ಮೈಸೂರು:ಹಣ ಕೊಟ್ಟು ಟಿಕೆಟ್ ಕೇಳಿದಕ್ಕೆ ಯುವಕನ ಮೇಲೆ ಕಂಡಕ್ಟರ್ ಹಲ್ಲೆ ನಡೆಸಿರುವ ಘಟನೆ ಸರಗೂರು ಪಟ್ಟಣದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ನಡೆದಿದೆ. ಇಟ್ನ ಗ್ರಾಮದ ಶಶಿಕುಮಾರ್ ಎಂಬುವವರ ಮೇಲೆ ಕಂಡಕ್ಟರ್ ಗೋಪಾಲ್ ಎಂಬವರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಹೆಚ್.ಡಿ.ಕೋಟೆಯಿಂದ ಸರಗೂರಿಗೆ ಬರುವ ಕೆಎಸ್ಆರ್ಟಿಸಿ ಬಸ್ ಗೆ ಹ್ಯಾಂಡ್ ಪೋಸ್ಟ್ ಗ್ರಾಮದಿಂದ ಶಶಿಕುಮಾರ್ ಹತ್ತಿದ್ದರು. ಈ ವೇಳೆ, ಕಂಡಕ್ಟರ್ ಗೆ ಶಶಿಕುಮಾರ್ ಹಣವನ್ನು ಕೊಟ್ಟಿದ್ದಾರೆ. ಆದರೆ, ಕಂಡಕ್ಟರ್ ಟಿಕೆಟ್ ನೀಡಿಲ್ಲ,ಜೊತೆಗೆ ಬಾಕಿ ಹಣವನ್ನು ಕೊಟ್ಟಿಲ್ಲ. ಈ ಬಗ್ಗೆ ಕೇಳಿದಕ್ಕೆ ಸರಗೂರು ಬಸ್ ನಿಲ್ದಾಣದಲ್ಲಿ ಕಂಡಕ್ಟರ್ ಗೋಪಾಲ್ ಹಲ್ಲೆ ನಡೆಸಿರುವುದಾಗಿ ಶಶಿಕುಮಾರ್ ಆರೋಪಿಸಿದ್ದಾನೆ.