ಕರ್ನಾಟಕ

karnataka

ETV Bharat / state

ಹಳೆ ಮೈಸೂರು ಭಾಗದಿಂದ ಪುತ್ರನನ್ನು ಕಣಕ್ಕಿಳಿಸಲು ಬಿಎಸ್​ವೈ ಪ್ಲಾನ್ : ಸ್ಥಳೀಯ ಬಿಜೆಪಿ ನಾಯಕರಲ್ಲಿ ತಳಮಳ? - ಪುತ್ರನನ್ನು ಕಣಕ್ಕಿಳಿಸಲು ಬಿಎಸ್​ವೈ ಪ್ಲಾನ್

ಸಿಎಂ ಯಡಿಯೂರಪ್ಪ ಪುತ್ರ, ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ ​ವೈ ವಿಜಯೇಂದ್ರ ಮೈಸೂರು ನಗರದಲ್ಲಿ ಖಾಯಂ ವಾಸ ಮಾಡಲು ಹೊರಟಿರುವುದು ಪಕ್ಷದ ಕಾರ್ಯಕರ್ತರಲ್ಲಿ ಹೊಸ ಹುರುಪು ಮೂಡಿಸಿದರೆ,‌ ಮೂಲ‌ ಬಿಜೆಪಿ ನಾಯಕರಲ್ಲಿ ತಳಮಳವನ್ನುಂಟು ಮಾಡಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಇದರಿಂದ ಸ್ಥಳೀಯ ನಾಯಕರು ಮೂಲೆ ಗುಂಪಾಗಲಿದ್ದಾರೆ ಎಂಬ ಚರ್ಚೆ ನಡೆಯುತ್ತಿದೆ.

BSY Political game in old Mysuru Region
ಹಳೆ ಮೈಸೂರು ಭಾಗದಿಂದ ಪುತ್ರನನ್ನು ಕಣಕ್ಕಿಳಿಸಲು ಬಿಎಸ್​ವೈ ಪ್ಲಾನ್

By

Published : Mar 24, 2021, 4:33 PM IST

ಮೈಸೂರು : ಮುಂದಿನ ದಿನಗಳಲ್ಲಿ ತಮ್ಮ ಪುತ್ರ ಮೈಸೂರಿನಲ್ಲೇ ಮನೆ ಮಾಡಿ, ಅಲ್ಲಿಂದಲೇ ಸ್ಪರ್ಧೆ ಮಾಡುತ್ತಾರೆ ಎಂಬ ಮುಖ್ಯಮಂತ್ರಿ ಬಿ.ಎಸ್​ ಯಡಿಯೂರಪ್ಪ ಅವರ ಹೇಳಿಕೆ ಹಳೆ ಮೈಸೂರು ಭಾಗದ ಬಿಜೆಪಿಯಲ್ಲಿ ದೊಡ್ಡ ಸಂಚಲನವನ್ನೇ ಉಂಟು ಮಾಡಿದೆ.

2018 ರಲ್ಲಿ ವರುಣ ಕ್ಷೇತ್ರದಿಂದ ಯಡಿಯೂರಪ್ಪ ಪುತ್ರ ಬಿ.ವೈ. ವಿಜಯೇಂದ್ರ ಸ್ಪರ್ಧಿಸುತ್ತಾರೆ ಎಂಬ ಸುದ್ದಿ ಹರಿದಾಡಿತ್ತು. ಇದಕ್ಕೆ ಪೂರಕವಾಗಿ ವಿಜಯೇಂದ್ರ ವರುಣ ಗ್ರಾಮದಲ್ಲಿ ವಾಸ್ತವ್ಯ ಹೂಡಲು ಒಂದು ಮನೆಯನ್ನೂ ಬಾಡಿಗೆಗೆ ಪಡೆದಿದ್ದರು. ಈ ಮನೆಯಲ್ಲಿ ಪೂಜೆ ಮಾಡಿಸಿ ಗೃಹ ಪ್ರವೇಶ ಕೂಡ ಮಾಡಿದ್ದರು. ಆದರೆ, ಕೊನೆ ಕ್ಷಣದಲ್ಲಿ ಹೈಕಮಾಂಡ್ ಟಿಕೆಟ್ ನೀಡಲು ನಿರಾಕರಿಸಿತ್ತು. ಆ ಬಳಿಕ ವರುಣ ಕ್ಷೇತ್ರದ ಸ್ಪರ್ಧೆಯ ಬಗ್ಗೆ ವಿಜಯೇಂದ್ರ ಆಸೆಯನ್ನು ಕೈಬಿಟ್ಟಿದ್ದರು.

