ಮೈಸೂರು :ಲಾಕ್ಡೌನ್ನಲ್ಲಿ ದೇವಾಲಯಕ್ಕೆ ಭಕ್ತರಿಗೆ ನಿಷೇಧವಿದ್ದರೂ ಸಹ ನಿತ್ಯವೂ ಪೂಜಾ ಕೈಂಕರ್ಯವು ಯಾವುದೇ ಅಡಚಣೆ ಇಲ್ಲದೆ ಎಂದಿನಂತೆ ಚಾಮುಂಡೇಶ್ವರಿ ತಾಯಿಗೆ ನಡೆಯುತ್ತಿದೆ.
ನಾಡ ಅಧಿದೇವತೆ ಚಾಮುಂಡೇಶ್ವರಿ ದೇವಾಲಯಕ್ಕೆ ಕೋವಿಡ್ ಹಿನ್ನೆಲೆ ಕಳೆದ 2 ತಿಂಗಳಿಂದ ಭಕ್ತರಿಗೆ ನಿಷೇಧ ಹೇರಲಾಗಿದೆ. ಆದರೆ, ಚಾಮುಂಡೇಶ್ವರಿಯ ಮೂಲ ಮೂರ್ತಿಗೆ ಎಂದಿನಂತೆ ಅಭಿಷೇಕ, ಅಲಂಕಾರ, ಮಹಾ ಮಂಗಳಾರತಿ ನಡೆಯುತ್ತಿದೆ.