ಕರ್ನಾಟಕ

karnataka

ETV Bharat / state

ಕಾಂಗ್ರೆಸ್ ದೇಶದ್ರೋಹದ ಕೆಲಸ ಮಾಡುತ್ತಿದೆ : ಸಚಿವೆ ಶೋಭಾ ಕರಂದ್ಲಾಜೆ ವಾಗ್ದಾಳಿ - central minister shobha karandlaje outrage against congress

ನಮ್ಮ ಪಕ್ಷ ದೇಶ ಮೊದಲು ಎಂಬ ಪಾಠ ಕಲಿಸಿದೆ. ಆದ್ದರಿಂದ ಕಾರ್ಯಕರ್ತರಿಗೆ ದೇಶ ತಾಯಿ ಸ್ವರೂಪದಂತೆ ಕಾಣುತ್ತಿದೆ. ಪ್ರಧಾನಿ ಮೋದಿ ಅವರು ಕೂಡ ದೇಶವನ್ನು ತಾಯಿಯಂತೆ ಕಾಣುತ್ತಿದ್ದಾರೆ..

central ministershobha karandlaje outrage against congress
ಸಚಿವೆ ಶೋಭಾ ಕರಂದ್ಲಾಜೆ

By

Published : Aug 17, 2021, 8:20 PM IST

ಮೈಸೂರು :ರಾಕ್ಷಸರನ್ನ ರಕ್ಷಣೆ ಮಾಡಿದರೆ ಹಾಗೂ ಬೆಳೆಸಲು ಮುಂದಾದರೆ ಏನಾಗುತ್ತದೆ ಎಂಬುದಕ್ಕೆ ಅಫ್ಘಾನಿಸ್ತಾನ ನಮಗೆ ಉದಾಹರಣೆಯಾಗಿದೆ. ಇಂದಿಗೂ ಕಾಂಗ್ರೆಸ್ ಇಂತಹ ದೇಶದ್ರೋಹಿಗಳಿಗೆ ಸಹಕಾರ ನೀಡುತ್ತಿದೆ ಎಂದು ಕೇಂದ್ರಕೃಷಿ ಹಾಗೂ ರೈತ ಕಲ್ಯಾಣ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.

ಮೈಸೂರಿನ ಬನ್ನಿಮಂಟಪ ರಸ್ತೆಯಲ್ಲಿರುವ ಕಲ್ಯಾಣ ಮಂಟಪವೊಂದರಲ್ಲಿ ಏರ್ಪಡಿಸಿದ್ದ ಜನಾಶೀರ್ವಾದ ಯಾತ್ರೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದ್ರು. ವಾಜಪೇಯಿ ಸಂಸತ್ತಿನಲ್ಲಿದ್ದಾಗ ಇಬ್ಬರೇ ಬಿಜೆಪಿ ಸಂಸದರಿದ್ದರು. ಕಾಂಗ್ರೆಸ್​​ನವರು ಬಿಜೆಪಿ ಬಗ್ಗೆ ಲೇವಡಿ ಮಾಡುತ್ತಿದ್ದಾರೆ. ಆದರೀಗ ಕಾಂಗ್ರೆಸ್ ಸ್ಥಿತಿ ಏನಾಗಿದೆ ಎಂಬುದು ಜನರಿಗೆ ಗೊತ್ತಿದೆ ಎಂದ್ರು.

ಕಾಂಗ್ರೆಸ್ ವಿರುದ್ಧ ಸಚಿವೆ ಶೋಭಾ ಕರಂದ್ಲಾಜೆ ವ್ಯಂಗ್ಯ

ಪ್ರಧಾನಿ ಮೋದಿ ಮಾತನಾಡುತ್ತಾರೆ ಎಂದರೆ ಜಗತ್ತಿನ ಎಲ್ಲ ದೇಶಗಳು ತುದಿಗಾಲಿನಲ್ಲಿ ನಿಂತು ಕಾಯುತ್ತವೆ. ದೇಶವನ್ನು ಪ್ರಧಾನಿ ವ್ಯವಸ್ಥಿತವಾಗಿ ನಡೆಸಿಕೊಂಡು ಹೋಗುತ್ತಿದ್ದಾರೆ.

ನಮ್ಮ ಪಕ್ಷ ದೇಶ ಮೊದಲು ಎಂಬ ಪಾಠ ಕಲಿಸಿದೆ. ಆದ್ದರಿಂದ ಕಾರ್ಯಕರ್ತರಿಗೆ ದೇಶ ತಾಯಿ ಸ್ವರೂಪದಂತೆ ಕಾಣುತ್ತಿದೆ. ಪ್ರಧಾನಿ ಮೋದಿ ಅವರು ಕೂಡ ದೇಶವನ್ನು ತಾಯಿಯಂತೆ ಕಾಣುತ್ತಿದ್ದಾರೆ ಎಂದರು.

ABOUT THE AUTHOR

...view details