ಮೈಸೂರು:ನಂಜನಗೂಡು ತಾಲೂಕಿನ ಹುಲ್ಲಹಳ್ಳಿ ಹೋಬಳಿಯ ಹುರ ಹಾಗೂ ಮಡಕೆ ಹುಂಡಿ ಗ್ರಾಮದಲ್ಲಿ ವಿರೂಪಗೊಂಡ ಬುದ್ಧನ ಮೂರ್ತಿಗಳು ಪತ್ತೆಯಾಗಿವೆ.
ನಂಜನಗೂಡು ತಾಲೂಕಿನಲ್ಲಿ ವಿರೂಪಗೊಂಡ ಬುದ್ಧನ ಮೂರ್ತಿಗಳು ಪತ್ತೆ - ನಂಜನಗೂಡು
ನಂಜನಗೂಡು ತಾಲೂಕಿನ ಹುಲ್ಲಹಳ್ಳಿ ಹೋಬಳಿಯ ಹುರ ಹಾಗೂ ಮಡಕೆ ಹುಂಡಿ ಗ್ರಾಮದಲ್ಲಿ ವಿರೂಪಗೊಂಡ ಬುದ್ಧನ ಮೂರ್ತಿಗಳು ಪತ್ತೆಯಾಗಿವೆ. ಈ ಮೂರ್ತಿಗಳನ್ನು ಪಾರಂಪರಿಕ ಇಲಾಖೆಯು ಸಂರಕ್ಷಣೆ ಮಾಡಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಬುದ್ಧನ ಮೂರ್ತಿಯ ಕುರುಹುಗಳು ಪತ್ತೆ
ಹುರ ಹಾಗೂ ಮಡಿಕೆಹುಂಡಿ ಗ್ರಾಮದ ಜಮೀನುಗಳಲ್ಲಿ ಚಿಕ್ಕಣ್ಣ ಹಾಗೂ ಸ್ನೇಹಿತರು ಈ ವಿರೂಪಗೊಂಡ ಬುದ್ಧನ ಪ್ರತಿಮೆಗಳನ್ನು ಪತ್ತೆ ಮಾಡಿದ್ದಾರೆ.
ಇನ್ನು ಕ್ರಿ.ಪೂ.ದಲ್ಲಿ ಬೌದ್ಧ ಧರ್ಮದ ಪ್ರಚಾರಕ್ಕಾಗಿ ಮೈಸೂರಿಗೆ ಬಂದಿದ್ದ ಪ್ರಚಾರಕರು ಈ ಪ್ರತಿಮೆಗಳನ್ನು ಮಾಡಿರಬಹುದೆಂದು ಅಂದಾಜಿಸಲಾಗಿದೆ. ಸದ್ಯ ಸಿಕ್ಕಿರುವ ಬುದ್ಧನ ವಿರೂಪಗೊಂಡ ಮೂರ್ತಿಗಳನ್ನು ಪಾರಂಪರಿಕ ಇಲಾಖೆ ಸಂರಕ್ಷಣೆ ಮಾಡಬೇಕೆಂದು ಗ್ರಾಮಸ್ಥರು ಒತ್ತಾಯ ಮಾಡಿದ್ದಾರೆ.