಲು ಅನುಮತಿ ನೀಡುವಂತೆ ತಹಶೀಲ್ದಾರ್ ರಕ್ಷಿತ್ ಅವರಿಗೆ ಸಂಸದ ಪ್ರತಾಪ್ ಸಿಂಹ ಸೂಚನೆ ನೀಡಿದ್ದಾರೆ.

ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಕುರಿತು ನಡೆದ ಸಭೆಯಲ್ಲಿ ಭಾಗಿಯಾಗಿದ್ದ ಸಂಸದ ಪ್ರತಾಪ್ ಸಿಂಹ ಈ ಸೂಚನೆ ನೀಡಿದರು.

ಮೈನ್ಸ್ ಅಂಡ್ ಜಿಯೋಲಜಿ ಇಲಾಖೆಗೆ ಒಂದು ಕ್ಯೂಬಿಕ್ ಮೀಟರ್​ಗೆ ನಿಗದಿಪಡಿಸಿರುವ ಸರ್ಕಾರದ ಬೆಳೆಯನ್ನು ಡಿಬಿಎಲ್ ನೀಡುವುದು ಇದರಿಂದ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಮಣ್ಣು ಸಿಕ್ಕಿದಂತ್ತಾಗುತ್ತದೆ, ಈ ಹಿನ್ನೆಲೆ ಉಚಿತವಾಗಿ ಚಾಮುಂಡೇಶ್ವರಿ ಕ್ಷೇತ್ರದ 7 ಕೆರೆಗಳ ಮಣ್ಣನ್ನು ಬಳಸಿಕೊಳ್ಳಲು ಸೂಚಿಸಲಾಗಿದೆ.

ಸತ್ಯನಾಯಕಹಳ್ಳಿ ಕೆರೆ, ನಾಗವಲಕೆರೆ, ಹುಯಿಳಾಲುಕೆರೆ, ಬೊಮ್ಮೆನಹಳ್ಳಿಕೆರೆ, ಜೆಟ್ಟಿಹುಂಡಿಕೆರೆ, ಹುಯಿಳಾಲು ಕಟ್ಟೆ, ಕೆ.ಹೆಮ್ಮನಹಳ್ಳಿ ಕೆರೆಯ ಮಣ್ಣುಗಳನ್ನು ಬಳಸಿಕೊಳ್ಳಲು ಸೂಚನೆ ನೀಡಲಾಯಿತು.

ಇದನ್ನೂ ಓದಿ:ಗ್ರಾ.ಪಂ ಚುನಾವಣೆ: ನಿಯೋಜಿಸಿದ ಸ್ಥಳಕ್ಕೆ ತೆರಳಲು ಸಜ್ಜಾದ ಚುನಾವಣೆ ಸಿಬ್ಬಂದಿ

ABOUT THE AUTHOR

...view details