ಕರ್ನಾಟಕ

karnataka

ETV Bharat / state

ಎಣ್ಣೆ ಪಾರ್ಟಿ ಮಾಡಲು ಹೋದ ಯುವಕ ಶವವಾಗಿ ಪತ್ತೆ - ಎಣ್ಣೆ ಪಾರ್ಟಿ ಮಾಡಲು ಹೋದ ಯುವಕ ಶವವಾಗಿ ಪತ್ತೆ

ಎಣ್ಣೆ ಪಾರ್ಟಿ ಮಾಡುತ್ತಿದ್ದ ಯುವಕನ ಮೇಲೆ ಅಪರಿಚಿತರು ಹಲ್ಲೆ ನಡೆಸಿದ್ದು, ಯುವಕ ಶವವಾಗಿ ಪತ್ತೆಯಾಗಿರುವ ಘಟನೆ ನಂಜನಗೂಡು ತಾಲೂಕಿನ ಬಿಳಿಗೆರೆ ಪೊಲೀಸ್​​ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

Boy Dead body found at canal in Mysore
ಎಣ್ಣೆ ಪಾರ್ಟಿ ಮಾಡಲು ಹೋದ ಯುವಕ

By

Published : Mar 7, 2020, 10:58 AM IST

Updated : Mar 7, 2020, 12:58 PM IST

ಮೈಸೂರು: ಎಣ್ಣೆ ಪಾರ್ಟಿ ಮಾಡುತ್ತಿದ್ದ ಯುವಕನ ಮೇಲೆ ಅಪರಿಚಿತರು ಹಲ್ಲೆ ನಡೆಸಿದ್ದು, ಯುವಕ ಶವವಾಗಿ ಪತ್ತೆಯಾಗಿರುವ ಘಟನೆ ನಂಜನಗೂಡು ತಾಲೂಕಿನ ಬಿಳಿಗೆರೆ ಪೊಲೀಸ್​​ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಎಣ್ಣೆ ಪಾರ್ಟಿ ಮಾಡಲು ಹೋದ ಯುವಕ ಶವವಾಗಿ ಪತ್ತೆ

ನಂಜನಗೂಡು ತಾಲೂಕಿನ ತಗಡೂರು ಗ್ರಾಮದ ನಿವಾಸಿಯಾದ ಮನೋಜ್ ಎಂಬಾತ ಶವವಾಗಿ ಪತ್ತೆಯಾದ ವ್ಯಕ್ತಿ. ಮನೋಜ್​ ಮತ್ತು ಸ್ನೇಹಿತ ವಿಜಯ್ ಕುಮಾರ್ ಪಾರ್ಟಿ ಮಾಡುವುದಕ್ಕಾಗಿ ಬೈಕ್ ನಲ್ಲಿ ಹೋಗಿದ್ದರು. ಆದರೆ ಮನೋಜ್ ಮರುದಿನ ಶವವಾಗಿ ನಾಲೆಯಲ್ಲಿ ಪತ್ತೆಯಾಗಿದ್ದಾನೆ.

ಘಟನೆ ಹಿನ್ನೆಲೆ :ಮನೋಜ್ ಹಾಗೂ ಸ್ನೇಹಿತ ವಿಜಯ್ ಕುಮಾರ್ ಇಬ್ಬರು ಪಾರ್ಟಿ ಮಾಡುವುದಕ್ಕಾಗಿ ರಾಮಚಂದ್ರರಾವ್ ನಾಲೆ ಬಳಿ ತೆರಳಿದ್ದರು. ಈ ಸಂದರ್ಭ ಅಪರಿಚಿತರಿಬ್ಬರು ಪಾರ್ಟಿಗೆ ಬಂದು ಸೇರಿಕೊಂಡರು. ಮನೋಜ್​, ವಿಜಯ್​ಕುಮಾರ್​ ಹಾಗೂ ಅಪರಿಚಿತ ವ್ಯಕ್ತಿಗಳ ನಡುವೆ ವಾಗ್ವಾದ ಆರಂಭವಾಗಿದೆ. ಮಾತಿಗೆ ಮಾತು ಬೆಳೆದು ಹೊಡೆದಾಟ ಮಾಡಿಕೊಂಡಿದ್ದು, ವಿಜಯ್ ಕುಮಾರ್ ಬೈಕ್ ನಾಲೆಗೆ ತಳ್ಳಿದ್ದಾರೆ. ಬಳಿಕ ವಿಜಯ್ ಕುಮಾರ್ ಸ್ಥಳದಿಂದ ಪರಾರಿಯಾಗಿದ್ದಾನೆ. ಸ್ವಲ್ಪ ಸಮಯದ ನಂತರ ಹಿಂದಿರುಗಿ ಬಂದಾಗ ಸ್ಥಳದಲ್ಲಿ ಮನೋಜ್ ಹಾಗೂ ಅಪರಿಚಿತರು ಇರಲಿಲ್ಲ.

ಕೂಡಲೇ ವಿಜಯ್ ಕುಮಾರ್ ಮನೋಜ್ ಕುಮಾರ್ ಕುಟುಂಬದವರಿಗೆ ವಿಷಯ ತಿಳಿಸಿ ಸುತ್ತಮುತ್ತ ಹುಡುಕಿದ್ದಾರೆ. ಮರುದಿನ ಮನೋಜ್ ನಾಲೆಯಲ್ಲಿ ಶವವಾಗಿ ಸಿಕ್ಕಿದ್ದು, ಅವನ ಕಿವಿ, ಹುಬ್ಬುಗಳು ಸೇರಿದಂತೆ ಮೈಮೇಲೆ ಗಾಯಗಳಾಗಿವೆ‌.

ಈ ಕುರಿತು ಮನೋಜ್ ಕುಟುಂಬವರು ಬಿಳಿಗೆರೆ ಪೊಲೀಸ್​​​ ಠಾಣೆಯಲ್ಲಿ ದೂರು ದಾಖಲಿಸಿದ್ದು, ತನಿಖೆ ಮುಂದುವರೆದಿದೆ.

Last Updated : Mar 7, 2020, 12:58 PM IST

For All Latest Updates

TAGGED:

ABOUT THE AUTHOR

...view details