ಕರ್ನಾಟಕ

karnataka

By

Published : Feb 6, 2021, 11:02 AM IST

Updated : Feb 6, 2021, 11:25 AM IST

ETV Bharat / state

ಪಾಪ್ ಗಾಯಕಿ ರಿಹಾನ್ನಾಗೆ ರೈತರ ಕಷ್ಟ ಗೊತ್ತಾ? ಸಚಿವ ಸದಾನಂದಗೌಡ ಪ್ರಶ್ನೆ

ಅಂತಾರಾಷ್ಟ್ರೀಯ​ ಪಾಪ್​ ಗಾಯಕಿ ರಿಹಾನ್ನಾ ಕೆಲ ದಿನಗಳ ಹಿಂದೆ ದೆಹಲಿ ರೈತರ ಹೋರಾಟವನ್ನು ಬೆಂಬಲಿಸಿ ಮತ್ತು ಮೋದಿ ಸರ್ಕಾರದ ವಿರುದ್ಧ ಟ್ವೀಟ್​ ಮಾಡಿದ್ದರು. ಇದಕ್ಕೆ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ. ಸದಾನಂದ ಗೌಡ ಪ್ರತಿಕ್ರಿಯಿಸಿದ್ದಾರೆ. ಅವರಿಗೆ ರೈತರ ಕಷ್ಟ ಗೊತ್ತಾ ಎಂದು ಕಿಡಿಕಾರಿದ್ದಾರೆ.

ಕೇಂದ್ರ ಸಚಿವ ಸದಾನಂದಗೌಡ
Central Minister Sadananda Gowda

ಮೈಸೂರು:ಪಾಪ್ ಗಾಯಕಿಗೆ ರೈತರ ಕಷ್ಟ ಗೊತ್ತಾ, ಎಂದಾದರೂ ಭತ್ತದ ಗದ್ದೆಗೆ ಹೋಗಿ ನೋಡಿದ್ದಾರಾ ಎಂದು ರಿಹಾನ್ನಾ ವಿರುದ್ಧ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ. ಸದಾನಂದ ಗೌಡ ಕಿಡಿಕಾರಿದ್ದಾರೆ.

ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ. ಸದಾನಂದ ಗೌಡ ಪ್ರತಿಕ್ರಿಯೆ

ನಗರದ ಸರ್ಕಾರಿ ಅತಿಥಿ ಗೃಹದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪಾಪ್​ ಗಾಯಕಿಗೆ ರೈತರ ಶ್ರಮ ಗೊತ್ತಾ?, ಅವರು ಹೇಗೆ ಬೆಳೆಗಳನ್ನು ಮಾರಾಟ ಮಾಡುತ್ತಾರೆ ಎನ್ನುವುದು ಗೊತ್ತಾ?, ಜಮೀನಿಗೆ ಹೋಗಿ ಒಂದು ಫೋಟೋ ತೆಗೆಸಿಕೊಂಡರೆ ಸಾಲದು. ರೈತರ ಕಷ್ಟವನ್ನು ಹತ್ತಿರದಿಂದ ನೋಡಬೇಕು. ನಮ್ಮ ದೇಶದಲ್ಲಿ ಆಂತರಿಕ ಕಲಹ ಹುಟ್ಟು ಹಾಕಲು ವಿದೇಶಿ ಕೈಗೊಂಬೆಗಳಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಓದಿ: ರೈತರ ಪ್ರತಿಭಟನೆಗೆ ಪಾಪ್​ ತಾರೆ ರಿಹಾನ್ನಾ ಬೆಂಬಲ... ಆಕೆ ಫೂಲ್ ಎಂದ ಕಂಗನಾ!

ದೇಶದಲ್ಲಿ ರೈತರಗಿಂತ ಕೆಲವು ಕೃಪಾಪೋಷಿತ ಪಟ್ಟಭದ್ರ ಹಿತಾಸಕ್ತಿಗಳು ಪ್ರತಿಭಟನೆ ನಡೆಸಲು ಕುಮ್ಮಕ್ಕು ನೀಡುತ್ತಿವೆ. ಇದಕ್ಕೆ ಸರ್ಕಾರ ಬಗ್ಗುವುದಿಲ್ಲ. ರೈತರು ಮಾತುಕತೆ ಮೂಲಕ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬೇಕು. ಅವರು ಮೂರು ಕಾಯ್ದೆ ವಿರುದ್ಧ ಹಠಮಾರಿತನ‌ ತೋರುತ್ತಿದ್ದಾರೆ. ರೈತರಿಗೆ ಅನುಕೂಲವಾಗಲೆಂದು ಪ್ರಧಾನಿ ನರೇಂದ್ರ ಮೋದಿಯವರು ಸ್ವಾಮಿನಾಥನ್ ಆಯೋಗ ವರದಿ ಜಾರಿಗೆ ತಂದಿದ್ದಾರೆ ಎಂದು ಸಮರ್ಥಿಸಿಕೊಂಡರು.

Last Updated : Feb 6, 2021, 11:25 AM IST

For All Latest Updates

TAGGED:

ABOUT THE AUTHOR

...view details