ಕರ್ನಾಟಕ

karnataka

ETV Bharat / state

ನಕಲಿ ಪಾಸ್​ ಇಟ್ಟುಕೊಂಡು ಪ್ರಯಾಣ ಮಾಡಿದ್ರೆ ಜೋಕೆ... ಇವರಿನಿಗಾದಂತೆ ನಿಮಗೂ ಆಗಬಹುದು - ಮೈಸೂರು

ಮೈಸೂರಿನಲ್ಲಿ ನಕಲಿ ಪಾಸ್ ಹಾಕಿದ್ದ ಟೊಯೊಟಾ ಇಟಿಯೋಸ್ ಕಾರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಎನ್.ಆರ್. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

illegal pass
illegal pass

By

Published : Apr 30, 2020, 10:32 AM IST

ಮೈಸೂರು: ಕೋವಿಡ್-19 ಸಂಬಂಧ ಅನಧಿಕೃತ ಪಾಸ್ ಹಾಕಿದ್ದ ಕಾರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ನರಸಿಂಹರಾಜ ಪೊಲೀಸ್ ಠಾಣೆಯ ಪೊಲೀಸರು ಫೌಂಟೇನ್ ವೃತ್ತದ ಬಳಿ ವಾಹನಗಳನ್ನು ತಪಾಸಣೆ ಮಾಡುತ್ತಿದ್ದಾಗ, ಕೆಎ.02 ಎಂಜಿ-0661 ನಂಬರಿನ ಟೊಯೊಟಾ ಇಟಿಯೋಸ್ ಕಾರನ್ನು ತಡೆದು ತಪಾಸಣೆ ಮಾಡಿದಾಗ, ಕಾರಿನ ಮುಂಭಾಗದ ಗ್ಲಾಸ್‍ನಲ್ಲಿ 'ಕರ್ನಾಟಕ‌ ಸರ್ಕಾರ ಕೋವಿಡ್-19 ಸೇವೆ' ಎಂದು ನಮೂದಿಸಲಾಗಿತ್ತು.

ನಕಲಿ ಪಾಸ್ ಹೊಂದಿರುವ ಕಾರ್

ಈತನ ವಿಚಾರಣೆ ಮಾಡಿದಾಗ, ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಅಕ್ಕನ ಮನೆಗೆ ಹೋಗಬೇಕಾದ್ದರಿಂದ, ಸ್ನೇಹಿತರೊಬ್ಬರು ವಾಟ್ಸ್​​ ಆ್ಯಪ್​ ಮೂಲಕ ಕಳುಹಿಸಿದ ಪಾಸನ್ನು ಡೌನ್‍ಲೋಡ್ ಮಾಡಿ, ಕಲರ್ ಪ್ರಿಂಟ್ ಹಾಕಿಸಿ ತನ್ನ ಕಾರಿಗೆ ಅಳವಡಿಸಿಕೊಂಡಿರುವುದಾಗಿ ಒಪ್ಪಿಕೊಂಡಿದ್ದಾನೆ.

ಈ ಸಂಬಂಧ ನರಸಿಂಹರಾಜ ಠಾಣೆಯ ಪೊಲೀಸರು ಕಾರು ಹಾಗೂ ಪಾಸನ್ನು ಡೌನ್‍ಲೋಡ್ ಮಾಡಿದ್ದ ವಿವೋ ಮೊಬೈಲ್ ಫೋನನ್ನು ವಶಪಡಿಸಿಕೊಮಡಿದ್ದಾರೆ. ಈ ಬಗ್ಗೆ ಎನ್.ಆರ್. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ABOUT THE AUTHOR

...view details