ಮೈಸೂರು :ನಾವು ಯೂಟ್ಯೂಬ್ ವರದಿಗಾರರು ಎಂದು ಬ್ಲ್ಯಾಕ್‌ಮೇಲ್ ಮಾಡುಲು ಯತ್ನಿಸಿರುವ ಘಟನೆ ನಗರದಲ್ಲಿ ನಡೆದಿದೆ. ಅಶೋಕ ರಸ್ತೆಯಲ್ಲಿರುವ ಉಮರ್ ಶರೀಫ್ ಎಂಬುವರ ಮನೆಗೆ ನಾವು ಯುಟ್ಯೂಬ್ ಚಾನಲ್ ವರದಿಗಾರರು, ನಿಮ್ಮ ಮನೆಯಲ್ಲಿ ಅಕ್ರಮ ಗ್ಯಾಸ್ ರೀ ಫಿಲ್ಲಿಂಗ್ ನಡೀತಿದೆ ಎಂದು ಅಭಿಲಾಶ್, ಮಣಿ, ಪ್ರದೀಪ್, ಬಸವರಾಜು ಹಾಗೂ ನವೀನ್ ಕುಮಾರ್ ಎಂಬುವರು ಬ್ಲ್ಯಾಕ್‌ಮೇಲ್ ಮಾಡಲು ಯತ್ನಿಸಿದ್ದಾರೆ.
ವರದಿಗಾರರೆಂದು ಬ್ಲ್ಯಾಕ್‌ಮೇಲ್‌ಗೆ ಯತ್ನಿಸಿದವರ ಬಂಧನ - ಮೈಸೂರು ವರದಿಗಾರರೆಂದು ಬ್ಲಾಕ್ ಮೇಲ್ಗೆ ಯತ್ನ
ಯುಟ್ಯೂಬ್ ನ್ಯೂಸ್ ಚಾನೆಲ್ ವರದಿಗಾರರೆಂದು ವ್ಯಕ್ತಿಯೊಬ್ಬನಿಗೆ ಬ್ಲ್ಯಾಕ್‌ಮೇಲ್ ಮಾಡಲು ಯತ್ನಿಸಿದ ಐವರನ್ನು ಸಾರ್ವಜನಿಕರು ಹಿಡಿದು ಪೊಲೀಸರಿಗೆ ಒಪ್ಪಿಸಿರುವ ಘಟನೆ ಮಂಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ..
![ವರದಿಗಾರರೆಂದು ಬ್ಲ್ಯಾಕ್‌ಮೇಲ್‌ಗೆ ಯತ್ನಿಸಿದವರ ಬಂಧನ blackmail case in mysuru](https://etvbharatimages.akamaized.net/etvbharat/prod-images/768-512-15678298-thumbnail-3x2-blackmail.jpg)
ವರದಿಗಾರರೆಂದು ಬ್ಲಾಕ್ ಮೆಲ್ ಗೆ ಯತ್ನಿಸಿದರ ಬಂಧನ
ಇದನ್ನು ಗಮನಿಸಿದ ಸಾರ್ವಜನಿಕರಿಗೆ ಅನುಮಾನ ಬಂದಿದೆ. ವಿಷಯದ ಕುರಿತು ತಕ್ಷಣ ಸ್ಥಳೀಯ ಮಂಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಂದಂತಹ ಪೊಲೀಸರು ಆ ಐವರನ್ನ ವಶಕ್ಕೆ ಪಡೆದು ತನಿಖೆ ನಡೆಸಿದಾಗ ಅವರು ನಕಲಿ ವರದಿಗಾರರೆಂದು ತಿಳಿದು ಬಂದಿದೆ. ಬ್ಲ್ಯಾಕ್‌ಮೇಲ್‌ಗೆ ಯತ್ನಿಸಿದ ಆರೋಪದಡಿ ಐವರನ್ನು ಬಂಧಿಸಿ, ನ್ಯಾಯಾಧೀಶರ ಮುಂದೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಪಿಸಿದ್ದಾರೆ.
ಇದನ್ನೂ ಓದಿ:ಖಾಕಿ ಲವ್ ದೋಖಾ ಆರೋಪ.. ವಿವಾಹಿತೆ ಜೊತೆ ಪ್ರೀತಿ, ಮದುವೆಗೆ ಪಟ್ಟು ಹಿಡಿದಿದ್ದಕ್ಕೆ ಕಾನ್ಸ್‌ಟೇಬಲ್ ಪರಾರಿ!