ಮೈಸೂರು :ರಾಜ್ಯ ಬಿಜೆಪಿ ಸರ್ಕಾರದಲ್ಲಿ ನಡೆಯುತ್ತಿರುವ ಸಿನಿಮಾ, ನಾಟಕ, ಸೀರಿಯಲ್ಗಳನ್ನು ನೋಡಿದರೆ ರಾಜ್ಯದಲ್ಲಿ ಆಡಳಿತ ಸಂಪೂರ್ಣ ಕುಸಿದಿದೆ ಎಂಬುದು ತಿಳಿಯುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿಯಲ್ಲಿ ನಡೆಯುತ್ತಿರುವ ಸಿನಿಮಾ, ಸೀರಿಯಲ್, ನಾಟಕಗಳ ಪ್ರತಿಬಿಂಬವನ್ನು ಮೈಸೂರು ಆಡಳಿತದಲ್ಲಿ ಗಮನಿಸಬಹುದು ಎಂದು ವ್ಯಂಗ್ಯವಾಡಿದ್ದಾರೆ.
ಸುತ್ತೂರು ಮಠಕ್ಕೆ ಭೇಟಿ ನೀಡಿ ಶ್ರೀಗಳ ಜೊತೆ ಸುಮಾರು ಅರ್ಧಗಂಟೆಗೂ ಹೆಚ್ಚು ಕಾಲ ಗೌಪ್ಯ ಮಾತುಕತೆ ನಡೆಸಿ ನಂತರ ಮಾಧ್ಯಮಗಳ ಜೊತೆ ಡಿಕೆಶಿ ಮಾತನಾಡಿದ್ರು. ಮೈಸೂರಿನಲ್ಲಿ ಏನಾಯ್ತು.. ಚಾಮರಾಜನಗರದಲ್ಲಿ ಏನಾಯ್ತು... ಎಂಬುದನ್ನು ನೀವೇ ಟಿವಿಯಲ್ಲಿ ತೋರಿಸಿದ್ದೀರಿ, ಇದನ್ನು ನೋಡಿದರೆ ರಾಜ್ಯದಲ್ಲಿ ಸರ್ಕಾರ ಆಡಳಿತ ನಡೆಸಲು ವಿಫಲವಾಗಿದೆ. ಅಧಿಕಾರಿಗಳ ನಡುವಿನ ಗೊಂದಲ ಬಗೆಹರಿಸಲು ಮುಖ್ಯಕಾರ್ಯದರ್ಶಿ ಅವರು ವಿಫಲರಾದರು ಎಂಬುದು ಕಾಣುತ್ತಿದೆ ಅಂದ್ರು.