ಕರ್ನಾಟಕ

karnataka

ETV Bharat / state

ಸಿಸಿಡಿ ಮಾಲೀಕ ಸಿದ್ಧಾರ್ಥ್​​ ತಂದೆ ನಿಧನ - ccd owner

ಇತ್ತೀಚೆಗೆ ಸಾವನ್ನಪ್ಪಿದ ಕಾಫಿ ಲೋಕದ ಸಾಮ್ರಾಟ ಕೆಫೆ ಕಾಫೀ ಡೇ ಮಾಲಿಕ ವಿ.ಜಿ.ಸಿದ್ಧಾರ್ಥ್ ತಂದೆ ಇಂದು ಕೊನೆಯುಸಿರೆಳೆದಿದ್ದಾರೆ. ವಯೋಸಹಜ ಕಾಯಿಲೆಯಿಂದ ಕೆಲ ದಿನಗಳಿಂದ ಮೈಸೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡಯುತ್ತಿದ್ದ ಅವರು ಇಂದು ಮಧ್ಯಾಹ್ನ ನಿಧನ ಹೊಂದಿದ್ದಾರೆ.

ಸಿಸಿಡಿ ಮಾಲೀಕ ಸಿದ್ದಾರ್ಥ್​ ತಂದೆ ನಿಧನ

By

Published : Aug 25, 2019, 5:14 PM IST

Updated : Aug 25, 2019, 6:17 PM IST

ಮೈಸೂರು: ಇತ್ತೀಚೆಗೆ ಸಾವನ್ನಪ್ಪಿದ ಕೆಫೆ ಕಾಫಿ ಡೇ ಮಾಲೀಕ ಸಿದ್ಧಾರ್ಥ್​ ತಂದೆ ಗಂಗಯ್ಯ (96) ಇಂದು ಮಧ್ಯಾಹ್ನ ನಿಧನರಾಗಿದ್ದಾರೆ.

ನಗರದ ಗೋಪಾಲಗೌಡ ಶಾಂತವೇರಿ ಆಸ್ಪತ್ರೆಯಲ್ಲಿ ಒಂದು ತಿಂಗಳಿನಿಂದ ಚಿಕಿತ್ಸೆ ಪಡೆಯುತ್ತಿದ್ದ ಗಂಗಯ್ಯ, ವಯೋಸಹಜ ಕಾಯಿಲೆಯಿಂದ ಇಂದು ಕೊನೆಯುಸಿರೆಳೆದಿದ್ದಾರೆ.

ಮಗ ಸಿದ್ಧಾರ್ಥ ಬದುಕಿದ್ದಾಗಲೆ ತಂದೆಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಸಿದ್ಧಾರ್ಥ್​ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ತಂದೆಯನ್ನು ನೋಡಿಕೊಂಡು ಹೋಗಿದ್ದರು. ಮಗ ಸಾವನ್ನಪ್ಪಿರುವ ವಿಚಾರ ಸಹ ಗಂಗಯ್ಯ ಹೆಗ್ಡೆಗೆ ತಿಳಿದಿರಲಿಲ್ಲ ಎನ್ನಲಾಗಿದೆ.

ಗಂಗಯ್ಯ ನಿಧನ ಸುದ್ದಿ ತಿಳಿದ ತಕ್ಷಣ ಕುಟುಂಬಸ್ತರು ಆಸ್ಪತ್ರೆಗೆ ಆಗಮಿಸಿದ್ದು, ಆಸ್ಪತ್ರೆಯಿಂದ ಹಸ್ತಾಂತರವಾದ ಬಳಿಕ ಮೃತದೇಹವನ್ನು ನೇರವಾಗಿ ಸ್ವಂತ ಊರಾದ ಚಿಕ್ಕಮಗಳೂರಿಗೆ ಕೊಂಡೊಯ್ಯಲಾಗಿದೆ. ಮೃತ ಗಂಗಯ್ಯ ಹೆಗ್ಡೆ ಅಂತ್ಯಕ್ರಿಯೆ ಚಿಕ್ಕಮಗಳೂರಿನ ಅವರ ತೋಟದಲ್ಲಿ ನಾಳೆ ನೆರವೇರಿಸಲಾಗುವುದು ಎಂದು ಕುಟುಂಬ ಮೂಲಗಳು ತಿಳಿಸಿವೆ.

Last Updated : Aug 25, 2019, 6:17 PM IST

ABOUT THE AUTHOR

...view details