ಮೈಸೂರು: ಅಂತಾರಾಷ್ಟ್ರೀಯ ಮಾರುಕಟ್ಟೆಗೆ ಸಾಗಾಣಿಕೆ ಮಾಡಲು ಸಂಚು ರೂಪಿಸಿ ಅಕ್ರಮವಾಗಿ ರಕ್ತ ಚಂದನ ಮರಗಳನ್ನು ಶೇಖರಿಸಿಟ್ಟಿದ್ದ ವ್ಯಕ್ತಿಯನ್ನು ಬಂಧಿಸಿ, 80 ಲಕ್ಷ ರೂ. ಬೆಲೆ ಬಾಳುವ 750 ಕೆ.ಜಿ.ತೂಕದ 80 ರಕ್ತ ಚಂದನ ಮರದ ತುಂಡುಗಳನ್ನು ಸಿಸಿಬಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಸಿಸಿಬಿ ಪೊಲೀಸರಿಂದ ಭರ್ಜರಿ ಬೇಟೆ: 80 ಲಕ್ಷ ಮೌಲ್ಯದ 750 ಕೆಜಿ ರಕ್ತಚಂದನ ವಶ - ಶೇಖರಿಸಿಟ್ಟಿದ್ದ 750ಕೆ.ಜಿ ರಕ್ತಚಂದನ
80 ಲಕ್ಷ ರೂ. ಮೌಲ್ಯದ 750 ಕೆ.ಜಿ ತೂಕದ ರಕ್ತ ಚಂದನವನ್ನು ಸಿಸಿಬಿ ಪೊಲೀಸರು ವಶಪಡಿಸಿಕೊಂಡು, ಆರೋಪಿಯನ್ನು ಬಂಧಿಸಿದ್ದಾರೆ.

ಲಷ್ಕರ್ ಮೊಹಲ್ಲಾ ನಿವಾಸಿ ಫೈರೋಜ್ ಅಲಿಖಾನ್(32) ಬಂಧಿತ ಆರೋಪಿ. ಖಚಿತ ಮಾಹಿತಿ ಮೇರೆಗೆ ಮಂಡಿ ಮೊಹಲ್ಲಾದ ಪುಲಿಕೇಶಿ ರಸ್ತೆಯ 7ನೇ ಕ್ರಾಸ್‌ನಲ್ಲಿರುವ ಮನೆಯ ಮೇಲೆ ದಾಳಿ ನಡೆಸಿ, ಈತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ರಾಜ್ಯ ಹಾಗೂ ಹೊರ ರಾಜ್ಯಗಳಿಂದ ರಕ್ತ ಚಂದನದ ಮರಗಳನ್ನು ಅಕ್ರಮವಾಗಿ ಖರೀದಿಸಿ ಅಂತಾರಾಷ್ಟ್ರೀಯ ಮಾರುಕಟ್ಟೆಗೆ ಹಡಗಿನ ಮೂಲಕ ಮಾರಾಟ ಮಾಡುವ ಸಂಚನ್ನು ರೂಪಿಸಿರುವುದಾಗಿ ತಿಳಿಸಿದ್ದಾನೆ.
ಈ ಎಲ್ಲಾ ಮಾಹಿತಿಗಳನ್ನು ಪಡೆದುಕೊಂಡು ನಂತರ ಈತನ ಮನೆಯಲ್ಲಿ ಹಾಗೂ ಕ್ವಾಲಿಸ್ ವಾಹನದಲ್ಲಿದ್ದ 750 ಕೆ.ಜಿ. ತೂಕದ ರಕ್ತ ಚಂದನದ 80 ಮರದ ತುಂಡುಗಳನ್ನು ಸಿಸಿಬಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.