ವಿಜಯೇಂದ್ರ ಖಾಯಂ ವಾಸದ ಲೆಕ್ಕಾಚಾರವೇನು?

ಸಿಎಂ ಬಿ.ಎಸ್​ ಯಡಿಯೂರಪ್ಪ ಅವರಿಗೆ ಈ ಅವಧಿಯೇ ಕೊನೆಯದಾಗಿದ್ದು, ಉಳಿದ ಎರಡು ವರ್ಷಗಳಲ್ಲಿ ತಮ್ಮ ಮಗ ಬಿ.ವೈ. ವಿಜಯೇಂದ್ರ ಅವರಿಗೆ ರಾಜಕೀಯ ನೆಲೆ ಒದಗಿಸಲು ಹಾಗೂ ಹಳೆ ಮೈಸೂರು ಭಾಗದಲ್ಲಿ ಬಿಜೆಪಿಯನ್ನು ಕಟ್ಟಲು ಪ್ಲಾನ್ ಮಾಡಿಕೊಂಡಿದ್ದಾರೆ. ಈ ನಿಟ್ಟಿನಲ್ಲಿ, ತಮ್ಮ ಪುತ್ರ ಮೈಸೂರಿನಲ್ಲೇ ಖಾಯಂ ಮನೆ ಮಾಡಿ, ಅಲ್ಲಿಂದಲೇ ಸ್ಪರ್ಧಿಸುತ್ತಾರೆ ಎಂದು ಕಳೆದ ಭಾನುವಾರ ರಾಯಚೂರು ಜಿಲ್ಲೆಯ ಸಿಂಧನೂರಿನಲ್ಲಿ ಹೇಳಿದ್ದರು. ಈ ಹಿನ್ನೆಲೆ ವಿಜಯೇಂದ್ರ ವರುಣ ಕ್ಷೇತ್ರದಿಂದ ಸ್ಪರ್ಧಿಸಬಹುದು ಎಂಬ ಮಾತುಗಳು ಕೇಳಿಬರುತ್ತಿವೆ.

ಓದಿ : ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ನಿವಾಸದಲ್ಲಿ ಶಾಸಕರಿಗಾಗಿ ಭೋಜನಕೂಟ

ವರುಣ ಕ್ಷೇತ್ರದಿಂದ ಬಿ ವೈ ವಿಜಯೇಂದ್ರ ಅಖಾಡಕ್ಕಿಳಿದರೆ, ಹಳೆ ಮೈಸೂರು ಭಾಗದ ಮೈಸೂರು, ಮಂಡ್ಯ, ಚಾಮರಾಜನಗರ, ಕೊಡಗು, ಹಾಸನ ಹಾಗೂ ರಾಮನಗರ ಜಿಲ್ಲೆಯಲ್ಲಿ ಪಕ್ಷ ಸಂಘಟನೆ ಮಾಡಬಹುದು. ಮುಂದಿನ ವಿಧಾನಸಭಾ ಚುನಾವಣಯಲ್ಲಿ ಬಿಜೆಪಿ ಹೆಚ್ಚಿನ ಸ್ಥಾನ ಗಳಿಸಬಹುದು ಎಂಬುವುದು ಯಡಿಯೂರಪ್ಪನವರ ಲೆಕ್ಕಾಚಾರವಾಗಿದೆ. ಇದರ ಜೊತೆಗೆ ಹಳೆ ಮೈಸೂರು ಭಾಗದಲ್ಲಿ ಪ್ರಸಿದ್ಧ ಲಿಂಗಾಯತ ಮಠಗಳಿದ್ದು, ಈ ಭಾಗದಲ್ಲಿ ಲಿಂಗಾಯತ ನಾಯಕರ ಕೊರತೆ ಇದೆ. ಈ ದೃಷ್ಟಿಯಿಂದ ಜಾತಿ ಹೆಸರು ಬಳಸಿಕೊಂಡು ಕೆಲವು ಅಭಿವೃದ್ಧಿ ಕೆಲಸಗಳನ್ನು ಮಾಡಿ, ತಮ್ಮ ಬೆಂಬಲಿಗರಿಗೆ ಕೆಲವು ನಿಗಮ ಮಂಡಳಿಗಳಲ್ಲಿ ಅಧಿಕಾರ ಕೊಡಿಸಿ, ಮುಂದಿನ ಚುನಾವಣೆಯಲ್ಲಿ ವರುಣ ಕ್ಷೇತ್ರದಿಂದಲೇ ಲಿಂಗಾಯತ ನಾಯಕರಾಗಿ ಬೆಳೆಯುವ ಲೆಕ್ಕಾಚಾರವು ವಿಜಯೇಂದ್ರ ಅವರಿಗೆ ಇದೆ ಎಂದು ಹೇಳಲಾಗ್ತಿದೆ.

