ಕರ್ನಾಟಕ

karnataka

ETV Bharat / state

ಶಿರಾದಲ್ಲಿ ಸಿಎಂ ಪುತ್ರ ವಿಜಯೇಂದ್ರ ದುಡ್ಡಿನ‌ ಪ್ರವಾಹ ಹರಿಸುತ್ತಿದ್ದಾರೆ: ಬ್ರಿಜೇಶ್ ಕಾಳಪ್ಪ - Brijesh Kalappa allegations

ಶಿರಾದಲ್ಲಿ ಸಿಎಂ ಬಿಎಸ್​​ವೈ ಪುತ್ರ, ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ‌. ವಿಜಯೇಂದ್ರ ದುಡ್ಡಿನ ಪ್ರವಾಹ ಹರಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ವಕ್ತಾರ ಬ್ರಿಜೇಶ್ ಕಾಳಪ್ಪ ಆರೋಪಿಸಿದ್ದಾರೆ.

Congress national spokesperson Brijesh Kalappa
ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ವಕ್ತಾರ ಬ್ರಿಜೇಶ್ ಕಾಳಪ್ಪ

By

Published : Oct 27, 2020, 1:56 PM IST

ಮೈಸೂರು:ಶಿರಾ ಉಪಚುನಾಚಣೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಪುತ್ರ ಹಾಗೂ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ‌. ವಿಜಯೇಂದ್ರ ಹಣದ ಪ್ರವಾಹ ಹರಿಸುತ್ತಿದ್ದಾರೆ ಎಂದು ಕಾಂಗ್ರೆಸ್ ವಕ್ತಾರ ಬ್ರಿಜೇಶ್ ಕಾಳಪ್ಪ ಆರೋಪಿಸಿದರು.

ಶಿರಾದಲ್ಲಿ ವಿಜಯೇಂದ್ರ ದುಡ್ಡಿನ‌ ಪ್ರವಾಹ ಹರಿಸುತ್ತಿದ್ದಾರೆ: ಬ್ರಿಜೇಶ್ ಕಾಳಪ್ಪ ಆರೋಪ

ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್​ ಅಭ್ಯರ್ಥಿ ಟಿ.ಬಿ. ಜಯಚಂದ್ರ ಅವರು 1 ಟಿಎಂಸಿ ಕಾವೇರಿ ನೀರನ್ನು ಶಿರಾಗೆ ಕೊಂಡೊಯ್ದಿದ್ದಾರೆ. ಇದು ಅವರ ದೊಡ್ಡ ಸಾಧನೆ. ಆಧುನಿಕ ಭಗೀರಥ ಎಂದು ಅಲ್ಲಿನ ಜನ ಹೇಳುತ್ತಿದ್ದಾರೆ. ಆದರೆ, ವಿಜಯೇಂದ್ರ ಅವರು ಅಲ್ಲಿ ದುಡ್ಡಿನ ಪ್ರವಾಹ ಹರಿಸುತ್ತಿದ್ದಾರೆ. ಬೇರೆ ಎಲ್ಲಾ ಕಾರ್ಯಗಳಿಗೆ ಹಣ ನೀಡದ ಬಿಜೆಪಿ ಭ್ರಷ್ಟಾಚಾರಿ ಪಕ್ಷ. ವೆಂಟಿಲೇಟರ್​​ಗಳನ್ನು ಮಾರುಕಟ್ಟೆ ಬೆಲೆಗಿಂತ ಹೆಚ್ಚಿನ ಬೆಲೆಗೆ ಖರೀದಿಸಿದ್ದಾರೆ. ಇವುಗಳಲ್ಲಿ ಕೊಳ್ಳೆ ಹೊಡೆದ ಹಣವನ್ನು ಶಿರಾ ಹಾಗೂ ಆರ್.ಆರ್. ನಗರದಲ್ಲಿ ಚೆಲ್ಲುತ್ತಿದ್ದಾರೆ. ದುಡ್ಡಿನ ಮೂಲಕ ಚುನಾವಣೆ ಗೆಲ್ಲಬಹುದೆಂಬ ಭ್ರಮೆ ಬಿಜೆಪಿಯವರಿಗಿದೆ. ಎರಡೂ ಕ್ಷೇತ್ರಗಳ ಮತದಾರರು ಬಿಜೆಪಿಗೆ ಈ ಬಾರಿ ತಕ್ಕ ಪಾಠ ಕಲಿಸಲಿದ್ದಾರೆ‌ ಎಂದರು.

