ಮೈಸೂರು: ಅರಮನೆಯ ಮನ್ನಾರ್ ಶ್ರೀಕೃಷ್ಣ ಜನ್ಮಾಷ್ಠಮಿ ಆಚರಣೆಯಲ್ಲಿ ಯದುವಂಶಸ್ಥ ಯದುವೀರ್ ಹಾಗೂ ತ್ರಿಷಿಕಾ ದಂಪತಿ ಪುತ್ರ ಆದ್ಯ ವೀರ್ ಒಡೆಯರ್ ಶ್ರೀಕೃಷ್ಣನ ವೇಷ ತೊಟ್ಟು ಖುಷಿಪಟ್ಟಿದ್ದಾನೆ.
ಶ್ರೀಕೃಷ್ಣನ ವೇಷ ತೊಟ್ಟು ಸಂಭ್ರಮಿಸಿದ ಆದ್ಯ ವೀರ್ ಒಡೆಯರ್ - aadhyaveer Wodeyar in the guise of Sri Krishna
ಶ್ರೀಕೃಷ್ಣ ಜನ್ಮಾಷ್ಠಮಿ ಪ್ರಯುಕ್ತ ಮೈಸೂರು ಅರಮನೆಯಲ್ಲಿ ವಿಶೇಷ ಪೂಜೆ ಸಲ್ಲಿಸಲಾಗಿದೆ. ರಾಜಪುತ್ರ ಆದ್ಯ ವೀರ್ ಒಡೆಯರ್ ಶ್ರೀಕೃಷ್ಣನ ವೇಶ ಧರಿಸಿ ಮಿಂಚಿದ್ದಾನೆ.
![ಶ್ರೀಕೃಷ್ಣನ ವೇಷ ತೊಟ್ಟು ಸಂಭ್ರಮಿಸಿದ ಆದ್ಯ ವೀರ್ ಒಡೆಯರ್ dsd](https://etvbharatimages.akamaized.net/etvbharat/prod-images/768-512-8747331-thumbnail-3x2-vis.jpg)
ಶ್ರೀಕೃಷ್ಣನ ವೇಷತೊಟ್ಟು ಸಂಭ್ರಮಿಸಿದ ಆದ್ಯವೀರ್ ಒಡೆಯರ್
ಅರಮನೆಯಲ್ಲಿ ಶಾಸ್ತ್ರೋಕ್ತವಾಗಿ ನಡೆದ ಕಾರ್ಯಕ್ರಮದಲ್ಲಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಕುಟುಂಬಸ್ಥರಿಂದ ಜಯಂತಿ ಆಚರಣೆ ಮಾಡಲಾಗಿದೆ. ಅಜ್ಜಿ ಪ್ರಮೋದಾ ದೇವಿ ಒಡೆಯರ್ ಜೊತೆ ಸೇರಿ ಹಸುವಿಗೆ ಫಲಹಾರ ನೀಡಿ ಆದ್ಯ ವೀರ್ ಸಂತಸಪಟ್ಟಿದ್ದಾನೆ.
ಈ ಬಗ್ಗೆ ತಮ್ಮ ಫೇಸ್ಬುಕ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಯದುವೀರ್, ಸರ್ವರಿಗೂ ಕೃಷ್ಣ ಒಳಿತು ಮಾಡಲಿ ಎಂದು ಪಾರ್ಥಿಸಿದ್ದಾರೆ.