ಮೈಸೂರು: ಡಿಸೆಂಬರ್ 09ರಂದು ಮುಖ್ಯಮಂತ್ರಿ ಪದವಿಗೆ ಬಿಎಸ್ವೈ ರಾಜೀನಾಮೆ ನೀಡುತ್ತಾರೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಸಚಿವ ಸಿ.ಟಿ. ರವಿ ಟಾಂಗ್ ನೀಡಿದ್ದಾರೆ. ಸಿದ್ದರಾಮಯ್ಯನವರಿಗೆ ಈ ತರಹದ ಕನಸು ಬೀಳಬಾರದು. ಇದು ಕೈಗೆಟುಕುವ ನರಿಯ ದ್ರಾಕ್ಷಿ ತರಹ ಆಗಿಬಿಡುತ್ತೇ ಎಂದರು.
ಜೆಎಸ್‌ಎಸ್ ಮಹಿಳಾ ಕಾಲೇಜಿನಲ್ಲಿ ನಡೆದ 26ನೇ ಸಂಗೀತ ಸಮ್ಮೇಳನದ ಸಮಾರೋಪದ ನಂತರ ಮಾತನಾಡಿದ ಅವರು, ಚುನಾವಣೆ ಮುನ್ನವೇ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳಿಗೆ ಈ ರೀತಿ ಕನಸು ಬೀಳೋದಕ್ಕೆ ಆರಂಭವಾಗಿದೆ. ಫಲಿತಾಂಶದ ನಂತರ ಖೇಲ್ ಖತಂ ನಾಟಕ ಬಂದ್ ಆಗಲಿದ್ದು, ಬಿಜೆಪಿ ಸರ್ಕಾರ 3 ವರ್ಷ ಪೂರೈಸುತ್ತದೆ ಎಂದರು.
ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿಗಳನ್ನು ಜನ ತಿರಸ್ಕಾರ ಮಾಡಿದ್ದಾರೆ. ಸ್ಥಿರವಾದ ಒಳ್ಳೆಯ ಸರ್ಕಾರದಿಂದ ರಾಜ್ಯದಲ್ಲಿ ಉತ್ತಮ ಆಡಳಿತ ನೀಡಲು ಸಾಧ್ಯವಿದೆ ಎಂದು ತಿಳಿಸಿದರು.
ಸಂಗೀತ ಸಮ್ಮೇಳನದ ಸಮಾರೋಪ ಕಾರ್ಯಕ್ರಮ ಉಪಚುನಾವಣೆಯಲ್ಲಿ ಗೆದ್ದವರಿಗೆ ಅನಿವಾರ್ಯವಾಗಿ ಮಂತ್ರಿ ಮಾಡಬೇಕಿದೆ. ಸಿದ್ದಾಂತ ಧಾರಣೆ ಮಾಡಬೇಕು. ಕೇವಲ ಆಡಳಿತ ಹಾಗೂ ರಾಜಕೀಯ ನಡೆಸಲು ನಾವು ಬಂದಿಲ್ಲ ಎಂದರು. ರಾಜಕೀಯ ಹಾಗೂ ಆಡಳಿತದ ಜೊತೆಗೆ ಸೈದ್ಧಾಂತಿಕ ಹಿನ್ನೆಲೆಯಲ್ಲಿ ರಾಜಕೀಯ ಕ್ಷೇತ್ರಕ್ಕೆ ಬಂದಿದ್ದು, ಅದಕ್ಕೆ ಪೂರಕವಾಗಿ ಕೆಲಸ ಮಾಡಬೇಕಿದೆ ಎಂದರು.
ಫಲಿತಾಂಶ ನಂತರ ಸಂಪುಟ ವಿಸ್ತರಣೆ ನಡೆಯಲಿದೆ. ಯಾರಿಗೆ ಯಾವ ಸ್ಥಾನ ಕೊಡಬೇಕೆಂದು ಮುಖ್ಯಮಂತ್ರಿಗಳು ನಿರ್ಧಾರ ಮಾಡುತ್ತಾರೆ ಎಂದರು.
ಎಲ್ಲ ಕ್ಷೇತ್ರದಲ್ಲಿ ಗೆಲ್ಲುವ ವಿಶ್ವಾಸವಿದ್ದು, 13 ಮಂದಿ ಮಂತ್ರಿ ಆಗ್ತಾರೆ ಎಂದು ತಿಳಿಸಿದರು.