ಮೂಲ ಬಿಜೆಪಿಗರಲ್ಲಿ ತಳಮಳ :ವಿಜಯೇಂದ್ರ ಮೈಸೂರು ನಗರದಲ್ಲಿ ಖಾಯಂ ವಾಸಕ್ಕೆ ಮುಂದಾಗಿರುವುದು ಒಂದೆಡೆ ಪಕ್ಷದ ಕಾರ್ಯಕರ್ತರಲ್ಲಿ ಹೊಸ ಹುರುಪು ಮೂಡಿಸಿದರೆ,‌ ಮೂಲ‌ ಬಿಜೆಪಿ ನಾಯಕರಲ್ಲಿ ತಳಮಳ ಉಂಟು ಮಾಡಿದೆ. ಇಲ್ಲಿ ಮೂರು ನಾಲ್ಕು ಬಾರಿ ಗೆದ್ದ ಬಿಜೆಪಿ ಶಾಸಕರು, ಸಂಸದರು, ವಿಧಾನಪರಿಷತ್ ಸದಸ್ಯರಿದ್ದು, ವಿಜಯೇಂದ್ರ ಈ ಭಾಗದಲ್ಲಿ ಪ್ರಭಾವ ಬೆಳೆಸಿಕೊಂಡರೆ ತಮ್ಮ ಹಿರಿತನ ಹಾಗೂ ಅನುಭವಕ್ಕೆ ಬೆಲೆ ಇಲ್ಲದಂತೆ ಆಗುತ್ತದೆ ಎಂಬ ಭಯ ಬಿಜೆಪಿ ನಾಯಕರಿಗೆ ಕಾಡುತ್ತಿದೆ ಎನ್ನಲಾಗ್ತಿದೆ.

ಒಕ್ಕಲಿಗೆ ಮತಗಳ ಮೇಲೆ ಬಿಎಸ್​ವೈ ಕಣ್ಣು :ಮೈಸೂರು ಭಾಗದ 57 ವಿಧಾನಸಭಾ ಕ್ಷೇತ್ರಗಳಲ್ಲಿ ವಕ್ಕಲಿಗರ ‌ಪ್ರಾಬಲ್ಯವಿದೆ. ಈ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವಿನ ಲೆಕ್ಕಾಚಾರ ಹಾಕಿರುವ ಬಿಎಸ್​ವೈ ಅವರು ಪುತ್ರನನ್ನು ಮೈಸೂರಿನಲ್ಲಿ ವಾಸ್ತವ್ಯ ಹೂಡಿಸಿ, ಮುಂದಿನ ನಾಯಕನಾಗಿ ಬೆಳೆಸಲು ಹೊಸ ಕಾರ್ಯತಂತ್ರ ರೂಪಿಸಿದ್ದಾರೆ ಎಂದು ಹೇಳಲಾಗ್ತಿದೆ.

ABOUT THE AUTHOR

...view details