ಮೈಸೂರು:ಮೈಸೂರು-ನಂಜನಗೂಡು ರಸ್ತೆಯಲ್ಲಿರುವ ವಿವಾದಿತ ಬಸ್ ತಂಗುದಾಣದಲ್ಲಿದ್ದ ಎರಡು ಗೋಪುರಗಳನ್ನು ತೆರವುಗೊಳಿಸಿದ್ದಕ್ಕೆ ಶಾಸಕ ಎಸ್ ಎ ರಾಮದಾಸ್ ಅವರಿಗೆ ಟ್ವೀಟ್ ಮೂಲಕ ಸಂಸದ ಪ್ರತಾಪಸಿಂಹ ಧನ್ಯವಾದ ಹೇಳಿದ್ದಾರೆ.
ವಿವಾದಿತ ಬಸ್ ತಂಗುದಾಣದಲ್ಲಿ ಎರಡು ಗುಮ್ಮಟಗಳ ತೆರವು ವಿಚಾರವಾಗಿ ಟ್ವೀಟ್ ಮಾಡಿರುವ ಪ್ರತಾಪಸಿಂಹ, ನಾನು ಹೇಳಿದಂತೆ ಗುಂಬಜ್‌ಗಳನ್ನು ತೆರವು ಮಾಡಿಸಿದ್ದೇನೆ. ನಾನು ಹೇಳಿದಂತೆ ನಡೆದುಕೊಂಡಿದ್ದೇನೆಂದು, ಮಧ್ಯದಲ್ಲೊಂದು ಗುಂಬಜ್, ಅಕ್ಕಪಕ್ಕ ಎರಡು ಗುಂಬಜ್ ಇದ್ದರೆ ಅದು ಮಸೀದೀನೇ. ಅದನ್ನ ತೆರವು ಮಾಡಿಸಿದ್ದೇನೆ. ಗುಂಬಜ್ ತೆರವುಗೊಳಿಸಲು ಕಾಲಾವಕಾಶ ಕೇಳಿದ್ದ ಜಿಲ್ಲಾಧಿಕಾರಿಗಳಿಗೆ, ವಾಸ್ತವ ಅರಿತು ತಲೆ ಬಾಗಿದ ಶಾಸಕರಿಗೆ ಧನ್ಯವಾದ ಎಂದಿದ್ದಾರೆ.
ಮೈಸೂರಿಗೆ ನಂಜನಗೂಡು ಮುಖ್ಯರಸ್ತೆಯಲ್ಲಿ ಜೆಎಸ್ಎಸ್ ಕಾಲೇಜು ಬಳಿ ನಿರ್ಮಿಸಲಾಗಿದ್ದ ಬಸ್ ತಂಗುದಾಣ ಗುಂಬಜ್ ಮಾದರಿಯಲ್ಲಿದೆ. ಇದನ್ನು ಹೊಡೆದು ಹಾಕುತ್ತೇನೆ ಎಂದು ಪ್ರತಾಪ್ಸಿಂಹ ಹೇಳಿದ್ದರು. ಮತ್ತೊಂದೆಡೆ ಇದು ಗುಂಬಜ್ ಮಾದರಿಯಲ್ಲ, ಅರಮನೆ ಶೈಲಿಯ ಬಸ್ ತಂಗುದಾಣ ಎಂದು ಶಾಸಕ ರಾಮದಾಸ್ ಹೇಳಿದ್ದರು.
ಬಸ್ ತಂಗುದಾಣ ವಿಚಾರದಲ್ಲಿ ಸಂಸದ ಪ್ರತಾಪ ಸಿಂಹ, ಶಾಸಕ ರಾಮದಾಸ್ ಒಳಕಿತ್ತಾಟ ಮಾಡಿಕೊಂಡಿದ್ದರು. ಅಲ್ಲದೇ, ಬ್ರಾಹ್ಮಣರ ಸಮುದಾಯ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಪ್ರತಾಪಸಿಂಹ, ಬಸ್ ರಾಮದಾಸ್ ಕಾಲಿಗೆ ಬಿದ್ದು ನಮಸ್ಕರಿಸಿದ್ದರು. ಇದೀಗ ಬಸ್ ತಂಗುದಾಣದ ಎರಡು ಗುಂಬಜ್ ಗಳನ್ನ ತೆರವುಗೊಳಿಸಿರುವುದರಿಂದ ಶಾಸಕ ರಾಮದಾಸ್‌ಗೆ ಪ್ರತಾಪಸಿಂಹ ಟ್ವೀಟ್ ಮೂಲಕ ಧನ್ಯವಾದ ಹೇಳಿದ್ದಾರೆ.
ಓದಿ:ವಿವಾದಿತ ಬಸ್ ನಿಲ್ದಾಣದಲ್ಲಿ ಸುತ್ತೂರು ಶ್ರೀ, ಬೊಮ್ಮಾಯಿ, ಮೋದಿ ಫೋಟೋ.. ಪೊಲೀಸರಿಂದ ಭದ್ರತೆ