ಮೈಸೂರು: ರಸ್ತೆ ಕಾಮಗಾರಿಯಲ್ಲಿ ನಕಲಿ ಬಿಲ್ ಸೃಷ್ಟಿಸಿ ಪಾಲಿಕೆಯ ಬೊಕ್ಕಸದಿಂದಕೋಟ್ಯಾಂತರ ರೂಪಾಯಿ ಸೋರಿಕೆಗೆ ಕಾರಣವಾದ ಆರೋಪದ ಮೇಲೆ ಇಬ್ಬರು ಎಂಜಿನಿಯರ್ಗಳನ್ನು ಅಮಾನತು ಮಾಡಲಾಗಿದೆ.
ನಕಲಿ ಬಿಲ್ ಸೃಷ್ಟಿ: ಇಬ್ಬರು ಎಂಜಿನಿಯರ್ಗಳು ಅಮಾನತು - etv bharatha, kannada news, bogus bill, mysore, suspend engineers
ಬೋಗಸ್ ಬಿಲ್ ಸೃಷ್ಟಿಸಿದ ಆರೋಪದಡಿ ಇಬ್ಬರು ಎಂಜಿನಿಯರಿಂಗ್ಗಳ ಅಮಾನತು ಬಳಿಕ ಇನ್ನೂ ಹಲವರ ಮೇಲೆ ಶಂಕೆ ವ್ಯಕ್ತವಾದ ಪರಿಣಾಮ ತನಿಖೆ ಮುಂದುವರಿದಿದೆ ಎಂದು ತಿಳಿದು ಬಂದಿದೆ.
ಮೈಸೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಬರುವ ಎಂ.ಜಿ.ರಸ್ತೆಯಲ್ಲಿ ಡಾಂಬರೀಕರಣ ಸಂಬಂಧ ₹ 1.10 ಕೋಟಿ ದುರುಪಯೋಗಪಡಿಸಿಕೊಂಡಿದ್ದಾರೆ ಎಂಬ ದೂರನ್ನು ಎಸಿಬಿಗೆ ನೀಡಲಾಗಿತ್ತು. ಈ ಕುರಿತು ತನಿಖೆ ನಡೆಸಿದ ಎಸಿಬಿ ಅಧಿಕಾರಿಗಳು ಪಾಲಿಕೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಸುನಿಲ್ ಬಾಬು ಹಾಗೂ ಕಿರಿಯ ಎಂಜಿನಿಯರ್ ಎಂ.ವಿ.ಮೋಹನಕುಮಾರಿ ಎಂಬವರನ್ನು ಸೇವೆಯಿಂದ ಅಮಾನತುಗೊಳಿಸಿದ್ದಾರೆ.
ಈ ಕಾಮಗಾರಿ ನಡೆಸಿದ ಪ್ರಥಮ ದರ್ಜೆ ಗುತ್ತಿಗೆದಾರ ಕರೀಗೌಡ ಎಂಬುವರನ್ನು ಕಪ್ಪು ಪಟ್ಟಿಗೆ ಸೇರಿಸಲು ತಿರ್ಮಾನಿಸಲಾಗಿದ್ದು, ಪ್ರಕರಣದಲ್ಲಿ ಇನ್ನೂ ಹಲವರ ಮೇಲೆ ಕೈವಾಡವಿರುವ ಶಂಕೆ ವ್ಯಕ್ತವಾಗಿದ್ದು, ತನಿಖೆ ಮುಂದುವರೆದಿದೆ ಎನ್ನಲಾಗಿದೆ.
TAGGED:
ಮೈಸೂರು ಮಹಾನಗರ ಪಾಲಿಕೆ ಸುದ್ದಿ