ಕರ್ನಾಟಕ

karnataka

ETV Bharat / state

ಬರುವ ಜನವರಿ ತಿಂಗಳಿನಲ್ಲಿ ರಾಜ್ಯ ಬಿಜೆಪಿ ಸರ್ಕಾರ ಇರೋದಿಲ್ಲ.. ಮಾಜಿ ಸಚಿವ ಖಾದರ್‌ ಭವಿಷ್ಯ - ಮೈಸೂರು ಕಾಂಗ್ರೆಸ್​ ಸಭೆ ಹೆಚ್​. ವಿಶ್ವನಾಥ್ ವಿರುದ್ಧ ಹೇಳಿಕೆ ಸುದ್ದಿ

ಕಳೆದ ಚುನಾವಣೆಯಲ್ಲಿ ಹೆಚ್ ಡಿ ದೇವೇಗೌಡ ಹಾಗೂ ಹೆಚ್ ಡಿ ಕುಮಾರಸ್ವಾಮಿ ಅವರ ಮುಖನೋಡಿ ಹೆಚ್‌.ವಿಶ್ವನಾಥ್ ಅವರಿಗೆ ಮತ ಹಾಕಿ ಗೆಲ್ಲಿಸಿದ್ದೆವು. ಆದರೆ, ಈ ಸಾರಿ ತಕ್ಕ ಪಾಠ ಕಲಿಸುತ್ತೀವಿ ಎಂದು ಯುವಕನೋರ್ವ ಕಾಂಗ್ರೆಸ್​ ಸಭೆಯಲ್ಲಿ ಮಾಜಿ ಸಚಿವ ಯು ಟಿ ಖಾದರ್‌ ಅವರ ಎದುರೇ ಹೇಳಿಕೆ ನೀಡಿದ್ದಾನೆ.

ಮೈಸೂರು ಕಾಂಗ್ರೆಸ್ ಪ್ರಚಾರ ಸಭೆ

By

Published : Nov 25, 2019, 12:36 PM IST

ಮೈಸೂರು: ಕಳೆದ ಚುನಾವಣೆಯಲ್ಲಿ ಹೆಚ್ ಡಿ ದೇವೇಗೌಡ ಹಾಗೂ ಹೆಚ್ ಡಿ ಕುಮಾರಸ್ವಾಮಿ ಅವರ ಮುಖನೋಡಿ ಹೆಚ್‌.ವಿಶ್ವನಾಥ್ ಅವರಿಗೆ ಮತ ಹಾಕಿ ಗೆಲ್ಲಿಸಿದ್ದೆವು. ಆದರೆ, ಈ ಸಾರಿ ತಕ್ಕ ಪಾಠ ಕಲಿಸುತ್ತೀವಿ ಎಂದು ಯುವಕನೋರ್ವ ಕಾಂಗ್ರೆಸ್​ ಸಭೆಯಲ್ಲಿ ಮಾಜಿ ಸಚಿವ ಯು ಟಿ ಖಾದರ್‌ ಅವರ ಎದುರೇ ಹೇಳಿಕೆ ನೀಡಿದ್ದಾನೆ.

ಮೈಸೂರು ಕಾಂಗ್ರೆಸ್ ಪ್ರಚಾರ ಸಭೆ..

ಬನ್ನಿಕುಪ್ಪೆಯಲ್ಲಿ ನಡೆದ ಮಾಜಿ ಸಚಿವ ಯು ಟಿ ಖಾದರ್​ ನೇತೃತ್ವದ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಕಳೆದ ಚುನಾವಣೆಯಲ್ಲಿ ಹೆಚ್‌.ವಿಶ್ವನಾಥ್‌ ಗೆಲ್ಲಲ್ಲು ಅವಕಾಶವಿರಲಿಲ್ಲ. ಆದರೆ, ಜೆಡಿಎಸ್‌ ವರಿಷ್ಠರ ಮುಖನೋಡಿ ಗೆಲ್ಲಿಸಿದ್ದೆವು. ಆದರೆ, ಗೆದ್ದ ನಂತರ ಒಮ್ಮೆಯೂ ಇತ್ತ ಕಡೆ ತಿರುಗಿ ನೋಡಿಲ್ಲವೆಂದು ಅಸಮಾಧಾನ ಹೊರಹಾಕಿದರು. ಈ ಬಾರಿ ಅವರಿಗೆ ತಕ್ಕ ಪಾಠ ಕಲಿಸುವುದಾಗಿ ಖಾದರ್‌ಗೆ ಭರವಸೆ ನೀಡಿದರು. ಈ ವೇಳೆಯಲ್ಲಿ ಯು ಟಿ ಖಾದರ್ ಮಾತನಾಡಿ, ಜನವರಿ ತಿಂಗಳನಲ್ಲಿ ಬಿಜೆಪಿ ಸರ್ಕಾರ ಬೀಳಲಿದೆ ಎಂದು ಭವಿಷ್ಯ ನುಡಿದರು.

For All Latest Updates

TAGGED:

ABOUT THE AUTHOR

...view details