ಮೈಸೂರು: ಕಳೆದ ವಾರ ಪರೋಕ್ಷವಾಗಿ ಶಾಸಕ ರಾಮದಾಸ್ ವಿರುದ್ಧ ವಾಕ್ಸಮರ ನಡೆಸಿದ್ದ ಸಂಸದ ಪ್ರತಾಪ್ ಸಿಂಹ ಇಂದು ಪ್ರತಿಭಟನಾ ಮೆರವಣಿಗೆ ವೇಳೆ ರಾಮದಾಸ್ ಅವರ ಕಾಲು ಮುಟ್ಟಿ ನಮಸ್ಕರಿಸಿ ಎಲ್ಲರಿಗೂ ಆಶ್ಚರ್ಯವನ್ನುಂಟು ಮಾಡಿದರು.
ಇಂದು, ನಗರದ ಗನ್ ಹೌಸ್ ಇಂದ ಬ್ರಾಹ್ಮಣ ಸಮುದಾಯದ ಪ್ರತಿಭಟನಾ ಮೆರವಣಿಗೆ ಆರಂಭವಾಯಿತು. ಆ ಸಂದರ್ಭದಲ್ಲಿ ಪ್ರತಿಭಟನಾ ಮೆರವಣಿಗೆಯಲ್ಲಿದ್ದ ರಾಮದಾಸ್ ಅವರ ಕಡೆ ಬಂದ ಸಂಸದ ಪ್ರತಾಪ್ ಸಿಂಹ ಅವರು, ರಾಮದಾಸ್ ಅವರ ಕಾಲು ಮುಟ್ಟಿ ನಮಸ್ಕರಿಸಿದರು.