ಕರ್ನಾಟಕ

karnataka

ETV Bharat / state

ಉಪಚುನಾವಣೆಗೆ ಸ್ಪರ್ಧಿಸಿರುವ ಅನರ್ಹರ ವಿರುದ್ಧ ಪ್ರಚಾರ ಮಾಡ್ತೀನಿ.. ವಾಟಾಳ್​ ನಾಗರಾಜ್

ಉಪಚುನಾವಣೆಯಲ್ಲಿ‌ ಸ್ಪರ್ಧಿಸಿರುವ ಪಕ್ಷಾಂತರಿಗಳ ವಿರುದ್ಧ ರಾಜ್ಯಾದ್ಯಂತ ಪ್ರಚಾರ ಮಾಡಿ ಇಂತಹ ರಾಜಕಾರಣಿಗಳಿಗೆ ವೋಟು ಹಾಕಬೇಡಿ ಎಂದು ಮತದಾರರಿಗೆ ಹೇಳ್ತೀನಿ ಎಂದು ಕನ್ನಡ ಚಳವಳಿ ವಾಟಾಳ್​ ಪಕ್ಷದ ಅಧ್ಯಕ್ಷ ವಾಟಾಳ್​ ನಾಗರಾಜ್ ತಿಳಿಸಿದ್ದಾರೆ.

ವಾಟಾಳ್​ ಪಕ್ಷದ ಅಧ್ಯಕ್ಷ ವಾಟಾಳ್​ ನಾಗರಾಜ್

By

Published : Nov 17, 2019, 4:36 PM IST

ಮೈಸೂರು:ಉಪಚುನಾವಣೆಯಲ್ಲಿ‌ ಸ್ಪರ್ಧಿಸಿರುವ ಪಕ್ಷಾಂತರಿಗಳ ವಿರುದ್ಧ ರಾಜ್ಯಾದ್ಯಂತ ಪ್ರಚಾರ ಮಾಡಿ ಇಂತಹ ರಾಜಕಾರಣಿಗಳಿಗೆ ವೋಟು ಹಾಕಬೇಡಿ ಎಂದು ಮತದಾರರಿಗೆ ಹೇಳ್ತೀನಿ ಅಂತಾ ಕನ್ನಡ ಚಳವಳಿ ವಾಟಾಳ್​​ ಪಕ್ಷದ ಅಧ್ಯಕ್ಷ ವಾಟಾಳ್​ ನಾಗರಾಜ್ ತಿಳಿಸಿದ್ದಾರೆ.

ಉಪಚುನಾವಣೆಗೆ ಸ್ಪರ್ಧಿಸಿರುವ ಪಕ್ಷಾಂತರಿಗಳ ವಿರುದ್ಧ ಪ್ರಚಾರ ಮಾಡ್ತೀನಿ.. ವಾಟಾಳ್​ ನಾಗರಾಜ್

ಮೈಸೂರು ರೈಲ್ವೆ ನಿಲ್ದಾಣದ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪಕ್ಷಾಂತರಿಗಳು ಪ್ರಜಾಪ್ರಭುತ್ವವನ್ನು ಹಾಳು ಮಾಡಿದಲ್ಲದೇ,ಸರ್ಕಾರವನ್ನ ಪದಚ್ಯುತಿಗೊಳಿಸಿ ಬೇರೆ ಪಕ್ಷವನ್ನು ಸೇರಿ ಅಕ್ರಮ ಮಾಡಿದ್ದಾರೆ. ಇದೊಂದು ರೀತಿ ದರೋಡೆ. ಈ ಬಗ್ಗೆ ಸರ್ವೋಚ್ಛ ನ್ಯಾಯಾಲಯದಲ್ಲಿ ಮತ್ತೊಮ್ಮೆ ಮರು ಪರಿಶೀಲನೆ ಅರ್ಜಿ ಹಾಕಬೇಕು. ಕರ್ನಾಟಕದಲ್ಲಿ ಪಕ್ಷಾಂತರಿಗಳು ಪಾಪದ ಕೆಲಸ ಮಾಡಿದ್ದು ಸಂಸದೀಯ ವ್ಯವಸ್ಥೆಗೆ ಕಳಂಕ ತಂದಿದ್ದಾರೆ ಎಂದರು.

