ಮೈಸೂರು: ಕೆಲ ದಿನಗಳಿಂದ ನಾಪತ್ತೆಯಾಗಿದ್ದ ಬಾಬಾ ಆಟೋಮಿಕ್ ರಿಸರ್ಚ್ ಸೆಂಟರ್ ಕಿರಿಯ ವಿಜ್ಞಾನಿ ಅಭಿಷೇಕ್ ರೆಡ್ಡಿ ಗುಲ್ಲಾರ ಸುಳಿವು ಸಿಕ್ಕಿದೆ.
ಮೈಸೂರು: ನಾಪತ್ತೆಯಾಗಿದ್ದ ಯುವ ವಿಜ್ಞಾನಿ ವಿಜಯವಾಡದಲ್ಲಿ ಇರುವುದಾಗಿ ಕರೆ - Scientist Abhishek Reddy Gulla
ಕೆಲ ದಿನಗಳಿಂದ ಮೈಸೂರಿನಿಂದ ನಾಪತ್ತೆಯಾಗಿದ್ದ ಯುವ ವಿಜ್ಞಾನಿಯ ಸುಳಿವು ಸಿಕ್ಕಿದ್ದು, ನೆರೆಯ ಆಂಧ್ರದಲ್ಲಿ ಇರುವುದಾಗಿ ತಿಳಿದು ಬಂದಿದೆ.

ನಾಪತ್ತೆಯಾಗಿದ್ದ ಯುವ ವಿಜ್ಞಾನಿಯಿಂದ ಕರೆ
ಅಕ್ಟೋಬರ್ 6ರಂದು ಇಲವಾಲದ ನ್ಯೂ ಜನತಾ ಕಾಲೋನಿಯ ತಮ್ಮ ಮನೆಯಿಂದ ನಾಪತ್ತೆಯಾಗಿದ್ದರು. ಈ ಸಂಬಂಧ ಇಲವಾಲ ಪೊಲೀಸ್ ಠಾಣೆಯಲ್ಲಿ ಬಾರ್ಕ್ನ ಆಡಳಿತಾಧಿಕಾರಿ ಟಿ.ಕೆ.ಬೋಸ್ ನಾಪತ್ತೆ ಪ್ರಕರಣ ದಾಖಲಿಸಿದ್ದರು.
ಹುಡುಕಾಟ ನಡೆಸುತ್ತಿದ್ದ ಪೊಲೀಸರಿಗೆ ಅಭಿಷೇಕ್ ರೆಡ್ಡಿ ಗುಲ್ಲಾ ಸ್ವತಃ ಕರೆ ಮಾಡಿ ವಿಜಯವಾಡದಲ್ಲಿ ಇರುವುದಾಗಿ ಹೇಳಿದ್ದಾರೆ. ರೆಡ್ಡಿ ವಾಪಾಸ್ ಬಂದಾಗಲೇ ಹೆಚ್ಚಿನ ಮಾಹಿತಿ ತಿಳಿಯಲಿದೆ ಎಂದು ಪೊಲೀಸರು ಹೇಳಿದ್ದಾರೆ.