ಕರ್ನಾಟಕ

karnataka

ETV Bharat / state

ಪ್ರೀತಿಗೆ ನಿರಾಕರಿಸಿದ್ದಕ್ಕೆ ಯುವತಿ ಮೇಲೆ ರೇಜರ್​​ನಿಂದ ಹಲ್ಲೆ.... ಪಾಗಲ್​ ಪ್ರೇಮಿ ಅರೆಸ್ಟ್​​​ - ಮೈಸೂರಿನಲ್ಲಿ ಪ್ರೀತಿ ನಿರಾಕರಿಸಿದ ಯುವತಿ ಮೇಲೆ ಹಲ್ಲೆ

ಪ್ರೀತಿಸಲು ನಿರಾಕರಿಸಿದ ಯುವತಿ ಮೇಲೆ ಯುವಕ ಹಲ್ಲೆ ಮಾಡಿಸಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

love
ಪ್ರೀತಿಗೆ ನಿರಾಕರಿಸಿದ್ದಕ್ಕೆ ಹಲ್ಲೆ

By

Published : Dec 6, 2019, 2:41 PM IST

ಮೈಸೂರು:ಪ್ರೀತಿಸಲು ನಿರಾಕರಿಸಿದ ಯುವತಿ ಮೇಲೆ ಮಾರಣಾಂತಿಕ ಹಲ್ಲೆ ಮಾಡಿಸಿ ಪರಾರಿಯಾಗುತ್ತಿದ್ದ ಯುವಕನನ್ನು ವಿ.ವಿ ಪುರಂ ಪೋಲಿಸರು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಪಿರಿಯಾಪಟ್ಟಣದ ಮಂಚೇಗೌಡ ಕೊಪ್ಪಲಿನ ನಿವಾಸಿಯಾದ ಅಮೃತ್ (21) ಎಂಬಾತನು ಪ್ರೀತಿ ಮಾಡು ಎಂದು ಹೆಬ್ಬಾಳ್ ಯುವತಿಯೊಬ್ಬಳನ್ನು ಪೀಡಿಸುತ್ತಿದ್ದ. ಈ ಪಾಗಲ್ ಪ್ರೇಮಿಯ ಪ್ರೀತಿಯನ್ನು ಯುವತಿ ನಿರಾಕರಿಸಿದ್ದಾಳೆ. ಇದರಿಂದ ಕೋಪಗೊಂಡ ಅಮೃತ್ ತನ್ನ ಸ್ನೇಹಿತರನ್ನು ಕರೆದುಕೊಂದು ಹೋಗಿ ಯುವತಿ ನಡೆದುಕೊಂಡು ಹೋಗುವ ವೇಳೆ , ಆಕೆಯ ಮೇಲೆ ತನ್ನ ಸ್ನೇಹಿತರಿಂದ ರೇಜರ್​​​ನಿಂದ ಹಲ್ಲೆ ಮಾಡಿಸಿದ್ದಾನೆ. ಹಲ್ಲೆ ಮಾಡಿದ ಆರೋಪಿಗಳು ಪರಾರಿಯಾಗಿದ್ದಾರೆ.

ಪ್ರೀತಿಗೆ ನಿರಾಕರಿಸಿದ್ದಕ್ಕೆ ಹಲ್ಲೆ

ಇನ್ನು ದೂರಿನ ಮೇರೆಗೆ ವಿಚಾರಣೆ ಮಾಡಿದ ಪೋಲಿಸರು ಅಮೃತ್​​ನನ್ನು ಬಂಧಿಸಿ, ಹಲ್ಲೆ ಮಾಡಿದ ಆರೋಪಿಗಳ ಶೋಧ ಕಾರ್ಯ ನಡೆಸುತ್ತಿದ್ದಾರೆ, ಇನ್ನೂ ಈ ಸಂಬಂಧ ವಿ.ವಿ ಪುರಂ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ABOUT THE AUTHOR

...view details