ಮೈಸೂರು:ಕಾನೂನಿನಲ್ಲಿ ನಮಗೆ 2 ಲಕ್ಷ ಹಣ ಇಟ್ಟುಕೊಳ್ಳಲು ಅವಕಾಶವಿದೆ. ಆದರೆ ಕೋಟಿ ಹಣವನ್ನು ಇಟ್ಟುಕೊಳ್ಳಲು ಅವಕಾಶ ಕೊಟ್ಟಿಲ್ಲ. ಇದನ್ನು ಪ್ರಶ್ನಿಸಬಾರದು ಎಂಬ ಮನೋಭಾವದ ಹಿನ್ನೆಲೆಯಲ್ಲಿ ಒಕ್ಕಲಿಗ ಸಮುದಾಯ ಪ್ರತಿಭಟನೆಗೆ ಮುಂದಾಗಿರುವುದು ಒಳ್ಳೆಯದಲ್ಲ ಎಂದು ಪರೋಕ್ಷವಾಗಿ ಇಂದಿನ ಪ್ರತಿಭಟನೆ ಬಗ್ಗೆ ಸಚಿವ ಸಿ.ಟಿ. ರವಿ ಪ್ರತಿಕ್ರಿಯೆ ನೀಡಿದ್ದಾರೆ.
ಭ್ರಷ್ಟಾಚಾರ ವಿಜೃಂಭಿಸುತ್ತಿದೆ: ಡಿಕೆಶಿ ಪರ ಪ್ರತಿಭಟನೆಗೆ ಸಿ. ಟಿ. ರವಿ ಕಿಡಿ - rally
ಶಾಂತವೇರಿ ಗೋಪಾಲಗೌಡ, ಕೆಂಗಲ್ ಹನುಮಂತಯ್ಯ, ಕುವೆಂಪು ಅವರಂತಹ ಶ್ರೇಷ್ಠ ವ್ಯಕ್ತಿಗಳನ್ನು ನೀಡಿದ ಸಮುದಾಯ ನಮ್ಮದು. ಆದರೆ ಈಗ ನಮ್ಮ ಸಮುದಾಯಕ್ಕೆ ಇಂಹವರು ಮಾದರಿಯಾಗಬೇಕು. ಇದನ್ನು ಬಿಟ್ಟು ಕೋಟ್ಯಂತರ ರೂಪಾಯಿ ಅಕ್ರಮ ಆಸ್ತಿ ಇಟ್ಟುಕೊಂಡಿರುವ ಆರೋಪದಲ್ಲಿ ಬಂಧಿತರಾಗಿರುವ ವ್ಯಕ್ತಿಯನ್ನು ಪ್ರಶ್ನಿಸಬಾರದು ಎಂಬ ಭಾವನೆಯನ್ನ ತಳಿದಿರುವುದು ಒಳ್ಳೆಯದಲ್ಲ ಎಂದು ಸಚಿವ ಸಿ.ಟಿ. ರವಿ ಹೇಳಿದ್ದಾರೆ.
ಡಿಕೆಶಿ ಬಂಧನ ಖಂಡಿಸಿ ನಡೆಯುತ್ತಿರುವ ಪ್ರತಿಭಟನೆ ಪ್ರತಿಕ್ರಿಯಿಸಿದ ಅವರು, ಶಾಂತವೇರಿ ಗೋಪಾಲಗೌಡ, ಕೆಂಗಲ್ ಹನುಮಂತಯ್ಯ, ಕುವೆಂಪು ಅವರಂತ ಶ್ರೇಷ್ಠ ವ್ಯಕ್ತಿಗಳನ್ನು ನೀಡಿದ ಸಮುದಾಯ ನಮ್ಮದು. ಆದರೆ ಈಗ ನಮ್ಮ ಸಮುದಾಯಕ್ಕೆ ಇಂಹವರು ಮಾದರಿಯಾಗಬೇಕು. ಇದನ್ನು ಬಿಟ್ಟು ಕೋಟ್ಯಂತರ ರೂಪಾಯಿ ಹಣ ಇಟ್ಟುಕೊಂಡ ವ್ಯಕ್ತಿಯನ್ನು ಪ್ರಶ್ನಿಸಬಾರದು ಎಂಬ ಭಾವನೆಯನ್ನ ಸಾಮೂಹಿಕವಾಗಿ ವ್ಯಕ್ತಪಡಿಸುತ್ತಿರುವುದು ಒಳ್ಳೆಯದಲ್ಲ ಎಂದಿದ್ದಾರೆ.
ಇನ್ನು, ಒಕ್ಕಲಿಗ ಸಮುದಾಯ ನ್ಯಾಯ ನೀತಿ ಪರವಾಗಿ ನಿಲ್ಲಬೇಕೊ ಅಥವಾ ಡಿ ಕೆ ಶಿವಕುಮಾರ್ ಅಂತವರಿಗೆ ಬೆಂಬಲ ಕೊಡಬೇಕೋ ಎಂಬುದನ್ನು ಯೋಚಿಸಬೇಕು ಎಂದರು. ಉಪ್ಪು ತಿಂದವರು ನೀರು ಕುಡಿಯಲೇ ಬೇಕು. ತಪ್ಪು ಮಾಡಿದವರು ಶಿಕ್ಷೆ ಅನುಭವಿಸಲೇಬೇಕು. ಇಡಿ ಮತ್ತು ಸಿಬಿಐ ಅನ್ನು ಬಿಜೆಪಿ ಹುಟ್ಟುಹಾಕಿಲ್ಲ. ಸಂವಿಧಾನದ ಅಡಿಯಲ್ಲಿ ಕೆಲಸ ಮಾಡುವ ಈ ಸಂಸ್ಥೆಗಳಿಗೆ ಎಲ್ಲಾ ಪಾರ್ಟಿಗಳು ಒಂದೇ. ಆದ್ರೆ ಕಲಿಯುಗದಲ್ಲಿ ಸತ್ಯ ವಿಜೃಂಭಿಸುವುದಿಲ್ಲ, ಬದಲಾಗಿ ಅಸತ್ಯ ವಿಜೃಂಭಿಸುತ್ತದೆ. ಪ್ರಾಮಾಣಿಕತೆಯ ಬದಲಾಗಿ ಭ್ರಷ್ಟಾಚಾರ ವಿಜೃಂಭಿಸುತ್ತದೆ ಎಂದು ಕಾಲಜ್ಞಾನಿಗಳು ಹೇಳಿದ ಮಾತನ್ನು ಸಚಿವ ಸಿ ಟಿ ರವಿ ಉಚ್ಛರಿಸಿದ್ದಾರೆ.