ಮೈಸೂರು: ವಿಜಯಾನಂದ ಕಾಶಪ್ಪನವರ್ ಬಾಯಿ ಮುಚ್ಚಿಸಲು ನಾನು ಯಾರು ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಪ್ರಶ್ನಿಸಿದ್ದಾರೆ.
ಸರ್ಕಾರಿ ಅತಿಥಿಗೃಹದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಒಮ್ಮೆ ಶಾಸಕರಾದವರು ಸಿಎಂ ಯಡಿಯೂರಪ್ಪ ಅವರು ಬಗ್ಗೆ ಮಾತನಾಡುವಾಗ ನಾಲಿಗೆ ಬಿಗಿ ಹಿಡಿದು ಮಾತನಾಡಿ ಅಂತ ಹೇಳಿದ್ದಷ್ಟೇ. ಮಾಧ್ಯಮದ ಮುಂದೆ ಬಂದು ಯಾರಾದರೂ ಏನಾದರೂ ಮಾತನಾಡಲಿ, ಅವರ ಬಾಯಿ ಮುಚ್ಚಿಸಲು ನಾನು ಯಾರು? ನಾನು ಇನ್ನು ಮುಂದೆ ಅವರ ವಿಚಾರಕ್ಕೆ ಪ್ರತಿಕ್ರಿಯೆ ನೀಡುವುದಿಲ್ಲ ಎಂದರು.