ಮೈಸೂರು: ಈ ಬಾರಿಯ ಬಜೆಟ್ ಮೇಲೆ ಹಳೇ ಮೈಸೂರು ಭಾಗದ ನಿರೀಕ್ಷೆಗಳೇನು?. ಚಿತ್ರನಗರಿಯ ಕನಸು, ದಸರಾ ಪ್ರಾಧಿಕಾರ ರಚನೆ, ಶಿಥಿಲಾವಸ್ಥೆ ತಲುಪಿರುವ ಪಾರಂಪರಿಕ ಕಟ್ಟಡಗಳ ಪುನಶ್ಚೇತನಕ್ಕೆ ಅನುದಾನ ಹೀಗೆ ಬಜೆಟ್ ಮೇಲೆ ಬೆಟ್ಟದಷ್ಟು ನಿರೀಕ್ಷೆಗಳಿವೆ. ಈ ಬಗ್ಗೆ ಜಿಲ್ಲಾ ಸಣ್ಣ ಕೈಗಾರಿಕೆ ಸಂಘಗಳ ಪ್ರಧಾನ ಕಾರ್ಯದರ್ಶಿ ಸುರೇಶ್ ಜೈನ್ ಹಾಗು ಮೈಸೂರು ಜಿಲ್ಲಾ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ನಾರಾಯಣ ಗೌಡ ಹಂಚಿಕೊಂಡಿರುವ ವಿಚಾರಗಳನ್ನು ಸಂಕ್ಷಿಪ್ತವಾಗಿ ಇಲ್ಲಿ ಕೊಡಲಾಗಿದೆ.
1. ಮೈಸೂರಿಗೆ ಕೇಂದ್ರ ಸರ್ಕಾರ ರಫ್ತು ಕೇಂದ್ರ ಸ್ಥಾಪನೆಗೆ 3 ಕೋಟಿ ರೂ ಕೊಟ್ಟಿದೆ. ಅದೇ ರೀತಿ 4 ಕೋಟಿ ಅನುದಾನವನ್ನೂ ರಾಜ್ಯ ಸರ್ಕಾರ ಘೋಷಣೆ ಮಾಡಿದೆ. ಅದರಲ್ಲಿ ಈಗಾಗಲೇ ಒಂದು ಕೋಟಿ ಕೊಟ್ಟಿದ್ದು ಉಳಿದ 3 ಕೋಟಿಯನ್ನು ಈ ಬಜೆಟ್‌ನಲ್ಲಿ ನೀಡಬೇಕು.
2. ಕೈಗಾರಿಕಾ ಪ್ರಾಧಿಕಾರದ ರಚನೆಗೆ 50 ಕೋಟಿ ರೂ ನೀಡಬೇಕು. 40 ಕೋಟಿ ರೂಪಾಯಿಗಳಲ್ಲಿ ಕೈಗಾರಿಕಾ ಪ್ರದೇಶಗಳ ಮೂಲಭೂತ ಸೌಕರ್ಯ ಅಭಿವೃದ್ದಿಗೆ ಈ ಬಜೆಟ್‌ನಲ್ಲಿ ಹಣ ನೀಡಬೇಕು. ಕೆ ಐ ಡಿ ಬಿ ಅಥವಾ ಸ್ಥಳೀಯ ಸಂಸ್ಥೆಗಳ ಅನುದಾನಕ್ಕೆ 3 ಕೋಟಿ ನೀಡಬೇಕು. ಕೈಗಾರಿಕಾ ಕ್ಲಸ್ಟರ್ ಅಭಿವೃದ್ಧಿಗೆ ಕೇಂದ್ರ ಸರ್ಕಾರ 10 ರಿಂದ 20 ಕೋಟಿ ರೂ ನೀಡುತ್ತದೆ. ಅದೇ ರೀತಿ ರಾಜ್ಯ ಸರ್ಕಾರ ಹೆಚ್ಚಿನ ಹಣ ನೀಡಬೇಕು.