ಮೈಸೂರು :ಚಿಕ್ಕಪ್ಪನಅಪ್ರಾಪ್ತ ಮಗಳು ಬಾಲ್ಯ ವಿವಾಹ ಮಾಡ್ತಿರೋದನ್ನ ಪ್ರಶ್ನೆ ಮಾಡಿದ್ದಕ್ಕೆ ಬಾಲಕಿಯ ಅಣ್ಣನಿಗೆ ಚಾಕು ಇರಿದು, ಆಕೆಯನ್ನು ಮದಯವೆಯಾದ ವ್ಯಕ್ತಿ ನಾಪತ್ತೆಯಾಗಿರುವ ಘಟನೆ ನಂಜನಗೂಡು ತಾಲೂಕಿನ ಮಲ್ಲನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಚಾಕು ಇರಿತಕ್ಕೊಳಗಾದ ವ್ಯಕ್ತಿ ಹೆಸರು ನಾಗೇಶ್. ಈತನ ಚಿಕ್ಕಪ್ಪನ ಮಗಳಾದ ಅಪ್ರಾಪ್ತೆಯನ್ನು ಅದೇ ಗ್ರಾಮದ ಮಾದೇಶ್ ಎಂಬ ಯುವಕ ಗುಪ್ತವಾಗಿ ಬಾಲ್ಯ ವಿವಾಹವಾಗಿದ್ದ. ಇದನ್ನು ಪ್ರಶ್ನೆ ಮಾಡಿದ ನಾಗೇಶನಿಗೆ ಮಾದೇಶ ಚಾಕುವಿನಿಂದ ಇರಿದು ನಾಪತ್ತೆಯಾಗಿದ್ದ.