ಕರ್ನಾಟಕ

karnataka

ETV Bharat / state

ಎಸ್​ಐಟಿ ತನಿಖೆ ಬಗ್ಗೆ 'ನೋ ಕಮೆಂಟ್ಸ್​' ಎಂದ ಸಚಿವ ಯೋಗೇಶ್ವರ್ - ಎಸ್​ಐಟಿ ತನಿಖೆ ಬಗ್ಗೆ ನೋ ಕಮೆಂಟ್ಸ್

ಈ ಬಜೆಟ್​ನಲ್ಲಿ ರಾಜ್ಯದಲ್ಲಿ ಪ್ರವಾಸೋದ್ಯಮ ಅಭಿವೃದ್ದಿಗೆ ಪರೋಕ್ಷ ಹಾಗೂ ಪ್ರತ್ಯಕ್ಷವಾಗಿ ಸಾವಿರಾರು ಕೋಟಿ ರೂ ಹಣ ಮೀಸಲಾಗಿದೆ. ಇದರಿಂದ ಪ್ರವಾಸೋದ್ಯಮ ಅಭಿವೃದ್ಧಿಗೆ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಪ್ರವಾಸೋದ್ಯಮ ಸಚಿವ ಸಿ.ಪಿ.ಯೋಗೇಶ್ವರ್ ಹೇಳಿದ್ದಾರೆ.

CP Yogeeshwara
ಸಚಿವ ಯೋಗೇಶ್ವರ್

By

Published : Mar 12, 2021, 4:36 PM IST

ಮೃಸೂರು:ರಮೇಶ್‌ ಜಾರಕಿಹೊಳಿ ರಾಸಲೀಲೆ ಸಿಡಿ ಪ್ರಕರಣವನ್ನು ಎಸ್​ಐಟಿ ತನಿಖೆಗೆ ವಹಿಸಿರುವ ಬಗ್ಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಪ್ರವಾಸೋದ್ಯಮ ಸಚಿವ ಸಿ.ಪಿ.ಯೋಗೇಶ್ವರ್ ಹೇಳಿಕೆ ನೀಡಿದ್ದಾರೆ.

ಮೈಸೂರಿನ ಪತ್ರಿಕಾ ಭವನದಲ್ಲಿ ಮಾತನಾಡಿದ ಅವರು, ಮೈಸೂರು ಉಸ್ತುವಾರಿ ಸಚಿವರ ಬದಲಾವಣೆ ಬಗ್ಗೆ ನನಗೆ ಗೊತ್ತಿಲ್ಲ. ಈ ವಿಚಾರವನ್ನು ಸಿಎಂ ಬಳಿ ಕೇಳಿ. ನನ್ನದೇನಿದ್ದರೂ ಮೈಸೂರು ಅಭಿವೃದ್ಧಿ ಮಾಡುವುದು ಅಷ್ಟೇ ಎಂದರು. ಸಿಡಿ ಪ್ರಕರಣ ಎಸ್​ಐಟಿಗೆ ವಹಿಸಿರುವ ಬಗ್ಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ, ನೋ ಕಮೆಂಟ್ಸ್​ ಎಂದರು.

ಈ ಬಜೆಟ್​ನಲ್ಲಿ ರಾಜ್ಯದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಪರೋಕ್ಷ ಹಾಗೂ ಪ್ರತ್ಯಕ್ಷವಾಗಿ ಸಾವಿರಾರು ಕೋಟಿ ರೂ ಹಣ ಮೀಸಲಾಗಿದೆ. ಇದರಿಂದ ಪ್ರವಾಸೋದ್ಯಮ ಅಭಿವೃದ್ಧಿಗೆ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಮೈಸೂರು ಅರಮನೆಯಲ್ಲಿ 365 ದಿನವು ವಿಭಿನ್ನ ಕಾಯ್ರಕ್ರಮ, ದಸರಾ ವಸ್ತು ಪ್ರದರ್ಶನ ಆವರಣದಲ್ಲಿ 900 ಕೋಟಿ ರೂ ಟೆಂಡರ್ ಕರೆದು ಹಲವಾರು ಕಾರ್ಯಕ್ರಮಗಳನ್ನು ರೂಪಿಸಲು ಸಿದ್ದತೆ ಮಾಡಿಕೊಳ್ಳಲಾಗಿದೆ.

ಮೈಸೂರಿನಲ್ಲಿ ಹೆಲಿ ಟೂರಿಸಂ ಚಾಮುಂಡಿ ಬೆಟ್ಟಕ್ಕೆ ರೋಪ್‌ ವೇ ಮಾಡಲು ಟೆಂಡರ್ ಕರೆಯಲಾಗುವುದು ಎಂದರು.

ಕೆ.ಆರ್.ಎಸ್‌ನಲ್ಲಿ "ಡಿಸ್ನಿಲ್ಯಾಂಡ್" ಮಾದರಿ ನಿರ್ಮಾಣಕ್ಕೆ ಖಾಸಗಿ ಅವರ ಸಹಭಾಗಿತ್ವದಲ್ಲಿ ಡ್ಯಾಂಗೆ ತೊಂದರೆಯಾಗದ ರೀತಿಯಲ್ಲಿ ಕಾಮಗಾರಿ ನಡೆಸಲು ನೀಲ ನಕ್ಷೆ ತಯಾರಿಸಲಾಗಿದೆ. ಈ ಬಗ್ಗೆ ಮುಖ್ಯಮಂತ್ರಿಗಳೂ ಸಹ ಒಲವು ವ್ಯಕ್ತಪಡಿಸಿದ್ದಾರೆ ಎಂದ ಸಚಿವರು ಪ್ರವಾಸೋದ್ಯಮ ಇಲಾಖೆಯಿಂದ 85 ಕೋಟಿ ವೆಚ್ಚದಲ್ಲಿ ಬೇಲೂರು, ಬಾದಾಮಿ, ವಿಜಯಪುರ ಹಾಗೂ ಹಂಪಿಯಲ್ಲಿ 3 ಸ್ಟಾರ್ ಹೋಟೆಲ್ ನಿರ್ಮಾಣ ಮಾಡಲು ಚಿಂತೆನೆ ನಡೆಸಲಾಗಿದೆ ಎಂದರು.

ಪ್ರವಾಸೋದ್ಯಮ ಇಲಾಖೆಯಲ್ಲಿ‌ ಸರಿಯಾಗಿ ಕೆಲಸ ಮಾಡದ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ ಎಂದು ಇದೇ ಸಂದರ್ಭದಲ್ಲಿ ಸಚಿವರು ಎಚ್ಚರಿಕೆ ನೀಡಿದರು.

ABOUT THE AUTHOR

...view details