ಮೈಸೂರು : ತನ್ನ ಪೆಟ್ಟಿ ಹೋಟೆಲ್‌ನಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸುವ ಮೂಲಕ ಇಲ್ಲೊಬ್ರು ವಿಶೇಷವಾಗಿ ಗಮನ ಸೆಳೆದಿದ್ದಾರೆ. ನಂಜನಗೂಡು ತಾಲೂಕಿನ ದೇವನೂರ ಗ್ರಾಮದಲ್ಲಿ ಹೋಟೆಲ್ ನಡೆಸುತ್ತಿರುವ ಯೋಗೇಶ್ ಯುವಕರ ಕೀಟಲೆ ತಡೆಯಬೇಕೆಂಬ ಉದ್ದೇಶದಿಂದ ಸಿಸಿ ಕ್ಯಾಮರಾ ಅಳವಡಿಸಿದ್ದಾರೆ.
ಪೆಟ್ಟಿ ಹೋಟೆಲ್‌ನಲ್ಲೂ ಸಿಸಿಟಿವಿ ಅಳವಡಿಸಿದ ಮಾಲೀಕ; ತಿಂದು ಮೆಲ್ಲಗೆ ಜಾರುವ ಜನರಿಗೆ ಕಡಿವಾಣ! - ಮೈಸೂರಿನ ಪೆಟ್ಟಿ ಹೋಟೆಲ್ ಸುದ್ದಿ
ನಂಜನಗೂಡು ತಾಲೂಕಿನ ದೇವನೂರ ಗ್ರಾಮದಲ್ಲಿ ಪೆಟ್ಟಿ ಹೋಟೆಲ್ ನಡೆಸುತ್ತಿರುವ ಯೋಗೇಶ್ ಅವರು ತಮ್ಮ ಹೋಟೆಲ್ಗೆ ಬರುವ ಯುವಕರ ಕೀಟಲೆ ತಡೆಯುವ ಉದ್ದೇಶದಿಂದ ಸಿಸಿ ಕ್ಯಾಮರಾ ಅಳವಡಿಸಿದ್ದಾರೆ.
ದೇವನೂರು ಗ್ರಾಮದಲ್ಲಿ ಪಿಯುಸಿ ಹಾಗೂ ಐಟಿಐ ಕಾಲೇಜು ಮಾತ್ರವಿದ್ದು, ಮುಂದಿನ ಶಿಕ್ಷಣಕ್ಕೆ 15 ಕಿ.ಮೀ ದೂರದಲ್ಲಿರುವ ನಂಜನಗೂಡು ತಾಲೂಕು ಅಥವಾ ಮೈಸೂರಿಗೆ ಹೋಗಬೇಕು. ದೇವನೂರು ಗ್ರಾಮದ ಸುತ್ತಮುತ್ತ ಪ್ರೌಢಶಾಲೆ ಮಾತ್ರವಿದ್ದು ಪಿಯುಸಿ ಓದಬೇಕಾದರೆ ಸುತ್ತಮುತ್ತಲ ಗ್ರಾಮದ ವಿದ್ಯಾರ್ಥಿಗಳು ದೇವನೂರು ಗ್ರಾಮಕ್ಕೆ ಬರಬೇಕು. ಈ ಗ್ರಾಮದಲ್ಲಿ ಯೋಗೇಶ್ ಅವರ ಪೆಟ್ಟಿ ಹೋಟೆಲ್ ಬಿಟ್ಟು, ಟೀ ಕುಡಿಯಲು ಬೇರೆ ಹೋಟೆಲ್‌ಗಳಿಲ್ಲ.
ಹೋಟೆಲ್‌ನಲ್ಲಿ ಬೆಳಗ್ಗಿನ ತಿಂಡಿ, ಮಧ್ಯಾಹ್ನದ ಊಟ ಲಭ್ಯವಿದ್ದು ಈ ವೇಳೆ ಬರುವ ಕೆಲ ವಿದ್ಯಾರ್ಥಿಗಳು ಕೀಟಲೆ ಮಾಡುವುದು ಹಾಗೂ ರಶ್ನಲ್ಲಿ ಹಣ ನೀಡದೇ ಹೋಗುತ್ತಾರೆ. ಇದಕ್ಕೆ ಕಡಿವಾಣ ಹಾಕಬೇಕೆಂದು ಸಾಲ ಮಾಡಿ ಪೆಟ್ಟಿ ಹೋಟೆಲ್ಗೆ ಸಿಸಿ ಕ್ಯಾಮರಾ ಅಳವಡಿಸಿದ್ದಾರೆ. ಇದರಿಂದ ತಿಂಡಿ ಹಾಗೂ ಊಟ ಮಾಡಲು ಬರುವ ವಿದ್ಯಾರ್ಥಿಗಳು ಸಿಸಿ ಕ್ಯಾಮೆರಾ ನೋಡಿ ತಮ್ಮ ತರ್ಲೆಗಳನ್ನು ಕಡಿಮೆ ಮಾಡುತ್ತಿದ್ದಾರೆಂದು ಯೋಗೇಶ್ ತಿಳಿಸಿದ್ರು.