ಮೈಸೂರು: ಮಾನಹಾನಿ ವರದಿ ಪ್ರಕಟಿಸುತ್ತೇವೆ ಎಂದು ಶಾಸಕರೊಬ್ಬರನ್ನು ಹೆದರಿಸಲು ಬಂದ ವರದಿಗಾರನೊಬ್ಬನನ್ನು ಕುವೆಂಪು ನಗರ ಪೊಲೀಸರು ಬಂಧಿಸಿದ್ದಾರೆ.
ಶಾಸಕರ ಬ್ಲಾಕ್ ಮೇಲ್ - ಹಣಕ್ಕೆ ಬೇಡಿಕೆ ಇಟ್ಟ ಪತ್ರಕರ್ತ, ವೈದ್ಯನ ಬಂಧನ - ಮೈಸೂರು
ಶಾಸಕರೊಬ್ಬರನ್ನು ಹೆದರಿಸಲು ಬಂದ ವರದಿಗಾರನೋರ್ವನನ್ನು ಇಲ್ಲಿನ ಪೊಲೀಸರು ಬಂಧಿಸಿದ್ದಾರೆ. ಆದರೆ, ಪ್ರಕರಣಕ್ಕೆ ಸಂಬಂಧಪಟ್ಟಂತೆ ಇನ್ನೂ ಐವರು ತಲೆಮರೆಸಿಕೊಂಡಿದ್ದು, ಆರೋಪಿಗಳಿಗಾಗಿ ಪೊಲೀಸರು ಶೋಧ ಕಾರ್ಯ ನಡೆಸಿದ್ದಾರೆ.
ಇಂದು ಖಾಸಗಿ ಹೋಟೆಲ್ನಲ್ಲಿ ಈ ಬಗ್ಗೆ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಮೈಸೂರಿನ ಕೃಷ್ಣರಾಜ ಕ್ಷೇತ್ರದ ಶಾಸಕ ಎಸ್.ಎ ರಾಮದಾಸ್, ತಮ್ಮ ಬಗ್ಗೆ ಮಾನಹಾನಿ ವರದಿ ಪ್ರಕಟಿಸುವ ಸಂಬಂಧ ಕಳೆದ 1 ವಾರದಿಂದ ಪತ್ರಿಕಾ ಸಂಪಾದಕ ಹಾಗೂ ವರದಿಗಾರ ಸೇರಿದಂತೆ ಹಲವು ವ್ಯಕ್ತಿಗಳು ಸ್ಥಳೀಯ ವೈದ್ಯರ ಮೂಲಕ 25 ಲಕ್ಷ ರೂ. ನೀಡುವಂತೆ ನನ್ನನ್ನು ಹೆದರಿಸುತ್ತಿದ್ದಾರೆ ಎಂದು ಆರೋಪಿಸಿರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಿಲಾಗಿದ್ದು, ಇದರಲ್ಲಿ ಓರ್ವ ಜಾಮೀನು ಪಡೆದು ಹೊರಬಂದಿದ್ದಾನೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಇನ್ನು ಐವರು ತಲೆಮರೆಸಿಕೊಂಡಿದ್ದಾರೆ. ಆರೋಪಿಗಳಿಗಾಗಿ ಕುವೆಂಪು ನಗರ ಪೊಲೀಸರು ಶೋಧ ಕಾರ್ಯ ನಡೆಸಿದ್ದಾರೆ ಎಂದು ಶಾಸಕ ರಾಮದಾಸ್ ತಿಳಿಸಿದರು. ಈ ಬಗ್ಗೆ ತಮ್ಮ ಸಹಾಯಕ ಮುದ್ದುಕೃಷ್ಣ ಎಂಬವರ ಮೂಲಕ ಶಾಸಕರು ಕುವೆಂಪು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.