ಇನ್ನು, ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಪ್ರಜಾಪ್ರಭುತ್ವ ವ್ಯವಸ್ಥೆ ಬೇಕಾಗಿಲ್ಲ. ಶಾಸನ ಸಭೆ ಬೇಕಾಗಿಲ್ಲ. ಭ್ರಷ್ಟಾಚಾರ ಅವರ ಚಿಂತನೆಯಾಗಿದೆ. ಬಸ್ಮಾಸುರ ವರ ಪಡೆದು ಎಲ್ಲರ ತಲೆ‌ಮೇಲೆ ಕೈ ಇಟ್ಟಂತೆ, ಯಡಿಯೂರಪ್ಪ ಪ್ರಜಾಪ್ರಭುತ್ವದ ಮೇಲೆ ಕೈ ಇಟ್ಟಿದ್ದಾರೆ. ಹೀಗಾಗಿ ಪ್ರಾಮಾಣಿಕತೆ ಮತ್ತು ಪ್ರಜಾಪ್ರಭುತ್ವದ ಮೇಲೆ‌ ನಂಬಿಕೆ ಇಲ್ಲದಂತಾಗಿದೆ.

ಇದೇ ರೀತಿ ಮುಂದುವರೆದರೆ ಶಾಸನ ಸಭೆಯಲ್ಲಿ ರಾಜಕೀಯ ರೌಡಿಗಳು,ಜಾತಿವಾದಿಗಳು ಬರುತ್ತಾರೆ. ನಾನು ಭ್ರಷ್ಟಾಚಾರ,ಜಾತಿವ್ಯವಸ್ಥೆ ಮತ್ತು ಪಕ್ಷಾಂತರಿಗಳ ‌ವಿರುದ್ಧ ಅಜೆಂಡಾ ಇಟ್ಟುಕೊಂಡು ಶಿವಾಜಿನಗರ ಮತ್ತು ಮಹಾಲಕ್ಷ್ಮಿ ಬಡಾವಣೆಯಲ್ಲಿ ಸ್ಪರ್ಧಿಸಲು ನಿರ್ಧಾರ ಮಾಡಿದ್ದೇನೆ. ಶಾಸನ ಸಭೆಯಲ್ಲಿ ಒಬ್ಬ ಶಾಸಕ ಪ್ರಾಮಾಣಿಕತೆಯಿಂದ ಇರುವುದು ಕಾಣಲಿಲ್ಲ ಹಾಗಾಗಿ ಜಾತಿ, ಭ್ರಷ್ಟಾಚಾರ ವಿರುದ್ಧ ಹೋರಾಡಲು ಶಾಸನ ಸಭೆಗೆ ಹೋಗಬೇಕಾದ ಅವಶ್ಯಕತೆ ಇದೆ. ಯಡಿಯೂರಪ್ಪ ಎಂದರೇ ಎಡವಟ್ಟು, ಎಡವಟ್ಟು ಎಂದರೆ ಯಡಿಯೂರಪ್ಪ ಎಂದು ಕಿಡಿಕಾರಿದ್ರು.

ಹೆಚ್‌. ವಿಶ್ವನಾಥ್ ‌ಅವರ ಹುಣಸೂರು ಪ್ರತ್ಯೇಕ ಜಿಲ್ಲೆಯ ಬೇಡಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ವಾಟಾಳ್​, ಮೈಸೂರು ಜಿಲ್ಲೆಯನ್ನು ಒಡೆಯುವ ಕೆಲಸ ಮಾಡಬೇಡಿ. ನಿಮ್ಮ ಕೆಟ್ಟ ಆಲೋಚನೆಯಿಂದಾಗಿ ಈ ರೀತಿ ಮಾಡಬೇಡಿ ಎಂದರು.

ABOUT THE AUTHOR

...view details