ಮೈಸೂರು:ಎರಡು ಚಿರತೆಗಳು ಚೆಕ್ ಪೋಸ್ಟ್ ದಾಟಿ ಹೋಗುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಎಲ್ಲರನ್ನೂ ಬೆಚ್ಚಿ ಬೀಳಿಸಿದೆ.
ಗಡಿ ದಾಟಿದ ಚಿರತೆಗಳು: ಸಾರ್ವಜನಿಕರಲ್ಲಿ ಹೆಚ್ಚಿದ ಆತಂಕ - kannada news
ಚಿರತೆಗಳು ಗಡಿ ಭಾಗ ದಾಟುತ್ತಿರುವ ದೃಶ್ಯಗಳು ವೈರಲ್ ಆಗಿದ್ದು, ಜನರ ಆತಂಕ ಹೆಚ್ಚಾಗಲು ಕಾರಣ ಎನ್ನಲಾಗಿದೆ.
ಚಿರತೆಗಳು
ಚಿರತೆಗಳು ಮೈಸೂರು - ಕೇರಳ ಗಡಿಭಾಗವಾಗಿರುವ ಬಾವಲಿ ಚೆಕ್ ಪೋಸ್ಟ್ ದಾಟಿ ಹೋಗುತ್ತಿರುವ ವಿಡಿಯೋ ಸಿ.ಸಿ.ಟಿವಿಯಲ್ಲಿ ಸೆರೆಯಾಗಿದೆ. ಒಂದರ ಹಿಂದೆ ಮತ್ತೊಂದು ಹೆಜ್ಜೆ ಹಾಕಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಅದರಲ್ಲಿ ಬ್ಲಾಕ್ ಪ್ಯಾಂಥರ್ ಚಿರತೆಯೊಂದು ಇದೆ. ಈ ಚಿರತೆಗಳು ಗಡಿ ಭಾಗ ದಾಟಿರುವ ಕಾರಣ ನಾಡಿನತ್ತ ಲಗ್ಗೆ ಇಡುವ ಸಾಧ್ಯತೆ ಹೆಚ್ಚಿದೆ. ಇದು ಜನರ ಆತಂಕಕ್ಕೆ ಎಡೆಮಾಡಿಕೊಟ್ಟಿದೆ.