ಕರ್ನಾಟಕ

karnataka

ETV Bharat / state

ಹುಟ್ಟುಹಬ್ಬಕ್ಕೆ ಕೂಡಿಟ್ಟಿದ್ದ ಹಣ ಸಿಎಂ ಪರಿಹಾರ ನಿಧಿಗೆ ನೀಡಿದ ಬಾಲಕ - ಹುಟ್ಟುಹಬ್ಬ

ಕೊರೊನಾ ಉಪಟಳದಿಂದಾಗಿ ದೇಶ ಸಂಕಷ್ಟದಲ್ಲಿದ್ದು, ಅನೇಕ ಮಂದಿ ಸರ್ಕಾರದ ನೆರವಿಗೆ ಧಾವಿಸಿದ್ದಾರೆ. ಇದರ ಬೆನ್ನಲ್ಲೇ ಮೈಸೂರು ಜಿಲ್ಲೆಯಲ್ಲಿ ಬಾಲಕನೊಬ್ಬ ತನ್ನ ಹುಟ್ಟುಹಬ್ಬಕ್ಕೆ ಕೂಡಿಟ್ಟಿದ್ದ ಹಣವನ್ನು ಸಿಎಂ ಪರಿಹಾರ ನಿಧಿಗೆ ನೀಡಿ ಗಮನ ಸೆಳೆದಿದ್ದಾನೆ.

cm relief fund
ಸಿಎಂ ಪರಿಹಾರ ನಿಧಿ

By

Published : Apr 9, 2020, 7:13 PM IST

ಮೈಸೂರು: ಜಿಲ್ಲೆಯಲ್ಲಿ ಬಾಲಕನೊಬ್ಬ ಕೊರೊನಾ ವಿರುದ್ಧ ಹೋರಾಡಲು ತನ್ನ ಹುಟ್ಟುಹಬ್ಬಕ್ಕೆ ಕೂಡಿಟ್ಟಿದ್ದ ಹಣವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಿ ಗಮನ ಸೆಳೆದಿದ್ದಾನೆ.

ಮಹದೇವಪುರ ನಿವಾಸಿಗಳಾದ ಜಯಸಿಂಹ ಶ್ರೀಧರ್ ಹಾಗೂ ಶ್ರೀಲಕ್ಷ್ಮಿ ದಂಪತಿ ಪುತ್ರ, ಕೇಂದ್ರಿಯ ವಿದ್ಯಾಲಯ ಶಾಲೆಯ 6ನೇ ತರಗತಿ ವಿದ್ಯಾರ್ಥಿಯಾದ ಪ್ರಮುಖಸಿಂಹ ತಾನು ಹುಟ್ಟುಹಬ್ಬಕ್ಕೆ ಕೂಡಿಟ್ಟಿದ್ದ ಹಣವನ್ನು ಸಿಎಂ ಪರಿಹಾರ ನಿಧಿಗೆ ನೀಡಿ ಗಮನ ಸೆಳೆದಿದ್ದಾನೆ.

ಸಚಿವ ವಿ.ಸೋಮಣ್ಣ ಅವರಿಗೆ ಹಣ ನೀಡಿದ ಪ್ರಮುಖಸಿಂಹ, ಕೊರೊನಾ ಮಹಾಮಾರಿಯಿಂದಾಗಿ ದೇಶ ಸಂಕಷ್ಟದಲ್ಲಿದೆ. ಈ ವೇಳೆ ಹುಟ್ಟುಹಬ್ಬ ಆಚರಿಸಿಕೊಳ್ಳುವುದು ಒಳ್ಳೆಯದಲ್ಲ. ಹೀಗಾಗಿ ಹುಟ್ಟುಹಬ್ಬಕ್ಕೆ ಕೂಡಿಟ್ಟಿದ್ದ ಹಣ ನೀಡುತ್ತಿರುವುದಾಗಿ ಹೇಳಿದ್ದಾನೆ. ಬಾಲಕನ ಈ ಕಾರ್ಯಕ್ಕೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ABOUT THE AUTHOR

...view details