ಮೈಸೂರು : ದೇವಾಲಯಗಳ ಬಳಿ ಮತ್ತು ಬಸ್ ಹತ್ತುವಾಗ ಮಹಿಳೆಯರ ಸರ ಎಗರಿಸುತ್ತಿದ್ದ ಕುಖ್ಯಾತ ಸರಗಳ್ಳನನ್ನು ನಂಜನಗೂಡು ಪೊಲೀಸರು ಬಂಧಿಸಿದ್ದಾರೆ.
ಕೃಷ್ಣಪ್ಪ ಬಂಧಿತ ಸರಗಳ್ಳ. ಈತ ನಂಜನಗೂಡು ದೇವಾಲಯಕ್ಕೆ ಬರುವ ಭಕ್ತರು ದೇವರ ದರ್ಶನಕ್ಕೆ ಸರತಿ ಸಾಲಿನಲ್ಲಿ ನಿಂತಿರುವಾಗ ಹಾಗೂ ಬಸ್ ಹತ್ತುವಾಗ ಹೊಂಚು ಹಾಕಿ ಸರಗಳ್ಳತನ ಮಾಡುತ್ತಿದ್ದ. ಬಸ್ ಹತ್ತುವಾಗ ಜನ ಜಂಗುಲಿ ನಡುವೆ ಖದೀಮ ತನ್ನ ಕೈಚಳಕ ತೋರಿಸುತ್ತಿದ್ದ. ಹೀಗೆ ಕದ್ದ ಸರಗಳನ್ನು ಗಿರವಿ ಅಂಗಡಿಯಲ್ಲಿ ಇಡಲು ಬಂದಾಗ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾನೆ. ಆರೋಪಿಯನ್ನು ವಿಚಾರಣೆಗೆ ಒಳಪಡಿಸಿದಾಗ, ಈತ ಹಲವು ಪ್ರಕರಣಗಳಲ್ಲಿ ಭಾಗಿಯಾಗಿರುವ ವಿಚಾರ ಬೆಳಕಿಗೆ ಬಂದಿದೆ.