ಕರ್ನಾಟಕ

karnataka

ETV Bharat / state

ಮೈಸೂರಲ್ಲಿ ಕಮಲ ಅರಳಿಸಲು ಅರುಣ್ ಸಿಂಗ್ ಎಂಟ್ರಿ.. ಅರಮನೆಯಲ್ಲಿ ಯದುವೀರ್ ಜೊತೆ ಮಾತುಕತೆ - ಮೈಸೂರಿನಲ್ಲಿ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ನೇತೃತ್ವದಲ್ಲಿ ಮುಖಂಡರ ಸಭೆ

ಹಳೆ ಮೈಸೂರು ಭಾಗದಲ್ಲಿ ಬಿಜೆಪಿ ಅರಳಿಸಲು ಹಾಗೂ ಕಾರ್ಯಕರ್ತರಿಗೆ ಆತ್ಮವಿಶ್ವಾಸ ತುಂಬಲು ಪಕ್ಷದ ಮುಖಂಡರಿಂದ‌ ಸಲಹೆಯನ್ನು ಅರುಣ್ ಸಿಂಗ್ ಪಡೆದಿದ್ದಾರೆ ಎನ್ನಲಾಗಿದೆ.

ಮೈಸೂರಿನ ರಾಜ ವಂಶಸ್ಥರನ್ನ ಭೇಟಿ ಮಾಡಿದ ಅರುಣ್​ ಸಿಂಗ್
ಮೈಸೂರಿನ ರಾಜ ವಂಶಸ್ಥರನ್ನ ಭೇಟಿ ಮಾಡಿದ ಅರುಣ್​ ಸಿಂಗ್

By

Published : Aug 31, 2021, 3:23 PM IST

ಮೈಸೂರು: ಹಳೆ ಮೈಸೂರು ಭಾಗದಲ್ಲಿ 'ಕಮಲ' ಅರಳಿಸಲು ಪ್ಲಾನ್ ಮಾಡಿದ್ದು, ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ನೇತೃತ್ವದಲ್ಲಿ ಮುಖಂಡರ ಸಭೆ ಮಾಡಲಾಗುತ್ತಿದೆ. ನಗರದ ಚಾಮರಾಜ ಮೊಹಲ್ಲಾದಲ್ಲಿರುವ ಬಿಜೆಪಿ ಕಚೇರಿಯಲ್ಲಿ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಸಭೆ ನಡೆಸಿದರು.

ಮೈಸೂರಿನ ರಾಜ ವಂಶಸ್ಥರನ್ನ ಭೇಟಿ ಮಾಡಿದ ಅರುಣ್​ ಸಿಂಗ್

ಈ ಸಭೆಯಲ್ಲಿ ಸಚಿವ ಎಸ್‌‌.ಟಿ.ಸೋಮಶೇಖರ್, ಸಂಸದ ಪ್ರತಾಪ್​ ಸಿಂಹ, ಶಾಸಕರಾದ ಎಸ್.ಎ.ರಾಮದಾಸ್, ಎಲ್.ನಾಗೇಂದ್ರ, ನಿರಂಜನ್ ಕುಮಾರ್, ಎನ್.ಮಹೇಶ್, ಸೇರಿದಂತೆ ಪಕ್ಷದ ಮುಖಂಡರು ಸಭೆಯಲ್ಲಿ ಭಾಗಿಯಾಗಿದ್ದಾರೆ. ಹಳೆ ಮೈಸೂರು ಭಾಗದಲ್ಲಿ ಬಿಜೆಪಿ ಅರಳಿಸಲು ಹಾಗೂ ಕಾರ್ಯಕರ್ತರಿಗೆ ಆತ್ಮವಿಶ್ವಾಸ ತುಂಬಲು ಪಕ್ಷದ ಮುಖಂಡರಿಂದ‌ ಸಲಹೆಯನ್ನ ಅರುಣ್ ಸಿಂಗ್ ಪಡೆದಿದ್ದಾರೆ ಎನ್ನಲಾಗಿದೆ.

ಮೈಸೂರಿನ ರಾಜ ವಂಶಸ್ಥರನ್ನ ಭೇಟಿ ಮಾಡಿದ ಅರುಣ್​ ಸಿಂಗ್​

ಮೈಸೂರಿನ ರಾಜ ವಂಶಸ್ಥರನ್ನ ಭೇಟಿ ಮಾಡಿದ ಅರುಣ್​ ಸಿಂಗ್​ :

ಮೈಸೂರಿನ ರಾಜ ವಂಶಸ್ಥರನ್ನ ಭೇಟಿ ಮಾಡಿದ ಅರುಣ್​ ಸಿಂಗ್​

ಮೈಸೂರಿನ ರಾಜ ವಂಶಸ್ಥ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಅವರನ್ನು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್‌ ಸಿಂಗ್‌ ಭೇಟಿ ಮಾಡಿದರು.‌ ಈ ವೇಳೆ, ಯದುವೀರ್‌ ಹಾಗೂ ಪತ್ನಿ ತ್ರಿಷಿಕಾ ಕುಮಾರಿ ಅವರ ಕುಶಲೋಪರಿ ವಿಚಾರಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ.ಸೋಮಶೇಖರ್‌ ಉಪಸ್ಥಿತರಿದ್ದರು.

ABOUT THE AUTHOR

...view details