ಕರ್ನಾಟಕ

karnataka

ETV Bharat / state

ಮೈಸೂರಿನಲ್ಲಿ ಲಾಕ್​ ಡೌನ್​ ಉಲ್ಲಂಘಿಸಿದವರ ವಿರುದ್ಧ ಪ್ರಕರಣ - Case filed against lockdown violators in Mysore

ಮೈಸೂರಿನಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದ್ದರೂ ಅದನ್ನು ಉಲ್ಲಂಘಿಸಿದವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Case filed against lockdown violators
Case filed against lockdown violators

By

Published : Apr 17, 2020, 9:44 AM IST

ಮೈಸೂರು:ವಿವಿಧ ರೀತಿಯಲ್ಲಿ ಲಾಕ್ ಡೌನ್​ ಉಲ್ಲಂಘಿಸಿದವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ನಗರದಲ್ಲಿ ಲಾಕ್​ ಡೌನ್​ ಹಿನ್ನೆಲೆ ನಿಷೇಧಾಜ್ಞೆ ಜಾರಿಯಲ್ಲಿದ್ದರೂ ಅದನ್ನು ಉಲ್ಲಂಘಿಸಿ ವಿಜಯನಗರ 2ನೇ ಹಂತದ ನಿವಾಸಿ ಹೇಮಂತ್​ ಚಂದ್ರ ಎಂಬಾತ ರಸ್ತೆಗಳಿದಿದ್ದ. ಕಾಳಿದಾಸ್​ ರಸ್ತೆಯಲ್ಲಿ ಸಂಚರಿಸುತ್ತಿದ್ದಾಗ ತಪಾಸಣೆ ಮಾಡಿದ ಪಿಎಸ್ಐ ಇಂದ್ರಮ್ಮ ವಾಹನವನ್ನು ವಶಕ್ಕೆ ಪಡೆದು ಐಪಿಸಿ ಸೆಕ್ಷನ್ 188, 261 ಮತ್ತು 171ರಡಿ ಪ್ರಕರಣ ದಾಖಲಿಸಿದ್ದಾರೆ.
ಹೋಟೆಲ್ ಮಾಲೀಕನ ವಿರುದ್ಧ ಪ್ರಕರಣ ದಾಖಲು:ನಿಯಮ ಉಲ್ಲಂಘಿಸಿ ಹೋಟೆಲ್ ತೆರೆದ ನಗರದ ಇಂದ್ರ ಧನುಷ್ ಹೋಟೆಲ್ ಮಾಲೀಕ ಹಾಗೂ ಕೆಲಸಗಾರ ಮಹದೇವಸ್ವಾಮಿ ವಿರುದ್ಧವೂ ಪ್ರಕರಣ ದಾಖಲಾಗಿದೆ.

ಹೋಟೆಲ್ ತೆರೆದು ಸಾರ್ವಜನಿಕರು ಗುಂಪು ಕಟ್ಟಿಕೊಂಡು ಆಹಾರ ಸೇವನೆಗೆ ಅವಕಾಶ ಮಾಡಿಕೊಟ್ಟಿದ್ದಕ್ಕಾಗಿ ಐಪಿಸಿ ಸೆಕ್ಷನ್ 188, 261ರ ಅಡಿ ವಿಜಯನಗರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಜೊತೆಗೆ ಹೋಟೆಲ್​ಗೆ ಬಂದಿದ್ದ ಗ್ರಾಹನೋರ್ವನನ್ನು ವಶಕ್ಕೆ ಪಡೆಯಲಾಗಿದೆ.

For All Latest Updates

TAGGED:

ABOUT THE AUTHOR

...view details