ಕರ್ನಾಟಕ

karnataka

ETV Bharat / state

ಕುಡಿದು ಕಿಕ್ಕೇರಿಸಿಕೊಂಡವನಿಗೆ ತಪ್ಪಿತು ಬ್ಯಾಲೆನ್ಸ್.. ರಸ್ತೆಯಿಂದ ಗದ್ದೆ ಮೇಲೆ ಕಾರು ಹಾರಿಸಿದ ಭೂಪ.. - Car Accident in Nanjanagudu of Mysuru

ನಶೆಯಲ್ಲಿ ಇಲ್ಲೊಬ್ಬ ಕಾರನ್ನ ರಸ್ತೆ ಮೇಲೆ ಓಡಿಸದೇ ಹದ್ದೆ ಮೇಲೆ ಹಾರಿಸಿದ್ದಾನೆ. ಆದರೆ, ಅದೃಷ್ಟ ಆತನ ಜತೆಗೆ ಇತ್ತು ಅನ್ಸುತ್ತೆ. ಪ್ರಾಣಾಪಾಯದಿಂದ ಪಾರಾಗಿದ್ದಾನೆ..

Car Accident in Nanjanagudu of Mysuru
ನಿಯಂತ್ರಣ ತಪ್ಪಿ ಗದ್ದೆಗೆ ಹಾರಿದ ಕಾರು

By

Published : May 5, 2020, 9:50 AM IST

ಮೈಸೂರು :ಕುಡಿದ ಮತ್ತಿನಲ್ಲಿ ಚಲಾಯಿಸಿದಾಗ ಚಾಲಕನ ನಿಯಂತ್ರಣ ತಪ್ಪಿದ ಕಾರು ರಸ್ತೆ ಬಿಟ್ಟು ಗದ್ದೆಗೆ ಹಾರಿದ ಘಟನೆ ನಂಜನಗೂಡು ತಾಲೂಕು ಹುಲ್ಲಹಳ್ಳಿ ರಸ್ತೆಯ ಬ್ಯಾಳಾರು ಗ್ರಾಮದ ಬಳಿ ನಡೆದಿದೆ

ನಿಯಂತ್ರಣ ತಪ್ಪಿ ಗದ್ದೆಗೆ ಹಾರಿದ ಕಾರು..

ಬ್ರಿಟಾನಿಯ ಯೋಗಿ ಎಂಬಾತ ಎಣ್ಣೆಯ ನಶೆಯಲ್ಲಿ ವೇಗವಾಗಿ ಕಾರು ಚಲಾಯಿಸಿದ್ದ. ನಿಯಂತ್ರಣ ತಪ್ಪಿದ ಕಾರು ರಸ್ತೆ ಪಕ್ಕದ ಗದ್ದೆಗೆ ಹಾರಿ ಪಲ್ಟಿಯಾಗಿ ಬಿದ್ದಿದೆ. ಅದೃಷ್ಟವಶಾತ್ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಘಟನೆ ನಡೆದ ತಕ್ಷಣ ಆ್ಯಂಬುಲೆನ್ಸ್​ ಕರೆಸಿ ಚಾಲಕನನ್ನು ನಂಜನಗೂಡು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ.

ಸ್ಥಳಕ್ಕೆ ನಂಜನಗೂಡು ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ABOUT THE AUTHOR

...view details