ಶಿರಾ, ಆರ್.ಆರ್. ನಗರ‌ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲ್ಲಲಿದೆ. ಬಿಎಸ್​​ವೈ ಅವರನ್ನು ಬಿಜೆಪಿ ಮರಣ ಶಯ್ಯೆಯಲ್ಲಿ ಮಲಗಿಸಿದೆ. ಒಂದು ವೇಳೆ ಆ ಎರಡೂ ಕ್ಷೇತ್ರಗಳನ್ನು ಸೋತರೆ ಯಡಿಯೂರಪ್ಪ ಅವರನ್ನು ಕೆಳಗಿಳಿಸುತ್ತಾರೆ. ಶಿರಾದಲ್ಲಿ ಕೆ.ಎನ್. ರಾಜಣ್ಣ ಹಾಗೂ ಜಯಚಂದ್ರ ಒಟ್ಟಿಗೆ ಪ್ರಚಾರ ಮಾಡುತ್ತಿದ್ದಾರೆ‌ ಎಂದರು.

ಬಿಹಾರ ಚುನಾವಣೆಯಲ್ಲಿ‌ ಮತದಾರರು ಬಿಜೆಪಿಗೆ ದೊಡ್ಡ ಮಟ್ಟದ ಪಾಠ ಕಲಿಸುತ್ತಾರೆ. ಬಿಹಾರದಲ್ಲಿ ಚಿರಾಗ್ ಪಾಸ್ವಾನ್ ಅವರು ನಿತೀಶ್ ಕುಮಾರ್ ಅವರನ್ನು ಜೈಲಿಗೆ ಕಳುಹಿಸುವುದಾಗಿ ಹೇಳುತ್ತಿದ್ದಾರೆ. 2020ರ ಬಳಿಕ ಎಲ್ಲಾ ಚುನಾವಣೆಗಳನ್ನು ಬಿಜೆಪಿ ಸೋಲುತ್ತಿದೆ ಎಂದು ಅವರು ಬ್ರಿಜೇಶ್​ ಕಾಳಪ್ಪ ಹೇಳಿದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಮಾತನ್ನ ಸಿದ್ದರಾಮಯ್ಯ ಕೇಳಲ್ಲ, ಅಲ್ಲಿ ಸಮನ್ವಯದ ಕೊರತೆಯಿದೆ. ಹಾಗಾಗಿ ಪಕ್ಷ ಬಿಟ್ವಿ ಎನ್ನುವ ಸಚಿವ ಎಸ್​ ಟಿ ಸೋಮಶೇಖರ್​ ಹೇಳಿಕೆಗೆ ಪ್ರತಿಕ್ರಿಯಿಸಿದ ಬ್ರಿಜೇಶ್​,‌ ಸೋಮಶೇಖರ್​​ಗೆ ಎಷ್ಟು ಹಣ ಹೋಗಿದೆ?‌‌ ಎಂಬುದನ್ನು ಹೇಳಬೇಕು. ದ್ವಂದ್ವ ಹೇಳಿಕೆ ನೀಡುವುದರಲ್ಲಿ ಅವರು‌ ನಿಸ್ಸೀಮರು‌. ಈ ಹಿಂದೆ ಡಿಕೆಶಿ ನನ್ನ ರಾಜಕೀಯ ಗುರು ಎಂದು ಸೋಮಶೇಖರ್ ಹೇಳಿದ್ದರು. ಈಗ ಈ ರೀತಿ ಹೇಳಿಕೆ ನೀಡುತ್ತಿದ್ದಾರೆ. ಈಗ ಅವರ ಯಾವ ಮಾತನ್ನ ನಂಬಬೇಕು? ಡಿಕೆಶಿ ಹಾಗೂ ಸಿದ್ದರಾಮಯ್ಯ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಇದೆಲ್ಲ ಕೇವಲ ಮಾಧ್ಯಮದಲ್ಲಿ ಮಾತ್ರವೇ ಚರ್ಚೆಯಾಗುತ್ತಿರುವುದು. ನಮ್ಮಲ್ಲಿ ಎಲ್ಲಾ ನಾಯಕರು ಒಗ್ಗಟ್ಟಾಗಿದ್ದೇವೆ ಎಂದು ಕಾಂಗ್ರೆಸ್​ ವಕ್ತಾರ ಸ್ಪಷ್ಟಪಡಿಸಿದರು.

ABOUT THE AUTHOR

...view details