ಕರ್ನಾಟಕ

karnataka

ETV Bharat / state

ವಿದ್ಯಾರ್ಥಿ ವೇತನಕ್ಕಾಗಿ ಎನ್‍ಎಸ್‍ಪಿ,ಎಸ್‍ಎಸ್‍ಪಿ ಎರಡು ಯೋಜನೆಗಳಿಗೆ ಅರ್ಜಿ ಸಲ್ಲಿಸಿ: ಫಿರ್ದೋಷ್ - ಮೈಸೂರು ವಿದ್ಯಾರ್ಥಿ ವೇತನ ಅರ್ಜಿ ಸುದ್ದಿ

ಭಾರತ ಸರ್ಕಾರದ ಎನ್‍ಎಸ್‍ಪಿ(National scholarship portal) ಯೋಜನೆ ಹಾಗೂ ರಾಜ್ಯ ಸರ್ಕಾರದ ಎಸ್‍ಎಸ್‍ಪಿ (State scholarship portal)ಯೋಜನೆ ಎರಡರಲ್ಲೂ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಬೇಕು ಎಂದು ಬೆಂಗಳೂರು ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯ ಸಹಾಯಕ ನಿದೇರ್ಶಕರಾದ ಆಯಿಷಾ ಫಿರ್ದೋಷ್ ಅವರು ಹೇಳಿದರು.

ತರಬೇತಿ ಕಾರ್ಯಾಗಾರದ ಉದ್ಘಾಟನೆ

By

Published : Nov 12, 2019, 3:42 PM IST

ಮೈಸೂರು:ಅಲ್ಪಸಂಖ್ಯಾತರ ವಿದ್ಯಾರ್ಥಿ ವೇತನಕ್ಕೆ ಸಂಬಂಧಿಸಿದಂತೆ ಭಾರತ ಸರ್ಕಾರದ ಎನ್‍ಎಸ್‍ಪಿ (National scholarship portal) ಯೋಜನೆ ಹಾಗೂ ರಾಜ್ಯ ಸರ್ಕಾರದ ಎಸ್‍ಎಸ್‍ಪಿ (State scholarship portal)ಯೋಜನೆ ಎರಡರಲ್ಲೂ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಬೇಕು ಎಂದು ಬೆಂಗಳೂರು ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯ ಸಹಾಯಕ ನಿದೇರ್ಶಕರಾದ ಆಯಿಷಾ ಫಿರ್ದೋಷ್ ಅವರು ಹೇಳಿದರು.

ಕರ್ನಾಟಕ ಸರ್ಕಾರ ಮತ್ತು ಮೈಸೂರು ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದ ಕರ್ನಾಟಕ ಕಲಾಮಂದಿರದಲ್ಲಿ ಆಯೋಜಿಸಿದ್ದ ವಿಭಾಗೀಯ ಮಟ್ಟದ ಒಂದು ದಿನದ ತರಬೇತಿ ಕಾರ್ಯಾಗಾರವನ್ನುದ್ದೇಶಿಸಿ ಮಾತನಾಡಿದ ಅವರು ಮೈಸೂರು ಜಿಲ್ಲೆಯ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಸಾರ್ವಜನಿಕ ಶಿಕ್ಷಣ ಇಲಾಖೆಗೆ ಸಂಬಂಧಿಸಿದಂತೆ ಸಮಸ್ಯೆಗಳನ್ನು ಹೇಳಿದ್ದು, ಎಲ್ಲಾ ಗೊಂದಲಗಳಿಗೂ ನಿವಾರಣೆ ಮಾಡುವುದಾಗಿ ತಿಳಿಸಿದರು.

ರಾಜ್ಯದಲ್ಲಿ ಸಾಮಾಜ ಕಲ್ಯಾಣ ಇಲಾಖೆ, ಬುಡುಕಟ್ಟು ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ತಾಂತ್ರಿಕ ಶಿಕ್ಷಣ ಇಲಾಖೆ, ವೈದ್ಯಕೀಯ ಶಿಕ್ಷಣ ಇಲಾಖೆ ಹಾಗೂ ಆಯುಷ್ ಇಲಾಖೆ ವಿದ್ಯಾರ್ಥಿಗಳಿಗೆ ಆಯಾ ಇಲಾಖೆ ನಿಯಾಮಾನುಸಾರ ವೇತನವನ್ನು ನೀಡುತ್ತಿದ್ದು, ಎಲ್ಲರಿಗೂ ಸಿಂಗಲ್ ಕೋಟ್‍ನಲ್ಲಿ ನೀಡುವ ಸಲುವಾಗಿ ರಾಜ್ಯದಿಂದ ಕಳೆದ ವರ್ಷ ಸಿಎಸ್‍ಎಸ್ (Common State scholarship)ನ್ನು ಮಾಡಲಾಯಿತು ಎಂದು ಹೇಳಿದರು.

ಇದಕ್ಕೂ ಮುಂಚಿತವಾಗಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ನಾಗರತ್ನ, ಜಿಲ್ಲಾಧಿಕಾರಿಗಳ ಹಂತದಲ್ಲಿ ಹಲವು ಬಾರಿ ಸಭೆಗಳನ್ನು ಮಾಡಿದ್ದು, ಕೆಲವೊಂದು ಸಮಸ್ಯೆಗಳು ಇಂದಿಗೂ ಬಗೆಹರಿದಿರುವುದಿಲ್ಲ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸೌಲಭ್ಯವನ್ನು ವಿದ್ಯಾರ್ಥಿಗಳಿಗೆ ಒದಗಿಸುವುದು ನಮ್ಮ ಕರ್ತವ್ಯ. ಹೊಸದಾಗಿ ಎಸ್‍ಎಸ್‍ಪಿ ತಂತ್ರಾಂಶವನ್ನು ಪ್ರಾರಂಭಿಸಿದ್ದು, ವಿದ್ಯಾರ್ಥಿಗಳು ಜೀವನವಿಡಿ ಇದರ ಪ್ರಯೋಜನ ಪಡೆದುಕೊಳ್ಳುವಂತೆ ಆಗಬೇಕು ಎಂದರು.

ABOUT THE AUTHOR

...view details