ಮೈಸೂರು: ರಕ್ತದಾನ ಮಹಾದಾನ, ಜೀವ ರಕ್ಷಣೆಯಾದ ರಕ್ತವನ್ನು ದಾನ ಮಾಡಿ ಜೀವ ಉಳಿಸಿ ಎಂದು ಪೊಲೀಸರೇ ರಕ್ತದಾನ ಮಾಡುವ ಮೂಲಕ ಸಂಚಾರ ನಿಯಮಗಳ ಕುರಿತು ಜಾಗೃತಿ ಮೂಡಿಸಿದರು.
ಮೈಸೂರು: ಜೀವ ರಕ್ಷಣೆಗೆ ರಕ್ತದಾನ ಮಾಡಿದ ಆರಕ್ಷಕರು - 31st National Road Safety Suptah
ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹದ ಅಂಗವಾಗಿ ದೇವರಾಜ ಸಂಚಾರ ಠಾಣೆಯ ಪೊಲೀಸರು ರಕ್ತದಾನ ಮಾಡುವ ಮೂಲಕ ಸಂಚಾರಿ ಜಾಗೃತಿ ಮೂಡಿಸಿದರು.
![ಮೈಸೂರು: ಜೀವ ರಕ್ಷಣೆಗೆ ರಕ್ತದಾನ ಮಾಡಿದ ಆರಕ್ಷಕರು blood-donation-camp-by-traffic-police](https://etvbharatimages.akamaized.net/etvbharat/prod-images/768-512-5709355-thumbnail-3x2-mys.jpg)
blood-donation-camp-by-traffic-police
ದೇವರಾಜ ಸಂಚಾರ ಠಾಣೆಯ ಪೊಲೀಸರಿಂದ ರಕ್ತದಾನ
ಮೈಸೂರು ನಗರ ಪೊಲೀಸ್ ಇಲಾಖೆ ವತಿಯಿಂದ 31ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹದ ಅಂಗವಾಗಿ ದೇವರಾಜ ಸಂಚಾರ ಠಾಣೆಯ ಪೊಲೀಸರು, ನಂಜರಾಜ ಬಹದ್ದೂರ್ ಛತ್ರದಲ್ಲಿ ರಕ್ತದಾನ ಶಿಬಿರವನ್ನು ಏರ್ಪಡಿಸಿದ್ದರು. ಹಲವು ಪೊಲೀಸರು ತಾವೇ ಖುದ್ದಾಗಿ ಬಂದು ರಕ್ತದಾನ ಮಾಡುವ ಮೂಲಕ ಸಮಾಜಕ್ಕೆ ರಕ್ತದಾನದ ಮಹತ್ವ ಸಾರಿದರು.
ಅಲ್ಲದೇ ನರಸಿಂಹರಾಜ ಒಡೆಯರ್ ಸಂಚಾರ ಠಾಣಾ ಪೊಲೀಸರು ಅಪಘಾತದಿಂದ ಏನೆಲ್ಲ ತೊಂದರೆ ಎದುರಾಗಲಿದೆ ಎಂಬುವುದರ ಬಗ್ಗೆ ಜಾಗೃತಿ ಮೂಡಿಸಲು ಅಣುಕು ಗಾಯಾಳುಗಳ ಮೂಲಕ ಲಷ್ಕರ್ ಠಾಣೆಯ ಮುಂದಿನಿಂದ ರ್ಯಾಲಿ ಹೊರಟು, ಕೆ.ಆರ್.ಆಸ್ಪತ್ರೆ ವೃತ್ತ ತಲುಪಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸಿದರು.